More

    ಚಿತ್ರರಂಗದಲ್ಲಿ 40 ವರ್ಷ ಮುಗಿಸಿದ ಜಗ್ಗೇಶ್​

    ಬೆಂಗಳೂರು: ‘ನವರಸ ನಾಯಕ’ ಜಗ್ಗೇಶ್​ ಅವರು ಇನ್ನು ಕೆಲವೇ ದಿನಗಳಲ್ಲಿ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 40 ವರ್ಷಗಳಾಗಿವೆ ಎಂದು ಕೆಲವು ದಿನಗಳ ಹಿಂದೆಯಷ್ಟೇ ಟ್ವೀಟ್​ ಮಾಡಿದ್ದರು. ಈಗ ಆ ದಿನ ಕೊನೆಗೂ ಬಂದಿದ್ದು, ಇಂದಿಗೆ ಜಗ್ಗೇಶ್​ ಚಿತ್ರರಂಗಕ್ಕೆ ಬಂದು 40 ವರ್ಷಗಳಾಗಿವೆ.

    ಇದನ್ನೂ ಓದಿ: ನಾನು ದೇವದೂತನಲ್ಲ; ನಟ ಸೋನು ಸೂದ್

    ಈ ಕುರಿತು ಟ್ವೀಟ್​ ಮಾಡಿರುವ ಅವರು, ತಾವು 1980ರ ನವೆಂಬರ್​ನ ಇದೇ ದಿನ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಎಂದು ಹೇಳುವುದರ ಜತೆಗೆ, ತಮ್ಮ ಬೆಳವಣಿಗೆಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

    ‘1980 ನವೆಂಬರ್​ 17ಕ್ಕೆ ಸಿನಿರಂಗಕ್ಕೆ ನಾ ಬಂದೆ. ಇಂದಿಗೆ 40 ವರ್ಷ. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕರು ಮತ್ತು ನಿರ್ಮಾಪಕರು, ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ, ಮಾಧ್ಯಮ, ಕನ್ನಡ ಮನಸ್ಸುಗಳು! ಅಪಮಾನಿಸಿದ ಸ್ನೇಹಕ್ಕೆ, ಗೆಲ್ಲುವೆ ಹೋಗು ಕರಿಯ ಎಂದು ಹರಿಸಿದ ಅಮ್ಮ, ಜೊತೆ ನಿಂತ ಪರಿಮಳ, ಕೋಮಲ್​ ಮತ್ತು ರಾಯರದಯೆಗೆ ಆಜನ್ಮ ಋಣಿ’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

    ಜಗ್ಗೇಶ್​ ಅವರು ‘ತರ್ಲೆ ನನ್ಮಗ’ ಮತ್ತು ‘ಭಂಡ ನನ್ನ ಗಂಡ’ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದರೂ, ಅನಂತ್​ ನಾಗ್​ ಅಭಿನಯದ ‘ಶ್ವೇತ ಗುಲಾಬಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅಲ್ಲಿಂದ ಶುರುವಾದ ಅವರ ಸಿನಿಜರ್ನಿ, ನಿರಂತರವಾಗಿ ಮುಂದುವರೆದಿದ್ದು, 120ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ನಟ ಅನುಪಮ್​ ಖೇರ್​ಗೆ ಮೂರನೇ ಮಗು!

    ಇನ್ನು ಜಗ್ಗೇಶ್​ ಅವರು ಚಿತ್ರರಂಗದಲ್ಲಿ ನಾಲ್ಕು ದಶಕಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ‘ನೆನಪಿರಲಿ’ ಪ್ರೇಮ್​, ತರುಣ್​ ಸುಧೀರ್​, ಸಂತೋಷ್​ ಆನಂದರಾಮ್​ ಸೇರದಿಂತೆ ಹಲವರು ಶುಭಾಶಯಗಳನ್ನು ಕೋರಿದ್ದಾರೆ.

    VIDEO| ಬಟ್ಟೆ ಖರೀದಿ ಬಿಟ್ಟು, ಅಮ್ಮನ ಹಳೇ ಸೀರೆಯನ್ನೇ ಶೇರ್ವಾನಿ ಮಾಡಿಕೊಂಡ ರಿತೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts