ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಸ್ಟಾರ್​ ನಟನ ದಾಂಪತ್ಯಕ್ಕೆ 40ರ ಸಂಭ್ರಮ; ಹೇಗಿತ್ತು ನೋಡಿ ಜಗ್ಗೇಶ್​-ಪರಿಮಳ ಪಾಲಿನ ಆ ವಿಶೇಷ ದಿನ

Jaggesh
Published on

ಬೆಂಗಳೂರು: ನವರಸ ನಾಯಕ, ರಾಜ್ಯಸಭಾ ಸದಸ್ಯ ಜಗ್ಗೇಶ್​ ಅವರಿಗೆ ಮಾರ್ಚ್​ ತಿಂಗಳು ತುಂಬಾ ವಿಶೇಷ ಎಂದು ಹೇಳಬಹುದಾಗಿದೆ. ಮಾರ್ಚ್​ 17ರಂದು ಆಪ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ 61ನೇ ಜನುಮದಿನವನ್ನು ಆಚರಿಸಿಕೊಂಡ ನಟ ಜಗ್ಗೇಶ್​ಗೆ ಇದೀಗ ವಿವಾಹ ವಾರ್ಷಿಕೋತ್ಸವದ ದಿನವನ್ನೂ ಸಂಭ್ರಮಿಸಿದ್ದಾರೆ. ಪತ್ನಿ ಪರಿಮಳ ಜತೆಗಿನ 40 ವರ್ಷದ ಪ್ರಯಾಣವನ್ನು ನೆನೆಪು ಮಾಡಿಕೊಂಡಿದ್ದಾರೆ. 1982ರ ಕಾಲಘಟ್ಟಕ್ಕೆ ಮತ್ತೆ ಜಾರಿದ್ದಾರೆ.

ಕನ್ನಡ ಚಿತ್ರರಂಗದ ತಾರಾ ಜೋಡಿಗಳಲ್ಲಿ ಹಲವರು ಲವ್ ಮಾಡಿ ಮದುವೆ ಆಗಿದ್ದಾರೆ. ನಟ ಜಗ್ಗೇಶ್ ಅವರದ್ದು ಕೂಡ ಲವ್ ಮ್ಯಾರೇಜ್. ಪರಿಮಳಾ ಅವರಿಗೆ ಸಿನಿಮಾ ನಂಟು ಇಲ್ಲದಿದ್ದರೂ ಜೊತೆಗಿನ ಪ್ರೇಮ್ ಕಹಾನಿ ಮಾತ್ರ ಯಾವುದೇ ಸಿನಿಮಾ ಕಥೆಗಿಂತ ಕಮ್ಮಿಯಿಲ್ಲ ಎಂದು ಹೇಳಬಹುದಾಗಿದೆ.

ಜಗ್ಗೇಶ್ ಹಾಗೂ ಪರಿಮಳಾ 1984ರ ಮಾರ್ಚ್ 22ರಂದು ಮದುವೆಯಾದರು. ಈ ವಿಶೇಷ ದಿನವನ್ನು ಜಗ್ಗೇಶ್ ಅವರು ತಮ್ಮದೇ ರೀತಿಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ವೈರಲ್ ಆಗಿದೆ. ಜಗ್ಗೇಶ್ ಮದುವೆ ವಿಚಾರ ಸಖತ್ ಸುದ್ದಿ ಆಗಿತ್ತು. ಅವರು ಮದುವೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಅಲ್ಲಿ ಅವರಿಗೆ ಜಯ ಸಿಕ್ಕಿತ್ತು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, 1984 ಮಾರ್ಚ್ 22 ನಾನು ಮದುವೆಯಾದ ದಿನ...ಇಂದು 40ವರ್ಷದ ಮದುವೆ ವಾರ್ಷಿಕೋತ್ಸವ 40ವರ್ಷ ಸಮಯ ಕ್ಷಣದಂತೆ ಹೋದ ಭಾವನೆ. ತಾಳಿ ಕಟ್ಟೋವಾಗ್ಲು ತಾಳಿ ಕಟ್ಟಿದ ಮೇಲು ತಾಳಿ ಮೂರುಗಂಟಿನ ತಾಳಿ ಬಿಗಿದಮೇಲೆ ಬಿಡಿಸಿಕೊಳ್ಳದಂತೆ ಬಾಳಿ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತ 40ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ನಟ ಜಗ್ಗೇಶ್​ ದಂಪತಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಈ ಜೋಡಿ ನೂರ್ಕಾಲ ಜೊತೆಯಾಗಿ ಬಾಳಲಿ ಎಂದು ನೆಟ್ಟಿಗರು ಕಮೆಂಟ್​ಗಳ ಮೂಲಕ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net