More

    VIDEO| ಬಟ್ಟೆ ಖರೀದಿ ಬಿಟ್ಟು, ಅಮ್ಮನ ಹಳೇ ಸೀರೆಯನ್ನೇ ಶೇರ್ವಾನಿ ಮಾಡಿಕೊಂಡ ರಿತೇಶ್​

    ಮುಂಬೈ: ಸಿನಿಮಾ ಮಂದಿ ಏನೇ ಮಾಡಿದರೂ ಚೂರು ಹೆಚ್ಚೇ ಖರ್ಚು ಮಾಡುತ್ತಾರೆ. ಹಬ್ಬ ಇರಲಿ, ಮನೆಯಲ್ಲಿನ ಕಾರ್ಯಕ್ರಮವೇ ಇರಲಿ. ನೀರು ಸುರಿದಂತೆ ಹಣ ವೆಚ್ಚ ಮಾಡಿ, ಆಚರಣೆಯನ್ನು ಅದ್ದೂರಿಯಾಗಿಯೇ ಮಾಡುವುದು ಸಾಮಾನ್ಯ. ಆದರೆ, ಬಾಲಿವುಡ್​ ನಟ ರಿತೇಶ್​ ದೇಶ್​ಮುಖ್ ಮಾತ್ರ ಅವರೆಲ್ಲರಿಗಿಂತ ಕೊಂಚ ವಿಭಿನ್ನವಾಗಿ ಕಾಣಿಸುತ್ತಾರೆ. ಈ ವರ್ಷದ ದೀಪಾವಳಿ ಆಚರಣೆಯಲ್ಲಿ ಸಣ್ಣ ಬದಲಾವಣೆಯೊಂದನ್ನು ಮಾಡಿಕೊಂಡಿದ್ದಾರವರು.

    ಇದನ್ನೂ ಓದಿ: PHOTOS| ಮಗುವಿನಂತೆ ಸಂಭ್ರಮಿಸಿದ ತಲೈವಾ, ದೀಪ ಬೆಳಗಿದ ಪಿಗ್ಗಿ-ಕರೀನಾ

    ಹಬ್ಬದ ಹಿನ್ನೆಲೆಯಲ್ಲಿ ಮಾಲ್​ಗಳಿಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಬಟ್ಟೆ-ಬರೆ ತರದೆ, ಮನೆಯಲ್ಲಿಯೇ ಹಬ್ಬಕ್ಕೆ ತೊಡುವ ಬಟ್ಟೆಯನ್ನು ರೆಡಿ ಮಾಡಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ಅಮ್ಮನ ಹಳೆಯ ಸೀರೆಯನ್ನೇ ಹಬ್ಬದ ಬಟ್ಟೆಗಳನ್ನಾಗಿ ತೊಟ್ಟು ಸಂಭ್ರಮಿಸಿದ್ದಾರೆ.

    ಅಮ್ಮನ ಸೀರೆಯಲ್ಲಿಯೇ ತಮಗೂ ಮತ್ತು ಇಬ್ಬರು ಮಕ್ಕಳಿಗೆ ಬಟ್ಟೆ ಹೊಲಿಸಿದ್ದಾರೆ. ಆ ಬಟ್ಟೆಯನ್ನೇ ಹಬ್ಬದ ಪ್ರಯುಕ್ತ ಧರಿಸಿ ದೀಪಾವಳಿಯ ಆಚರಣೆ ಮಾಡಿದ್ದಾರೆ. ಅದರ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸದ್ಯ ಈ ವಿಡಿಯೋ ತುಣುಕಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ವಿವಾದದ ಗೂಡಾಯ್ತು ಅಕ್ಷಯ್​ ಕುಮಾರ್ ‘ರಾಮ್​ ಸೇತು’ ಪೋಸ್ಟರ್; ನೆಟ್ಟಿಗರಿಂದ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts