ಅಹಮದಾಬಾದ್: ವಿಶ್ವದ ಅತಿದೊಡ್ಡ ಸ್ಟೇಡಿಯಂ ಎಂದೇ ಖ್ಯಾತಿ ಪಡೆದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯರು 142 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಸರಣಿಯಲ್ಲಿ ಕ್ಲೀನ್ಸ್ವೀಪ್ ಸಾಧಿಸುವ ಮೂಲಕ ಮುಂದಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರೀ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ (Team India) ಶುಭಮನ್ ಗಿಲ್ (112 ರನ್, 102 ಎಸೆತ, 14 ಬೌಂಡರಿ, 3 ಸಿಕ್ಸರ್), ವಿರಾಟ್ ಕೊಹ್ಲಿ (52 ರನ್, 55 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಶ್ರೇಯಸ್ ಅಯ್ಯರ್ (78 ರನ್, 64 ಎಸೆತ, 8 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ 50 ಒವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತು. ಇಂಗ್ಲೆಂಡ್ ಪರ ಸಾಕಿಬ್ ಮಹಮೂದ್ (10-0-68-1), ಆದಿಲ್ ರಶೀದ್ (10-0-64-4), ಮಾರ್ಕ್ ವುಡ್ (9-1-45-2), ಗಸ್ ಆ್ಯಟ್ಕಿನ್ಸನ್ (8-0-74-1), ಲಿಯಾಮ್ ಲಿವಿಂಗ್ಸ್ಟನ್ (8-0-57-0), ಜೋ ರೂಟ್ (5-0-47-1) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
𝐂𝐋𝐄𝐀𝐍 𝐒𝐖𝐄𝐄𝐏
Yet another fabulous show and #TeamIndia register a thumping 142-run victory in the third and final ODI to take the series 3-0!
Details – https://t.co/S88KfhFzri… #INDvENG @IDFCFIRSTBank pic.twitter.com/ZoUuyCg2ar
— BCCI (@BCCI) February 12, 2025
ಸವಾಲಿನ ಮೊತ್ತ ಬೆನ್ನತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಪಡೆದುಕೊಂಡಿತಾದರೂ ಟೀಮ್ ಇಂಡಿಯಾದ (Team India) ಬೌಲರ್ಗಳು ಆಂಗ್ಲರಿಗೆ ಡಗೌಟ್ ತೋರುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾದ ಆಲ್ರೌಂಡ್ ಪ್ರದರ್ಶನಕ್ಕೆ ನಲುಗಿದ ಪ್ರವಾಸಿ ತಂಡವು ಅಂತಿಮವಾಗಿ 34.2 ಒವರ್ನಲ್ಲಿ 214 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು.
ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ (8-0-38-1), ಅಕ್ಷರ್ ಪಟೇಲ್ (6.2-1-22-2), ಹರ್ಷಿತ್ ರಾಣಾ (5-1-31-2), ಅರ್ಷ್ದೀಪ್ ಸಿಂಗ್ (5-0-33-2), ವಾಷಿಂಗ್ಟನ್ ಸುಂದರ್ (5-0-43-1), ಹಾರ್ದಿಕ್ ಪಾಂಡ್ಯ (5-0-38-2) ರನ್ ನೀಡಿ ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.