ಟೆಸ್ಟ್​ ಕ್ರಿಕೆಟ್​ನಲ್ಲಿ ಅಜೇಯವಾಗಬೇಕೆಂದರೆ ಈತನನ್ನು ಮೊದಲು...; ಭಾರತದ ನೂತನ ಕೋಚ್​ಗೆ ಸುನಿಲ್​ ಗವಾಸ್ಕರ್ ಸಲಹೆ

Sunil Gambhir
Published on

ನವದೆಹಲಿ: ತಮ್ಮ ನೇರ-ನಿಷ್ಟೂರ ಮಾತುಗಳಿಂದಲೇ ಕ್ರೀಡಾ ಜಗತ್ತಿನಲ್ಲಿ ಸಖತ್​ ಫೇಮಸ್​ ಆಗಿರುವ ಮಾಜಿ ಕ್ರಿಕೆಟಿಗ ಸುನಿಲ್​ ಗವಾಸ್ಕರ್ ಆಟಗಾರರ ಬಗ್ಗೆ ತಮ್ಮ ಅಭಿಪ್ರಾಯಗಳು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ನೂತನ ಕೋಚ್​ ಆಗಿ ನೇಮಕಗೊಳ್ಳುತ್ತಿದ್ದಂತೆ ಮೊದಲ ಬಾರಿಗೆ ಮಾತನಾಡಿರುವ ಗಾವಸ್ಕರ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಈ ಒಬ್ಬ ಆಟಗಾರನ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ್ದಾರೆ. ತಮ್ಮ ಮನವಿಯನ್ನು ಪರಿಗಣಿಸುವಂತೆ ಆಯ್ಕೆ ಸಮಿತಿಗೆ ವಿನಂತಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗವಾಸ್ಕರ್​ ವೈಟ್​ ಬಾಲ್​ನಂತೆ ಭಾರತ ತಂಡವು ಟೆಸ್ಟ್​ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಇತ್ತೀಚಿಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಭಾರತದ ಪರ ಅಮೋಘ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾರ್ದಿಕ್​ ಪಾಂಡ್ಯ ಕೆಲವು ವರ್ಷಗಳಿಂದ ಟೆಸ್ಟ್​ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಅವರನ್ನು ಟೆಸ್ಟ್​ ಕ್ರಿಕೆಟ್​ಗೆ ಮರಳಿ ಬಂದರೆ ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಮಾಡಿದ ಜಾದೂವನ್ನೇ ಇಲ್ಲೂ ಕೂಡ ಮಾಡಲಿದ್ದಾರೆ.

Hardik Pandya

ಹಾರ್ದಿಕ್​ ಆರು ವರ್ಷಗಳ ಹಿಂದೆ ಟೆಸ್ಟ್​ ಸರಣಿ ಆಡಿದ್ದರೂ ಅದಾದ ಬಳಿಕ ಅವರು ರೆಡ್​ಬಾಲ್​ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ಈವರೆಗೂ 11 ಟೆಸ್ಟ್​ ಪಂದ್ಯಗಳನ್ನು ಆಡಿರುವ ಪಾಂಡ್ಯ ಅವರು ಉತ್ತಮ ಪ್ರದರ್ಶನ ನೀಡಿದ್ದು, ಒಂದು ವೇಳೆ ಟೆಸ್ಟ್​ ಕ್ರಿಕೆಟ್​ಗೆ ಮರಳಿದರೆ ತಂಡದ ಪರ ದೊಡ್ಡ ಇಂಪ್ಯಾಕ್ಟ್​​ ಮಾಡಲಿದ್ದಾರೆ. ಕೂಡಲೇ ನೂತನ ಕೋಚ್​ ಗೌತಮ್​ ಗಂಭೀರ್​ ಅವರ ಮನವೊಲಿಸಬೇಕೆಂದು ಸುನಿಲ್​ ಗವಾಸ್ಕರ್​ ಆಗ್ರಹಿಸಿದ್ದಾರೆ.

ಐಪಿಎಲ್​ ಶುರುವಾಗುವುದಕ್ಕೂ ಮುಂಚಿನಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುವ ಹಾರ್ದಿಕ್​ ಪಾಂಡ್ಯ ಟಿ20 ವಿಶ್ವಕಪ್​ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. ಇದೀಗ ಅವರು ಟೆಸ್ಟ್​ ಕ್ರಿಕೆಟ್​ಗೆ ಮರಳಬೇಕೆಂಬ ಆಗ್ರಹ ಕೇಳಿ ಬರುತ್ತಿದ್ದು, ಇದು ತಂಡದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net