

ನವದೆಹಲಿ: ಟೀಂ ಇಂಡಿಯಾ ಬದಲಾಗಿ ಟೀಮ್ ಭಾರತ್ ಎಂದು ಭಾರತೀಯ ಕ್ರಿಕೆಟ್ ತಂಡದ ಹೆಸರನ್ನು ಬದಲಾಯಿಸಲು ಬಿಸಿಸಿಐ ಬಳಿ ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಮನವಿ ಮಾಡಿದ್ದಾರೆ.
ಸೆ.18 ರಿಂದ 21ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ದೇಶದ ಹೆಸರನ್ನು ಮರು ನಾಮಕರಣ ಮಾಡುವ ಪ್ರಸ್ತಾಪವನ್ನು ಸರ್ಕಾರ ಮಾಡಲಿದೆ. ರಿಪಬ್ಲಿಕ್ ಆಫ್ ಇಂಡಿಯಾ ಬದಲಿಗೆ ರಿಪಬ್ಲಿಕ್ ಆಫ್ ಭಾರತ ಎನ್ನುವ ಹೆಸರನ್ನು ಸರ್ಕಾರ ನೀಡಲಿದೆ. ಈ ಕುರಿತಾಗಿ ಈಗಾಗಲೇ ಚರ್ಚೆಯಾಗುತ್ತಿದೆ.
ವೀರೇಂದ್ರ ಸೆಹ್ವಾಗ್ ಟ್ವೀಟ್‌ನಲ್ಲಿ ಏನಿದೆ?: ಇಂಡಿಯಾದ ಹೆಸರನ್ನು ಭಾರತ ಎಂದು ಬದಲಾವಣೆ ಮಾಡೋದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಅದರೊಂದಿಗೆ ಮುಂದಿನ ವಿಶ್ವಕಪ್ ಟೂರ್ನಿಯ ವೇಳೆ ಟೀಮ್ ಇಂಡಿಯಾ ಎನ್ನುವ ಬದಲಿಗೆ ಟೀಮ್ ಭಾರತ್ (#TeamBharat) ಎನ್ನುವ ಹ್ಯಾಶ್ ಟ್ಯಾಗ್ ಬಳಸಬೇಕು. ಅದರೊಂದಿಗೆ ಎಲ್ಲಾ ಕಡೆ ಭಾರತ ತಂಡ ಎಂದೇ ಕರೆಯಬೇಕು ಎಂದು ಹೇಳಿದ್ದಾರೆ.
ಮುಂಬರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ರೋಹಿತ್ ಶರ್ಮಾ ನೇತೃತ್ವದಲ್ಲಿ ತಂಡವನ್ನು ಘೋಷಿಸಿದಾಗ ವೀರೇಂದ್ರ ಸೆಹ್ವಾಗ್ ತಮ್ಮ ಬೆಂಬಲವನ್ನು ಘೋಷಿಸಿ ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ದೇಶಕ್ಕೆ ಇಂಡಿಯಾ ಎನ್ನುವ ಹೆಸರಿನ ಬದಲು ಭಾರತ್ ಎನ್ನುವ ಹೆಸರನ್ನು ನೀಡೋದಕ್ಕೂ ಬೆಂಬಲ ಸೂಚಿಸಿದ್ದಾರೆ.
“ಹೆಸರು ನಮ್ಮಲ್ಲಿ ಹೆಮ್ಮೆಯನ್ನು ಹುಟ್ಟಿಸುವಂತಿರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ. ನಾವು ಭಾರತೀಯರು, ಇಂಡಿಯಾ ಬ್ರಿಟಿಷರು ನೀಡಿದ ಹೆಸರು ಮತ್ತು ನಮ್ಮ ಮೂಲ ಹೆಸರನ್ನು 'ಭಾರತ್' ಅನ್ನು ಅಧಿಕೃತವಾಗಿ ಮರಳಿ ಪಡೆಯಲು ಈಗಾಗಲೇ ಬಹಳ ತಡವಾಗಿದೆ. ಈ ವಿಶ್ವಕಪ್ ನಮ್ಮ ಆಟಗಾರರು ನಮ್ಮ ಎದೆಯ ಮೇಲೆ ಭಾರತವನ್ನು ಹೊಂದಿದ್ದಾರೆ. ಇಂಡಿಯಾ ಎನ್ನುವ ಬದಲು ಭಾರತ ಎಂದು ಬದಲಾಯಿಸುವಂತೆ ಬಿಸಿಸಿಐ ಮತ್ತು ಜಯ್ ಶಾ (ಬಿಸಿಸಿಐ ಕಾರ್ಯದರ್ಶಿ) ಅವರ ಹೆಸರನ್ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ.
ಗೌತಮ್ ಗಂಭೀರ್ ಅವರಿಗಿಂತ ಮೊದಲು ವೀರೇಂದ್ರ ಸೆಹ್ವಾಗ್ ರಾಜಕೀಯದಲ್ಲಿರಬೇಕಿತ್ತು ಎನ್ನುವ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಸೆಹ್ವಾಗ್, “ನನಗೆ ರಾಜಕೀಯದಲ್ಲಿ ಆಸಕ್ತಿಯೇ ಇಲ್ಲ. ಕಳೆದ ಎರಡು ಚುನಾವಣೆಗಳಲ್ಲಿ ಎರಡೂ ಪ್ರಮುಖ ಪಕ್ಷಗಳು ಸಂಪರ್ಕಿಸಿವೆ. ಮನೋರಂಜಕರು ಅಥವಾ ಕ್ರೀಡಾಪಟುಗಳು ರಾಜಕೀಯಕ್ಕೆ ಬರಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ. ಏಕೆಂದರೆ ಹೆಚ್ಚಿನವರು ತಮ್ಮ ಸ್ವಂತ ಅಹಂ ಮತ್ತು ಅಧಿಕಾರದ ಹಸಿವಿಗಾಗಿ ಮತ್ತು ಜನರಿಗೆ ನಿಜವಾದ ಸಮಯವನ್ನು ಬಿಡುವುದಿಲ್ಲ, ಕೆಲವರು ಇದಕ್ಕೆ ಹೊರತಾಗಿದ್ದಾರೆ. ನಾನು ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತೇನೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.