ನೀನು ಐಪಿಎಲ್​ಗೆ ಮಾತ್ರ ಲಾಯಕ್​! ಟೀಮ್​ ಇಂಡಿಯಾ ಆಟಗಾರನ ವಿರುದ್ಧ ಕ್ರೀಡಾಭಿಮಾನಿಗಳ ಆಕ್ರೋಶ | Team India

Team India

ನವದೆಹಲಿ: ಟೀಮ್​ ಇಂಡಿಯಾ ( Team India ) ದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮ ( Abhishek Sharma ) ತಮ್ಮ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಡರ್ಬನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ20ಯಲ್ಲಿ ಕೇವಲ 7 ರನ್ ಗಳಿಸಿ ನಿರಾಸೆ ಅನುಭವಿಸಿದ್ದ ಅಭಿಷೇಕ್, ನಿನ್ನೆ (ನ.10) ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಎರಡನೇ ಟಿ20ಯಲ್ಲೂ ಅದೇ ಚಾಳಿ ಮುಂದುವರಿಸಿದರು.

ನಿನ್ನೆಯ ಪಂದ್ಯದಲ್ಲಿ 5 ಎಸೆತಗಳನ್ನು ಆಡಿದ ಅಭಿಷೇಕ್ ಕೇವಲ 4 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಷೇಕ್ ವಿರುದ್ಧ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ.

ಇದೆಂಥಾ ಆಟ ಬ್ರೋ..ನೀವು ಐಪಿಎಲ್​ಗೆ ಮಾತ್ರ ಲಾಯಕ್. ಟೀಮ್​ ಇಂಡಿಯಾಗೆ ನೀವು ಸೂಕ್ತವಲ್ಲ. ಸಿಕ್ಕ ಒಳ್ಳೆಯ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದು ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ. ಅಲ್ಲದೆ, ಅಭಿಷೇಕ್​ ಬದಲಿಗೆ ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡುವಂತೆ ಕೆಲವರು ಬಿಸಿಸಿಐ ಅನ್ನು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಈ ದಿನಾಂಕಗಳಲ್ಲಿ ಮದ್ವೆಯಾಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ! ಇಲ್ಲದಿದ್ದರೆ ಈ ಎಲ್ಲ ಸಮಸ್ಯೆ ಎದುರಿಸಬೇಕಾಗುತ್ತೆ | Numerology

ಅಂದಹಾಗೆ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅಭಿಷೇಕ್ ಶರ್ಮ, ಈವರೆಗೆ ಭಾರತ ಪರ 9 ಪಂದ್ಯಗಳನ್ನಾಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಶತಕ ಸಿಡಿಸಿದ್ದನ್ನು ಬಿಟ್ಟರೆ ಇದುವರೆಗೆ ಯಾವುದೇ ಉತ್ತಮ ಪ್ರದರ್ಶನವನ್ನು ನೀಡಲು ಅಭಿಷೇಕ್​ಗೆ ಸಾಧ್ಯವಾಗಿಲ್ಲ.

ಯಶಸ್ವಿ ಜೈಶ್ವಾಲ್‌ಗೆ ಬದಲಿಯಾಗಿ ತಂಡಕ್ಕೆ ಬಂದ ಯುವ ಆಟಗಾರ ಅಭಿಷೇಕ್​, ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದಾರೆ. 24 ವರ್ಷದ ಅಭಿಷೇಕ್, ಒಂಬತ್ತು ಟಿ20 ಇನ್ನಿಂಗ್ಸ್‌ಗಳಲ್ಲಿ ಎಂಟು ಪಂದ್ಯಗಳಲ್ಲಿ 20 ರನ್‌ಗಳ ಗಡಿ ದಾಟಲು ವಿಫಲರಾಗಿದ್ದಾರೆ. ಇದರೊಂದಿಗೆ ತಂಡದಲ್ಲಿ ಅವರ ಸ್ಥಾನ ಪ್ರಶ್ನಾರ್ಹವಾಗಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಮಿಂಚಿದರೆ ಅಭಿಷೇಕ್ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವುದು ಕನಸಾಗಲಿದೆ.

ಐಪಿಎಲ್-2024 ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದರು. ಅಭಿಷೇಕ್ ಈ ವರ್ಷದ ಸೀಸನ್​ನಲ್ಲಿ 14 ಪಂದ್ಯಗಳನ್ನು ಆಡಿದರು. 200 ಸ್ಟ್ರೈಕ್ ರೇಟ್‌ನೊಂದಿಗೆ 484 ರನ್ ಗಳಿಸಿದರು. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆ ಆಕ್ರಮಣವನ್ನು ತೋರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಟೀಕೆಗೆ ಗುರಿಯಾಗಿದ್ದಾರೆ. (ಏಜೆನ್ಸೀಸ್​)

ನಾಲ್ಕು ವರ್ಷದಿಂದ ಕೋಮಾದಲ್ಲಿದ್ದಾರೆ ಈ ಸ್ಟಾರ್​ ನಟನ ಪತ್ನಿ! ಟ್ಯೂಬ್​ ಮೂಲಕವೇ ಆಹಾರ | Actor Wife in Coma

ನೀವು ರಸ್ತೆ ಬದಿಯಲ್ಲಿ ಟಿಫನ್​ ಮಾಡ್ತೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು | Roadside Tiffen

Share This Article

ಚಳಿಗಾಲದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tender coconut

Tender coconut : ನೈಸರ್ಗಿಕವಾಗಿ ಹೇರಳವಾಗಿ ದೊರೆಯುವ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಲೆಕ್ಟ್ರೋಲೈಟ್ಸ್​, ವಿಟಮಿನ್ಸ್​,…

Clay Pots : ಹೊಸ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವ ಮುನ್ನ ಈ 3 ವಿಷಯಗಳನ್ನು ನೆನಪಿನಲ್ಲಿಡಿ

Clay Pots : ಈಗ ಸ್ಟೀಲ್, ಕಬ್ಬಿಣ, ನಾನ್ ಸ್ಟಿಕ್ ಪಾತ್ರೆಗಳಲ್ಲಿ ಅಡುಗೆ ಮಾಡಲು ಆರಂಭಿಸಿದ್ದಾರೆ.…

Hair care : ಸ್ನಾನ ಮಾಡುವಾಗ ಈ ಟಿಪ್ಸ್ ಪಾಲಿಸಿದರೆ ಕೂದಲು ಉದುರುವುದಿಲ್ಲ..!

Hair care : ಕೂದಲು ಉದುರುವ ಸಮಸ್ಯೆಯಿಂದ ಬಹಳಷ್ಟು ಜನರು ಬಳಲುತ್ತಿದ್ದಾರೆ. ಇಂದಿನ ಆಧುನಿಕ ಜೀವನಶೈಲಿ…