Actor Wife in Coma : ಬಾಹುಬಲಿ ಸಿನಿಮಾ ಬರುವವರೆಗೂ ನಟ ಸತ್ಯರಾಜ್ ಅವರು ತಮಿಳಿಗರಿಗೆ ಬಿಟ್ಟು ಬೇರೆ ಯಾರಿಗೂ ಪರಿಚಯವಿರಲಿಲ್ಲ. ಯಾವಾಗ ಬಾಹುಬಲಿ ಭಾಗ ಒಂದು ಮತ್ತು ಎರಡರಲ್ಲಿ ಕಟ್ಟಪ್ಪ ಪಾತ್ರದಲ್ಲಿ ಮಿಂಚಿದರೋ ಅಂದಿನಿಂದ ಪ್ಯಾನ್ ಇಂಡಿಯಾ ನಟನಾಗಿದ್ದಾರೆ. ಅಲ್ಲದೆ, ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ತಾಜಾ ಸಂಗತಿ ಏನೆಂದರೆ, ಸತ್ಯರಾಜ್ ಕುರಿತಾದ ನೋವಿನ ಸಂಗತಿಯೊಂದು ಬಹಿರಂಗವಾಗಿದೆ. ಅದೇನೆಂದರೆ, ಅವರ ಪತ್ನಿ ಮಹೇಶ್ವರಿ ಕಳೆದ ನಾಲ್ಕು ವರ್ಷದಿಂದ ಕೋಮಾದಲ್ಲಿದ್ದಾರೆ. ಈ ವಿಚಾರವನ್ನು ಸತ್ಯರಾಜ್ ಪುತ್ರಿ ಹಾಗೂ ಪೌಷ್ಟಿಕತಜ್ಞೆಯಾಗಿರುವ ದಿವ್ಯಾ ಸತ್ಯರಾಜ್ ಅವರು ಸ್ವತಃ ತಿಳಿಸಿದ್ದಾರೆ.
ಮಹೇಶ್ವರಿ ಅವರಿಗೆ ಎಲ್ಲ ಆಹಾರವನ್ನು ಪಿಜಿ ಟ್ಯೂಬ್ ಮೂಲಕ ನೀಡಲಾಗುತ್ತಿದೆ. ನನ್ನ ತಂದೆ ಕಳೆದ 4 ವರ್ಷಗಳಿಂದ ಸಿಂಗಲ್ ಪೇರೆಂಟ್ ಆಗಿದ್ದು, ನಾನು ಅವರಿಗೆ ಒಳ್ಳೆಯ ತಾಯಿಯಾಗಿದ್ದೇನೆ ಎಂದು ದಿವ್ಯಾ ಸತ್ಯರಾಜ್ ಭಾವುಕರಾಗಿ ಹಂಚಿಕೊಂಡಿದ್ದಾರೆ. ಈ ಒಂದು ಸುದ್ದಿ ಸತ್ಯರಾಜ್ ಅಭಿಮಾನಿಗಳಲ್ಲಿ ಭಾರಿ ನೋವುಂಟು ಮಾಡಿದ್ದು, ಆದಷ್ಟು ಬೇಗ ಮಹೇಶ್ವರಿ ಅವರು ಕೋಮಾದಿಂದ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ.
ಅಂದಹಾಗೆ ಸತ್ಯರಾಜ್ ಅವರು 80ರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಖಡಕ್ ಖಳನಾಯಕನಾಗಿ ನಟಿಸಿದರು. ಸುಮಾರು 40 ವರ್ಷಗಳ ಸುದೀರ್ಘ ಸಿನಿ ಪಯಾಣ ಮಾಡಿದ್ದು, ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ 240ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ಆರಂಭದಲ್ಲಿ ಖಳನಾಯಕನಾಗಿ ಎಂಟ್ರಿ ಕೊಟ್ಟ ಸತ್ಯರಾಜ್, ನಂತರದಲ್ಲಿ ನಾಯಕನಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದರು ಮತ್ತು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಸಿನಿಮಾದಲ್ಲಿಯೂ ಸತ್ಯರಾಜ್ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್)
ಅಣಕು ಹರಾಜಿನಲ್ಲಿ 20 ಕೋಟಿ ರೂ.ಗೆ ಆರ್ಸಿಬಿ ಪಾಲಾದ ಕೆಎಲ್ ರಾಹುಲ್!
ಕಸ್ತೂರಿಗೆ ತಟ್ಟಿದ ಸರ್ಕಾರಿ ನೌಕರರ ಆಕ್ರೋಶದ ಕಿಡಿ! ನಾಪತ್ತೆಯಾದ ನಟಿಗಾಗಿ ಪೊಲೀಸರ ತೀವ್ರ ಶೋಧ | Kasthuri Shankar