ನೀವು ರಸ್ತೆ ಬದಿಯಲ್ಲಿ ಟಿಫನ್​ ಮಾಡ್ತೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು | Roadside Tiffen

Roadside Tiffen

Roadside Tiffen : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಡುವಿಲ್ಲದ ಜೀವನಶೈಲಿಗೆ ಒಗ್ಗಿಕೊಂಡಿದ್ದಾರೆ. ಹೀಗಾಗಿ ಯಾವುದೇ ಕೆಲಸ ಮಾಡಲು ತಮ್ಮ ಬಳಿ ಸಮಯವಿಲ್ಲ ಎನ್ನುತ್ತಾರೆ. ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡಲು ಸಹ ಅವರ ಬಳಿ ಸಮಯವಿರುವುದಿಲ್ಲ. ಹೀಗಾಗಿ ಹೊರಗಡೆ ಫಾಸ್ಟ್ ಫುಡ್‌, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಅವಲಂಬಿಸಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಸ್ತೆಬದಿಯಲ್ಲಿ ಇರುವ ಸಣ್ಣ-ಪುಟ್ಟ ಟಿಫನ್​ ಸೆಂಟರ್​ನಲ್ಲಿ ಆಹಾರ ಸೇವಿಸುತ್ತಾರೆ.

ತಳ್ಳೋ ಗಾಡಿಗಳಲ್ಲೂ ಆಹಾರ ಸಿದ್ಧಪಡಿಸಿ ಮಾರುವುದನ್ನು ನೋಡಿರುತ್ತೀರಿ. ಬಿರಿಯಾನಿ, ಎಗ್​ ರೈಸ್, ಲಿವರ್​ ರೈಸ್​​ ಹೀಗೆ ಮುಂತಾದವುಗಳನ್ನು ಜನರು ಸವಿಯುತ್ತಾರೆ. ಆದರೆ, ಅವುಗಳನ್ನು ಹೇಗೆ ಮಾಡುತ್ತಾರೆ? ರುಚಿ ಬರಲೆಂದು ಏನು ಸೇರಿಸುತ್ತಾರೆ? ಸ್ವಚ್ಛತೆ ಕಾಪಾಡಿಕೊಳ್ಳುತ್ತಾರಾ? ತಾಜಾ ವಸ್ತುಗಳಿಂದ ಅವುಗಳನ್ನು ಮಾಡುತ್ತಾರೆಯೇ? ಎಂಬುದರ ಬಗ್ಗೆ ಸ್ವಲ್ಪವೂ ಯೋಚಿಸುವುದಿಲ್ಲ. ರಸ್ತೆಬದಿಯಲ್ಲಿ ಟಿಫನ್ ಮಾಡುವ ಅಭ್ಯಾಸ ಇರುವವರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಈ ಆಹಾರಗಳು ಕ್ಯಾನ್ಸರ್​ಗೆ ಕಾರಣವಾಗಬಹುದು.

ರಸ್ತೆ ಬದಿಯ ಆಹಾರ ತಯಾರಿಸುವ ವಿಧಾನದ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಅಲ್ಲಿ ಅಡುಗೆಗೆ ಬಳಸುವ ಎಣ್ಣೆ ತುಂಬಾ ಕಪ್ಪಾಗಿ ಕಾಣುತ್ತದೆ. ಅಂದರೆ, ಎಣ್ಣೆಯನ್ನು ಹೆಚ್ಚು ಕುದಿಸಿ ಅದೇ ಎಣ್ಣೆಯನ್ನು ಮತ್ತೆ ಮತ್ತೆ ಬಳಸುವುದರಿಂದ ಕಪ್ಪು ಬಣ್ಣ ಬರುತ್ತದೆ. ಇದು ಸಾಕಷ್ಟು ಅಪಾಯಕ್ಕೆ ಕಾರಣವಾಗಬಹುದು. ಅದಕ್ಕಿಂತ ಮುಖ್ಯವಾಗಿ ರಸ್ತೆ ಬದಿಯ ಆಹಾರ ಮಾರಾಟಗಾರರು ಕನಿಷ್ಠ ಸ್ವಚ್ಛತೆಯನ್ನೂ ಕಾಪಾಡುವುದಿಲ್ಲ. ಅಗ್ಗದ ವಸ್ತುಗಳ ಸೇವನೆಯು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ. ಹಾಗಾಗಿ ಆದಷ್ಟು ಎಣ್ಣೆಯುಕ್ತ ಆಹಾರ ಮತ್ತು ಹೊರಗಿನ ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್​ ಆರೋಗ್ಯ ಕ್ಷೀಣ? ಇತ್ತೀಚೆಗೆ ಬಿಡುಗಡೆಯಾದ ಚಿತ್ರದಿಂದ ಬಹಿರಂಗ

ಎಣ್ಣೆಯನ್ನು ಹೆಚ್ಚಾಗಿ ಕುದಿಸುವುದು ಟೋಟಲ್​ ಪೋಲಾರ್ ಕಾಂಪೌಂಡ್ಸ್ (TPC) ಅನ್ನು ಸ್ವತಂತ್ರ ರಾಡಿಕಲ್​ಗಳಾಗಿ ಪರಿವರ್ತಿಸುತ್ತದೆ. FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ನಿಯಮಗಳ ಪ್ರಕಾರ, ಧ್ರುವೀಯ ಸಂಯುಕ್ತಗಳು ಸಾಮಾನ್ಯ ಅಡುಗೆ ಎಣ್ಣೆಯ 25 ಪ್ರತಿಶತವನ್ನು ಮೀರಿದರೆ, ಅದನ್ನು ಬದಲಾಯಿಸಬೇಕು ಎಂದು ಹೇಳುತ್ತದೆ. ಆದರೆ, ಆ ರೀತಿ ಮಾಡುವುದಿಲ್ಲ.

ಇನ್ನು ಹಾನಿಕಾರಕ ಆಹಾರ ಬಣ್ಣಗಳು, ಟೇಸ್ಟಿಂಗ್​ ಪೌಡರ್​ ಮತ್ತು ಸೋಯಾ ಸಾಸ್ ಅನ್ನು ಬಹುತೇಕ ಎಲ್ಲ ಹೋಟೆಲ್‌ಗಳಲ್ಲಿ ಹೆಚ್ಚು ಬಳಸಲಾಗುತ್ತದೆ. ಆದ್ದರಿಂದ ರಸ್ತೆ ಬದಿಯ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.

ರಸ್ತೆಗೆ ಬಂದು ಕೆಎಸ್​ಆರ್​ಟಿಸಿ ಬಸ್​ ತಡೆದು ನಿಲ್ಲಿಸಿದ ಆನೆ ಮರಿ! ಕಾರಣ ಕೇಳಿದ್ರೆ ಕಣ್ತುಂಬಿ ಬರುತ್ತೆ | Baby Elephant

ನಾಲ್ಕು ವರ್ಷದಿಂದ ಕೋಮಾದಲ್ಲಿದ್ದಾರೆ ಈ ಸ್ಟಾರ್​ ನಟನ ಪತ್ನಿ! ಟ್ಯೂಬ್​ ಮೂಲಕವೇ ಆಹಾರ | Actor Wife in Coma

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…