ರೂ. 13 ರಿಂದ 632ಕ್ಕೆ ಏರಿದ ಟಾಟಾ ಗ್ರೂಪ್​ ಷೇರು: ಜಮಶೆಡ್‌ಪುರ ಉತ್ಪಾದನೆ ಘಟಕ ಶುರುವಾಗುತ್ತಿದ್ದಂತೆಯೇ ಸ್ಟಾಕ್​ಗೆ ಭರ್ಜರಿ ಬೇಡಿಕೆ

tata-12
Published on

ಮುಂಬೈ: ಟಾಟಾ ಗ್ರೂಪ್‌ನ ಆಟೋಮೋಟಿವ್ ಸ್ಟಾಂಪಿಂಗ್ಸ್ ಆ್ಯಂಡ್​ ಅಸೆಂಬ್ಲೀಸ್​ ಲಿಮಿಟೆಡ್​ (Automotive Stampings and Assemblies Ltd.) ಷೇರುಗಳಲ್ಲಿ ಶುಕ್ರವಾರ ಉತ್ತಮ ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳು ಶೇ. 10ರಷ್ಟು ಏರಿಕೆಯೊಂದಿಗೆ 632.85 ರೂ.ಗೆ ತಲುಪಿದವು.

ಟಾಟಾ ಗ್ರೂಪ್ ಕಂಪನಿಯ ಷೇರುಗಳ ಈ ಏರಿಕೆಯು ದೊಡ್ಡ ಪ್ರಕಟಣೆಯ ಕಾರಣದಿಂದಾಗಿ ಬಂದಿದೆ. ಜಮಶೆಡ್‌ಪುರದಲ್ಲಿರುವ ತನ್ನ ಹೊಸ ಉತ್ಪಾದನಾ ಘಟಕದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ಆಟೋಮೋಟಿವ್ ಸ್ಟಾಂಪಿಂಗ್ಸ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಷೇರುಗಳು ಭಾರೀ ಏರಿಕೆ ಕಂಡಿವೆ.

ಟಾಟಾ ಗ್ರೂಪ್ ಕಂಪನಿಯಾದ ಆಟೋಮೋಟಿವ್ ಸ್ಟಾಂಪಿಂಗ್ಸ್ ಜನವರಿಯಲ್ಲಿ ಜಮ್‌ಶೆಡ್‌ಪುರದಲ್ಲಿ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. 29 ಫೆಬ್ರವರಿ 2024 ರಿಂದ ಜೆಮ್‌ಶೆಡ್‌ಪುರದಲ್ಲಿರುವ ಹೊಸ ಉತ್ಪಾದನಾ ಘಟಕದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ ಎಂದು ಕಂಪನಿ ಘೋಷಿಸಿದೆ.

ಆಟೋಮೋಟಿವ್ ಸ್ಟಾಂಪಿಂಗ್ ಷೇರುಗಳ ಏರಿಕೆಯ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು 1010 ಕೋಟಿ ರೂ. ಮುಟ್ಟಿದೆ.

ಕಳೆದ 4 ವರ್ಷಗಳಲ್ಲಿ ಈ ಷೇರುಗಳಲ್ಲಿ 4800% ರಷ್ಟು ಭಾರಿ ಏರಿಕೆಯಾಗಿದೆ. ಮಾರ್ಚ್ 20, 2020 ರಂದು ಷೇರುಗಳ ಬೆಲೆ 13 ರೂ. ಇತ್ತು. ಕಳೆದ 3 ವರ್ಷಗಳಲ್ಲಿ ಈ ಷೇರುಗಳ ಬೆಲೆ 1541%ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ರೂ.38.80ರಿಂದ ರೂ.632ಕ್ಕೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 113ರಷ್ಟು ಏರಿಕೆಯಾಗಿದೆ. ಕಳೆದ 6 ತಿಂಗಳುಗಳಲ್ಲಿ ಆಟೋಮೋಟಿವ್ ಸ್ಟಾಂಪಿಂಗ್‌ಗಳ ಷೇರುಗಳು ಅಂದಾಜು 55% ಏರಿಕೆಯಾಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 720 ರೂ. ಹಾಗೂ ಕನಿಷ್ಠ ಬೆಲೆ 249 ರೂ. ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net