More

    ಪಿಎಂ ಸೂರ್ಯ ಗೃಹ ಉಚಿತ ವಿದ್ಯುತ್ ಯೋಜನೆಗೆ ಕ್ಯಾಬಿನೆಟ್​ ಅನುಮತಿ: 78,000 ರೂಪಾಯಿವರೆಗೂ ಸಬ್ಸಿಡಿ; ಸೋಲಾರ್​ ಷೇರುಗಳಲ್ಲಿ ಏರಿಕೆ

    ಮುಂಬೈ: ಕೇಂದ್ರ ಸಚಿವ ಸಂಪುಟವು ಗುರುವಾರ ಪಿಎಂ-ಸೂರ್ಯ ಗೃಹ ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ ನೀಡಿದೆ. 75,021 ಕೋಟಿ ರೂ. ಮೊತ್ತದ ಈ ಯೋಜನೆಯಡಿಯಲ್ಲಿ, ಒಂದು ಕೋಟಿ ಕುಟುಂಬಗಳಿಗೆ ರೂ 78,000 ವರೆಗೆ ಸಬ್ಸಿಡಿ ಪಡೆದುಕೊಂಡು ಮನೆ ಮೇಲ್ಛಾವಣಿಯ ಸೌರ ಸ್ಥಾವರಗಳನ್ನು ಸ್ಥಾಪಿಸಿಕೊಂಡು 300 ಯೂನಿಟ್ ಉಚಿತ ವಿದ್ಯುತ್ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕ್ಯಾಬಿನೆಟ್ ಅನುಮೋದನೆಯ ನಂತರ, ಶುಕ್ರವಾರ ಎಸ್‌ಜೆವಿಎನ್ ಷೇರುಗಳಲ್ಲಿ ಏರಿಕೆಯಾಗಿದೆ. ಸೋಲಾರ್ ಸಿಸ್ಟಮ್‌ಗೆ ಸಂಬಂಧಿಸಿದ ಎಸ್‌ಜೆವಿಎನ್ ಲಿಮಿಟೆಡ್​ ಷೇರುಗಳಲ್ಲಿ ಒಂದಿಷ್ಟು ಏರಿಕೆ ಕಂಡುಬಂದಿತು.

    ಮೇಲ್ಛಾವಣಿ ಸೋಲಾರ್ ಪ್ಲಾಂಟ್ ಅಳವಡಿಸುವ ಈ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆದುಕೊಳ್ಳಬಹುದು. ಈ ಯೋಜನೆಗೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.ಫೆಬ್ರವರಿ 13, 2024 ರಂದು ಪ್ರಧಾನಿ ಈ ಯೋಜನೆಯನ್ನು ಘೋಷಿಸಿದ್ದರು.

    ಈ ಯೋಜನೆಯಡಿಯಲ್ಲಿ, ಎರಡು ಕಿಲೋವ್ಯಾಟ್ ಸಾಮರ್ಥ್ಯದ ಸೌರ ವ್ಯವಸ್ಥೆಗಳಿಗೆ ವೆಚ್ಚದ ಶೇಕಡಾ 60 ರಷ್ಟು ಕೇಂದ್ರ ಹಣಕಾಸು ನೆರವು (ಸಿಎಫ್‌ಎ) ಮತ್ತು ಎರಡು ಕಿಲೋವ್ಯಾಟ್‌ನಿಂದ ಮೂರು ಕಿಲೋವ್ಯಾಟ್ ಸಾಮರ್ಥ್ಯದ ನಡುವಿನ ವ್ಯವಸ್ಥೆಗಳಿಗೆ ಹೆಚ್ಚುವರಿ ವೆಚ್ಚದ ಶೇಕಡಾ 40 ರಷ್ಟು ನೀಡಲಾಗುತ್ತದೆ. ಈ ನೆರವು ಮೂರು ಕಿಲೋವ್ಯಾಟ್‌ಗಳವರೆಗೆ ಇರುತ್ತದೆ.
    ಪ್ರಸ್ತುತ ಗುಣಮಟ್ಟದ ಬೆಲೆಯಲ್ಲಿ, ಒಂದು ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಸಿಸ್ಟಮ್‌ಗೆ 30,000 ರೂ., ಎರಡು ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ಸಿಸ್ಟಮ್‌ಗೆ 60,000 ರೂ. ಮತ್ತು ಮೂರು ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಸಾಮರ್ಥ್ಯದವರಿಗೆ ಸಬ್ಸಿಡಿ 78,000 ರೂ. ಸಿಗುತ್ತದೆ.

    ರಜಾ ದಿನವಾದ ಶನಿವಾರವೂ ಷೇರು ಮಾರುಕಟ್ಟೆಯಲ್ಲಿ ವಹಿವಾಟು: ವಿಶೇಷ ಟ್ರೇಡಿಂಗ್​ ಸೆಷನ್ಸ್​ ನಡೆಯುತ್ತಿರುವುದೇಕೆ?

    ಕೇವಲ 6 ತಿಂಗಳಲ್ಲಿ ಷೇರು ಬೆಲೆ 75 ರಿಂದ 915 ರೂಪಾಯಿಗೆ ಏರಿಕೆ: 1100% ಲಾಭ ನೀಡಿದ ಕಂಪನಿ ಸ್ಟಾಕ್​ಗೆ ಮತ್ತೆ ಬೇಡಿಕೆ ಏಕೆ?

    ಫಾರ್ಮಾ ಸ್ಟಾಕ್​ ನೀಡಲಿದೆ 3:1 ಬೋನಸ್ ಷೇರು: 30 ದಿನಗಳಲ್ಲಿ 119% ಲಾಭ, ಸತತ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts