More

    ಫಾರ್ಮಾ ಸ್ಟಾಕ್​ ನೀಡಲಿದೆ 3:1 ಬೋನಸ್ ಷೇರು: 30 ದಿನಗಳಲ್ಲಿ 119% ಲಾಭ, ಸತತ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಗುರುವಾರ, ಫೆಬ್ರವರಿ 29, 2024ರಂದು ನಿರ್ದೇಶಕರ ಮಂಡಳಿಯು 3:1 ಬೋನಸ್ ಷೇರುಗಳ ವಿತರಣೆಯನ್ನು ಅನುಮೋದಿಸಿದ ನಂತರ ಸ್ಮಾಲ್ ಕ್ಯಾಪ್ ಫಾರ್ಮಾಸ್ಯುಟಿಕಲ್ಸ್ ವಲಯದ ಕಂಪನಿ ಶುಕ್ರ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (Shukra Pharmaceuticals Ltd) ಷೇರುಗಳ ಬೆಲೆ 5% ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್​ ಆಯಿತು. ಅಲ್ಲದೆ, ಸಾರ್ವಕಾಲಿಕ ಗರಿಷ್ಠ ಬೆಲೆ ತಲುಪಿತು. ಈಗ ಷೇರು ಬೆಲೆ 289.80 ರೂಪಾಯಿ ಆಗಿದೆ.

    ಈ ಕಂಪನಿಯ ಷೇರುಗಳ ಸಾರ್ವಕಾಲಿಕ ಕನಿಷ್ಠ ಬೆಲೆ 0.45 ರೂ. (ಅಂದರೆ 45 ಪೈಸೆ) ಇತ್ತು. ಶುಕ್ರಾ ಫಾರ್ಮಾಸ್ಯುಟಿಕಲ್ಸ್ ಷೇರುಗಳು ಹೂಡಿಕೆದಾರರಿಗೆ ಕಳೆದ 30-ದಿನಗಳಲ್ಲಿ 119% ನಷ್ಟು ಲಾಭವನ್ನು ನೀಡಿವೆ. ಕಳೆದ 1-ವರ್ಷದಲ್ಲಿ 471% ಗಳಿಸಿ ಕೊಟ್ಟಿವೆ. ಕಂಪನಿಯು 317.24 ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.

    3: 1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ವಿತರಿಸಲಿದೆ. ಅಂದರೆ, ಈಗಿರುವ ಪ್ರತಿ ಒಂದು ಷೇರಿಗೆ 3 ಹೊಸ ಬೋನಸ್​ ಷೇರುಗಳನ್ನು ನೀಡಲಿದೆ.

    ಶುಕ್ರ ಫಾರ್ಮಾಸ್ಯುಟಿಕಲ್ಸ್ ಷೇರುಗಳ 52-ವಾರದ ಹೆಚ್ಚಿನ ಬೆಲೆ ಕ್ರಮವಾಗಿ ರೂ 289.80 ಮತ್ತು 52 ವಾರಗಳ ಕಡಿಮೆ ಬೆಲೆ ಕ್ರಮವಾಗಿ ರೂ 41.76 ಆಗಿದೆ.

    ಫೆಬ್ರವರಿ 23 ರಿಂದ ಈ ಕಂಪನಿಯ ಷೇರುಗಳು ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗುತ್ತಿವೆ. ಹೀಗಾಗಿ, ಕಳೆದ 1-ತಿಂಗಳಲ್ಲಿ ಸ್ಟಾಕ್ 119% ರಷ್ಟು ಏರಿಕೆಗೆ ಸಾಕ್ಷಿಯಾಗಿದೆ. ಶುಕ್ರ ಫಾರ್ಮಾಸ್ಯುಟಿಕಲ್ಸ್ ಷೇರುಗಳ ಬೆಲೆ ಕಳೆದ 3-ತಿಂಗಳಲ್ಲಿ 214% ರಷ್ಟು ಹೆಚ್ಚಳವಾಗಿದೆ. ಕಳೆದ 2 ವರ್ಷಗಳಲ್ಲಿ 1814% ರಷ್ಟು ಏರಿಕೆಯಾಗಿದೆ. ಕಳೆದ 3 ವರ್ಷಗಳಲ್ಲಿ, 3242% ಹೆಚ್ಚಳವಾಗಿವೆ.

    ಈ ಕಂಪನಿಯು ಡಿಸೆಂಬರ್ 2023 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭವನ್ನು ರೂ 9.42 ಕೋಟಿ ಎಂದು ಘೋಷಿಸಿದೆ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಘೋಷಿಸಲಾದ ರೂ 0.03 ಕೋಟಿಗಿಂತ ಇದು 36277.61% ಹೆಚ್ಚಾಗಿದೆ. ಡಿಸೆಂಬರ್ 2023 ರ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ನಿವ್ವಳ ಮಾರಾಟವನ್ನು ರೂ 18.89 ಕೋಟಿ ಎಂದು ಘೋಷಿಸಿದೆ, ಡಿಸೆಂಬರ್ 2022 ರಲ್ಲಿ ರೂ 2.30 ಕೋಟಿಗೆ ಹೋಲಿಸಿದರೆ ಇದು 720.8% ಹೆಚ್ಚಾಗಿದೆ.

    ಕೇವಲ 6 ತಿಂಗಳಲ್ಲಿ ಷೇರು ಬೆಲೆ 75 ರಿಂದ 915 ರೂಪಾಯಿಗೆ ಏರಿಕೆ: 1100% ಲಾಭ ನೀಡಿದ ಕಂಪನಿ ಸ್ಟಾಕ್​ಗೆ ಮತ್ತೆ ಬೇಡಿಕೆ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts