More

    ಬೆಂಗಳೂರಿನ ಟರ್ಬೈನ್​ ಕಂಪನಿ ಷೇರುಗಳಿಗೆ ಭಾರೀ ಬೇಡಿಕೆ: 860% ಲಾಭ ನೀಡಿದ ಸ್ಟಾಕ್​ ಖರೀದಿಗೆ ಬ್ರೋಕರೇಜ್​ ಸಂಸ್ಥೆಗಳ ಸಲಹೆ, ಟಾರ್ಗೆಟ್​ ಪ್ರೈಸ್​ ಶಿಫಾರಸು

    ಮುಂಬೈ: ತ್ರಿವೇಣಿ ಟರ್ಬೈನ್ ಲಿಮಿಟೆಡ್ (Triveni Turbine Ltd.​) ಷೇರುಗಳು ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ತ್ರಿವೇಣಿ ಟರ್ಬೈನ್ ಷೇರಿನ ಬೆಲೆ ಕೋವಿಡ್ ನಂತರದ ರ್ಯಾಲಿಯಲ್ಲಿ ಬಹುತೇಕ ಏರಿಕೆಯಾಗಿದ್ದು, 50ರಿಂದ 490 ರೂಪಾಯಿಯ ಮಟ್ಟವನ್ನು ಮುಟ್ಟಿದೆ. ಈ ಅವಧಿಯಲ್ಲಿ ಹೂಡಿಕೆದಾರರಿಗೆ 860 ಪ್ರತಿಶತದಷ್ಟು ಲಾಭವನ್ನು ನೀಡಿದೆ. ಈಗಲೂ ಕೆಲವು ಬ್ರೋಕರೇಜ್ ಸಂಸ್ಥೆಗಳು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಇನ್ನೂ ಬುಲಿಶ್ ಆಗಿದೆ ಎಂದೇ ಹೇಳುತ್ತವೆ.

    ತ್ರಿವೇಣಿ ಟರ್ಬೈನ್ ಲಿಮಿಟೆಡ್‌ನ ಷೇರುಗಳ ಬೆಲೆ ಗುರುವಾರ 7.77% ರಷ್ಟು ಏರಿಕೆಯಾಗಿ 496.05 ರೂಪಾಯಿ ತಲುಪಿತು. ಇಂಟ್ರಾ ಡೇ ವಹಿವಾಟಿನಲ್ಲಿ ಇದು ಗರಿಷ್ಠ 503 ರೂಪಾಯಿ ತಲುಪಿತ್ತು. ಬುಧವಾರ ಕೂಡ ಈ ಷೇರು 8.43%ರಷ್ಟು ಏರಿಕೆಯಾಗಿಯತ್ತು.

    ಪ್ರಮುಖ ಬ್ರೋಕರೇಜ್​ ಸಂಸ್ಥೆಯಾದ ಮೋತಿಲಾಲ್ ಓಸ್ವಾಲಾ, ಈ ಕಂಪನಿಯ ಷೇರಿನ ಗುರಿ ಬೆಲೆ (ಟಾರ್ಗೆಟ್​ ಪ್ರೈಸ್​) ಅನ್ನು ಪ್ರತಿ ಷೇರಿಗೆ 540 ರೂಪಾಯಿಗೆ ನಿಗದಿಪಡಿಸಿದ್ದಾರೆ. ಈ ಗುರಿ ಬೆಲೆಯೊಂದಿಗೆ ಷೇರುಗಳ ಮೇಲೆ ‘ಖರೀದಿ’ ಶಿಫಾರಸು ಮಾಡಿದ್ದಾರೆ.

    ಇನ್ನೊಂದು ಬ್ರೋಕರೇಜ್​ ಸಂಸ್ಥೆಯಾದ ಶೇರ್‌ಖಾನ್ ಕೂಡ ಈ ಮಲ್ಟಿಬ್ಯಾಗರ್ ಸ್ಟಾಕ್ ಅನ್ನು ಪ್ರತಿ ಷೇರಿಗೆ 550 ಗುರಿಯ ಬೆಲೆಯೊಂದಿಗೆ ಖರೀದಿಸಿ ಎಂದು ಹೇಳಿದೆ.


    ಕಳೆದ ಒಂದು ತಿಂಗಳಲ್ಲಿ ತ್ರಿವೇಣಿ ಟರ್ಬೈನ್ ಷೇರಿನ ಬೆಲೆ ಶೇಕಡಾ 25 ರಷ್ಟು ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ 20 ಪ್ರತಿಶತಕ್ಕಿಂತ ಸ್ವಲ್ಪ ಹೆಚ್ಚಳ ಕಂಡುಬಂದಿದೆ. ಕಳೆದ ಒಂದು ವರ್ಷದಲ್ಲಿ ತ್ರಿವೇಣಿ ಟರ್ಬೈನ್‌ನ ಷೇರಿನ ಬೆಲೆಯು ಶೇಕಡಾ 40 ರಷ್ಟು ಹೆಚ್ಚಾಗಿದೆ.

    ಮಾರ್ಚ್ 2020ರ ಅಂತ್ಯದ ವೇಳೆಗೆ, ತ್ರಿವೇಣಿ ಟರ್ಬೈನ್ ಷೇರಿನ ಬೆಲೆಯು ಪ್ರತಿ ಷೇರಿಗೆ ಅಂದಾಜು 50 ರೂಪಾಯಿಗೆ ಕುಸಿದಿತ್ತು. ಆದರೆ, ಈಗ ಈ ಷೇರಿನ ಬೆಲೆ ಅಂದಾಜು 480 ರೂಪಾಯಿ ತಲುಪಿದೆ. ಅಂದರೆ ನಾಲ್ಕು ವರ್ಷಗಳಲ್ಲಿ ಶೇ. 860ರಷ್ಟು ಏರಿಕೆಯಾಗಿದೆ.

    ಈ ಷೇರಿನ 52 ವಾರಗಳ ಗರಿಷ್ಠ ಮತ್ತು ಕನಿಷ್ಠ ಬೆಲೆ ಕ್ರಮವಾಗಿ 498.70 ಮತ್ತು 291.35 ರೂಪಾಯಿ ಇದೆ.

    ಈ ಸ್ಟಾಕ್ ಪ್ರಸ್ತುತ ಉತ್ತಮ ವಹಿವಾಟು ನಡೆಸುತ್ತಿದೆ. ಹೆಚ್ಚಿನ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ನಾವು ನಮ್ಮ ಅಂದಾಜುಗಳನ್ನು ಪರಿಷ್ಕರಿಸಿದ್ದೇವೆ. ಕಂಪನಿಯು ಮಾರುಕಟ್ಟೆಯ ಉಪಸ್ಥಿತಿಯನ್ನು ವಿಸ್ತರಿಸಲು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿರುವುದರಿಂದ ಬದಲಾವಣೆಗಳು ಬರಲಿವೆ. ನಾವು ನಮ್ಮ ಮೌಲ್ಯಮಾಪನವನ್ನು ಮಾರ್ಚ್ 26 ರವರೆಗೆ ವಿಸ್ತರಿಸುತ್ತೇವೆ. 540 ರೂಪಾಯಿಯ ಪರಿಷ್ಕೃತ ಗುರಿ ಬೆಲೆಯೊಂದಿಗೆ ಖರೀದಿ ರೇಟಿಂಗ್ ಅನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಮೋತಿಲಾಲ್ ಓಸ್ವಾಲ್ ಹೇಳಿದೆ.

    ಬಲವಾದ ಬೆಳವಣಿಗೆಯ ನಿರೀಕ್ಷೆ ಮತ್ತು ಪ್ರಬಲವಾದ ಮೇಲ್ಮುಖ ಸಾಮರ್ಥ್ಯ ಈ ಸ್ಟಾಕ್​ಗೆ ಇದೆ. ತ್ರಿವೇಣಿ ಟರ್ಬೈನ್ ಲಿಮಿಟೆಡ್‌ನಲ್ಲಿ ನಮ್ಮ ಖರೀದಿ ರೇಟಿಂಗ್ ಶಿಫಾರಸನ್ನು ನಾವು 550 ರೂಪಾಯಿಯ ಪರಿಷ್ಕೃತ ಗುರಿ ಬೆಲೆಯೊಂದಿಗೆ ನಿರ್ವಹಿಸುತ್ತೇವೆ ಎಂದು ಇದೇ ಸಮಯದಲ್ಲಿ ಶೇರ್​ಖಾನ್​ ತನ್ನ ವರದಿಯಲ್ಲಿ ಹೇಳಿದೆ.

    ತ್ರಿವೇಣಿ ಟರ್ಬೈನ್ ಲಿಮಿಟೆಡ್ ಒಂದು ಕೈಗಾರಿಕಾ ಸ್ಟೀಮ್ ಟರ್ಬೈನ್ ತಯಾರಕ ಕಂಪನಿಯಾಗಿದೆ. ಇದು ಪ್ರಾಥಮಿಕವಾಗಿ ವಿದ್ಯುತ್ ಉತ್ಪಾದಿಸುವ ಉಪಕರಣಗಳು ಮತ್ತು ಪರಿಹಾರಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ. ಯುರೋಪ್, ಆಫ್ರಿಕಾ, ಮಧ್ಯ ಮತ್ತು ಲ್ಯಾಟಿನ್ ಅಮೆರಿಕಾ, ಆಗ್ನೇಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ರಾಷ್ಟ್ರಗಳು ಸೇರಿದಂತೆ 75 ಕ್ಕೂ ಹೆಚ್ಚು ದೇಶಗಳಲ್ಲಿ 20 ಕೈಗಾರಿಕೆಗಳಲ್ಲಿ ಕಂಪನಿಯು ಪೂರೈಸಿರುವ ಸರಿಸುಮಾರು 6,000 ಸ್ಟೀಮ್ ಟರ್ಬೈನ್‌ಗಳನ್ನು ಸ್ಥಾಪಿಸಲಾಗಿದೆ.

    ಈ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ, 68.30 ಕೋಟಿ ರೂ. ಲಾಭ ಗಳಿಸಿದೆ. ಡಿಸೆಂಬರ್ 2022 ರ ತ್ರೈಮಾಸಿಕದಲ್ಲಿ 52.60 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ, ಲಾಭದಲ್ಲಿ 30% ಏರಿಕೆಯಾಗಿದೆ.

    ಕಂಪನಿಯ ಮಂಡಳಿಯು ರೂ 1 ರ ಮುಖಬೆಲೆಯ ಸಂಪೂರ್ಣ ಪಾವತಿಸಿದ ಈಕ್ವಿಟಿ ಷೇರಿಗೆ ರೂ 1.30 ರ ಮಧ್ಯಂತರ ಲಾಭಾಂಶವನ್ನು ಮತ್ತು ರೂ 1 ರ ಮುಖಬೆಲೆಯ ಸಂಪೂರ್ಣ ಪಾವತಿಸಿದ ಈಕ್ವಿಟಿ ಷೇರಿಗೆ ರೂ 1 ರ ವಿಶೇಷ ಲಾಭಾಂಶವನ್ನು ಘೋಷಿಸಿತ್ತು.

    ನೀವೆಷ್ಟು ಇನ್​ಕಮ್​ ಟ್ಯಾಕ್ಸ್​ ಪಾವತಿಸಬೇಕು: ಈ ವರ್ಷಕ್ಕೆ ಆದಾಯ ತೆರಿಗೆ ಪದ್ಧತಿ ಸರಳ ಲೆಕ್ಕಾಚಾರ ಹೀಗಿದೆ….

    ಕರಡಿಯ ಕುಣಿತಕ್ಕೆ ತಡೆಹಾಕಿದ ಗೂಳಿ: ಕೊನೆಯಲ್ಲಿ ಚೇತರಿಕೆ ಕಂಡ ಷೇರು ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts