More

    ಕರಡಿಯ ಕುಣಿತಕ್ಕೆ ತಡೆಹಾಕಿದ ಗೂಳಿ: ಕೊನೆಯಲ್ಲಿ ಚೇತರಿಕೆ ಕಂಡ ಷೇರು ಸೂಚ್ಯಂಕ

    ಮುಂಬೈ: ಷೇರುಗಳ ವಹಿವಾಟು ಒಪ್ಪಂದದ ಕಾಲಾವಧಿ ತಿಂಗಳಾಂತ್ಯಕ್ಕೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಗುರುವಾರ ಷೇರುಗಳ ಮಾರಾಟ ಒತ್ತಡ ಕಂಡುಬಂದಿತು. ಬೆಳಗಿನ ಅವಧಿಯಲ್ಲಿ ಕುಸಿದಿದ್ದ ಸೂಚ್ಯಂಕವು ನಂತರ ಒಂದಿಷ್ಟು ಚೇತರಿಸಿಕೊಂಡು ಲಾಭದಲ್ಲಿ ಮುಕ್ತಾಯವಾಯಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕವು 195.42 ಅಂಕಗಳು ಅಥವಾ ಶೇಕಡಾ 0.27 ರಷ್ಟು ಚೇತರಿಕೆ ಕಂಡು 72,500.30 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ ಇದು ಗರಿಷ್ಠ 72,730.00 ಮತ್ತು ಕನಿಷ್ಠ 72,099.32 ಅಂಕಗಳನ್ನು ತಲುಪಿತ್ತು.

    ನಿಫ್ಟಿ ಸೂಚ್ಯಂಕವು 31.65 ಅಂಕಗಳು ಅಥವಾ ಶೇಕಡಾ 0.14 ರಷ್ಟು ಏರಿಕೆ ಕಂಡು 21,982.80 ಕ್ಕೆ ತಲುಪಿತು.

    ಸೂಚ್ಯಂಕದ ಪ್ರಮುಖ ಷೇರುಗಳ ಪೈಕಿ, ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಮತ್ತು ಮಹೀಂದ್ರಾ, ಎಚ್‌ಸಿಎಲ್ ಟೆಕ್, ಪವರ್ ಗ್ರಿಡ್, ಮಾರುತಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟೈಟಾನ್, ಏಷ್ಯನ್ ಪೇಂಟ್ಸ್, ನೆಸ್ಲೆ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಪ್ರಮುಖವಾಗಿ ಲಾಭ ಗಳಿಸಿದವು.

    ವಾಲ್ಟ್ ಡಿಸ್ನಿ ಜತೆ ಭಾರತದಲ್ಲಿ ತಮ್ಮ ಮಾಧ್ಯಮ ಕಾರ್ಯಾಚರಣೆಗಳನ್ನು ವಿಲೀನಗೊಳಿಸಲು ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಘೋಷಿಸಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಇಂಟ್ರಾ-ಡೇ ಷೇರುಗಳ ವಹಿವಾಟು 2 ಪ್ರತಿಶತದಷ್ಟು ಏರಿಕೆ ಕಂಡಿತು.

    ಹಿಂದುಸ್ತಾನ್ ಯೂನಿಲಿವರ್, ಭಾರ್ತಿ ಏರ್‌ಟೆಲ್, ಟಾಟಾ ಮೋಟಾರ್ಸ್, ಐಟಿಸಿ, ಟೆಕ್ ಮಹೀಂದ್ರಾ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ಹಿನ್ನಡೆ ಕಂಡವು.

    ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.84 ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.50 ರಷ್ಟು ಏರಿಕೆ ದಾಖಲಿಸಿತು. ವಲಯವಾರು ಸೂಚ್ಯಂಕಗಳ ಪೈಕಿ, ಸೇವೆಗಳು ಶೇಕಡಾ 1.46, ಶಕ್ತಿಯು ಶೇಕಡಾ 1.01, ಸರಕುಗಳು (ಶೇ 0.79), ಕೈಗಾರಿಕೆಗಳು (0.74 ಶೇಕಡಾ), ಲೋಹ (0.74 ಶೇಕಡಾ) ಮತ್ತು ಬಂಡವಾಳ ಸರಕುಗಳು (ಶೇ 0.65) ಏರಿಕೆ ದಾಖಲಿಸಿದವು.

    ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ಕುಸಿತ ಕಂಡರೆ, ಶಾಂಘೈ ಏರಿಕೆ ದಾಖಲಿಸಿತು. ಐರೋಪ್ಯ ಮಾರುಕಟ್ಟೆಗಳು ಬಹುತೇಕವಾಗಿ ಲಾಭದಲ್ಲಿ ವಹಿವಾಟು ನಡೆಸುತ್ತಿದವು. ಬುಧವಾರದಂದು ಅಮೆರಿಕದ ಮಾರುಕಟ್ಟೆಗಳು ಸ್ವಲ್ಪ ಕುಸಿತ ಕಂಡವು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 1,879.23 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.

    ಬುಧವಾರ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 790.34 ಅಂಕಗಳು ಅಥವಾ ಶೇಕಡಾ 1.08 ರಷ್ಟು ಕುಸಿದು 72,304.88 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 247.20 ಅಂಕಗಳು ಅಥವಾ ಶೇ. 1.11 ರಷ್ಟು ಕುಸಿದು 21,951.15 ಕ್ಕೆ ತಲುಪಿತ್ತು.

    ಒಂದೇ ವರ್ಷದಲ್ಲಿ 1 ಲಕ್ಷವಾಯ್ತು 25 ಲಕ್ಷ: ಹೂಡಿಕೆದಾರರನ್ನು ಶ್ರೀಮಂತಗೊಳಿಸಿದ ಕಬ್ಬಿಣ-ಉಕ್ಕು ತಯಾರಿಕೆ ಕಂಪನಿ ಷೇರಿಗೆ ಮತ್ತೆ ಬೇಡಿಕೆ

    ಸ್ಥೂಲಕಾಯದವರಿಗೆ ಸಿಹಿ ಸುದ್ದಿ: ಅಮೆರಿಕದ ತೂಕ ಕರಗಿಸುವ ಔಷಧ ತಯಾರಿಕೆ ಕಂಪನಿ ಬರಲಿದೆ ಭಾರತಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts