More

    ಮಾರ್ಚ್​ 7ರಿಂದ ಐಪಿಒ ಸಬ್​​ಸ್ಕ್ರಿಪ್ಶನ್​ ಆರಂಭ: ರೂ 78ರ ಷೇರಿಗೆ ಗ್ರೇ ಮಾರುಕಟ್ಟೆಯಲ್ಲಿ 153 ರೂ; ಹೂಡಿಕೆದಾರರಿಗೆ ದೊಡ್ಡ ಲಾಭ ಖಚಿತ

    ಮುಂಬೈ: ಪುಣೆ ಇ-ಸ್ಟಾಕ್ ಬ್ರೋಕಿಂಗ್ ಐಪಿಒ ಬೆಲೆಯನ್ನು 78 ರಿಂದ 83 ರೂಪಾಯಿ ನಡುವೆ ನಿಗದಿಪಡಿಸಲಾಗಿದೆ. ಈ ಐಪಿಒಗೆ ಗುರುವಾರ, ಮಾರ್ಚ್ 7 ರಂದು ಚಂದಾದಾರಿಕೆ (ಸಬ್​ಸ್ಕ್ರಿಪ್ಶನ್​) ಆರಂಭವಾಗುತ್ತದೆ. ಮಂಗಳವಾರ, ಮಾರ್ಚ್ 12 ರಂದು ಮುಕ್ತಾಯಗೊಳ್ಳುತ್ತದೆ.

    ಹೂಡಿಕೆದಾರರು ಕನಿಷ್ಠ 1,600 ಷೇರುಗಳಿಗೆ ಬಿಡ್​ ಮಾಡಬೇಕಾಗುತ್ತದೆ. ಅಂದರೆ, ಕನಿಷ್ಠ 124800 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.

    InvestorGain.com ಪ್ರಕಾರ, ಪುಣೆ-ಸ್ಟಾಕ್ ಬ್ರೋಕಿಂಗ್ ಐಪಿಒದ ಷೇರುಗಳು ಈಗಾಗಲೇ ಗ್ರೇ ಮಾರ್ಕೆಟ್​ನಲ್ಲಿ 70 ರೂಪಾಯಿಯ ಪ್ರೀಮಿಯಂ ಬೆಲೆ ಗಳಿಸಿವೆ. ಇದರರ್ಥ ಗ್ರೇ ಮಾರ್ಕೆಟ್‌ನಲ್ಲಿ ಈ ಷೇರುಗಳ ಬೆಲೆ 153 ರೂಪಾಯಿ ತಲುಪಿದೆ. ಪಟ್ಟಿಯಾಗುವ ದಿನ ಇದೇ ಪ್ರವೃತ್ತಿ ಮುಂದುವರಿದರೆ ಹೂಡಿಕೆದಾರರು ಮೊದಲ ದಿನದಲ್ಲಿಯೇ 85% ಲಾಭ ಗಳಿಸಬಹುದು.

    ಪುಣೆ ಇ-ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್ ಕಂಪನಿಯು ವ್ಯವಹಾರವು ಕಾರ್ಪೊರೇಟ್ ಬ್ರೋಕರೇಜ್ ಆಗಿದೆ. ಕಂಪನಿಯ ಗ್ರಾಹಕರ ನಡುವೆ ನೇರ ಗ್ರಾಹಕರು ಮತ್ತು ನೋಂದಾಯಿತ ವ್ಯಕ್ತಿಗಳನ್ನು ಒಳಗೊಂಡಂತೆ, ಹತ್ತಕ್ಕೂ ಹೆಚ್ಚು ನಗರಗಳಲ್ಲಿ ಹರಡಿದೆ. ಮಾರ್ಚ್ 2023 ರಂತೆ ಒಟ್ಟು ಚಂದಾದಾರರ ಸಂಖ್ಯೆ 60,640 ಇದೆ. ದೆಹಲಿ ಮತ್ತು ಅಹಮದಾಬಾದ್‌ನಲ್ಲಿ ಎರಡು ಶಾಖೆಗಳನ್ನು ಹೊಂದಿದೆ.

    ಮಾರ್ಚ್ 31, 2023 ಮತ್ತು ಮಾರ್ಚ್ 31, 2022ರ ಮಧ್ಯದಲ್ಲಿ, ಪುಣೆ-ಸ್ಟಾಕ್ ಬ್ರೋಕಿಂಗ್ ಲಿಮಿಟೆಡ್‌ನ ತೆರಿಗೆ ನಂತರದ ಲಾಭ (PAT) 4.69% ರಷ್ಟು ಕುಸಿದರೆ, ಆದಾಯವು 12.06% ರಷ್ಟು ಕುಸಿದಿದೆ.

    ರಿಲಯನ್ಸ್- ಡಿಸ್ನಿ ವಿಲೀನ ಒಪ್ಪಂದಕ್ಕೆ ಅಂಕಿತ: OTTಯಲ್ಲಿ ಇನ್ನು ಪೈಪೋಟಿ, ನೀತಾ ಅಂಬಾನಿಗೆ ಹೊಸ ಕಂಪನಿ ಜವಾಬ್ದಾರಿ

    ಬೋನಸ್ ಷೇರು, ವಾರಂಟ್‌ ಹಂಚಿಕೆ ನಿರ್ಧಾರ: ವರ್ಷದಲ್ಲಿ 153% ಏರಿಕೆ ಕಂಡ ಐಟಿ ಸ್ಟಾಕ್ ಸತತ ಅಪ್ಪರ್​ ಸರ್ಕ್ಯೂಟ್​ ಹಿಟ್​

    2.5% ಡಿವಿಡೆಂಡ್​; 1:1 ಬೋನಸ್ ಷೇರು ನೀಡಲಿರುವ ಕಂಪನಿಗಳ ಮೇಲೆ ಹೂಡಿಕೆದಾರರ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts