More

  ರಿಲಯನ್ಸ್- ಡಿಸ್ನಿ ವಿಲೀನ ಒಪ್ಪಂದಕ್ಕೆ ಅಂಕಿತ: OTTಯಲ್ಲಿ ಇನ್ನು ಪೈಪೋಟಿ, ನೀತಾ ಅಂಬಾನಿಗೆ ಹೊಸ ಕಂಪನಿ ಜವಾಬ್ದಾರಿ

  ಮುಂಬೈ: ಮುಖೇಶ್ ಅಂಬಾನಿಯವರ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ ತಮ್ಮ ಮಾಧ್ಯಮ ಕಾರ್ಯಾಚರಣೆಗಳನ್ನು ವಿಲೀನಗೊಳಿಸಲು ವಾಲ್ಟ್ ಡಿಸ್ನಿಯೊಂದಿಗೆ ಬದ್ಧ ಒಪ್ಪಂದವನ್ನು ಮಾಡಿಕೊಂಡಿದೆ.

  ರಿಲಯನ್ಸ್ ಇಂಡಸ್ಟ್ರೀಸ್ ಈ ವಿಲೀನದ ಬಗ್ಗೆ ಸ್ಟಾಕ್ ಎಕ್ಸ್​ಚೇಂಜ್​ಗೆ ಅಧಿಕೃತ ಮಾಹಿತಿಯನ್ನು ನೀಡಿದೆ. ಈ ವಿಲೀನ ಪ್ರಕ್ರಿಯೆಯಲ್ಲಿ ಪ್ರಮುಖ ಪಾಲುದಾರರು ರಿಲಯನ್ಸ್ ಇಂಡಸ್ಟ್ರೀಸ್ ಆಗಿದ್ದರೆ, ಡಿಸ್ನಿಯ ಪಾಲು ಶೇಕಡಾ 40 ಕ್ಕಿಂತ ಕಡಿಮೆಯಿದೆ. ಈ ಒಪ್ಪಂದವು 70 ಸಾವಿರ ಕೋಟಿ ರೂ. ಮೊತ್ತದ್ದಾಗಿದೆ.

  ಎಷ್ಟು ಪಾಲು?:

  ರಿಲಯನ್ಸ್ ಇಂಡಸ್ಟ್ರೀಸ್, ವಯಾಕಾಮ್ 18 (Viacom18) ಮತ್ತು ಡಿಸ್ನಿ ಈ ಹೊಸ ಘಟಕದಲ್ಲಿ ಕ್ರಮವಾಗಿ 16.34%, 46.82% ಮತ್ತು 36.84% ಪಾಲು ಮತ್ತು ನಿಯಂತ್ರಣ ಇಟ್ಟುಕೊಳ್ಳಲಿವೆ.

  ವಯಾಕಾಮ್ 18 ರಿಲಯನ್ಸ್‌ನ ಅಂಗಸಂಸ್ಥೆಯಾಗಿರುವುದರಿಂದ, ಹೊಸ ವಿಲೀನ ಘಟಕದಲ್ಲಿ ರಿಲಯನ್ಸ್ ಒಟ್ಟು ಶೇಕಡಾ 63.16ರಷ್ಟು ಪಾಲನ್ನು ಹೊಂದಲಿದೆ.

  ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಅವರು ಡಿಸ್ನಿ ವಿಲೀನದ ನಂತರ ರೂಪುಗೊಂಡ ಘಟಕದ ಅಧ್ಯಕ್ಷರಾಗುತ್ತಾರೆ. ಇದೇ ವೇಳೆ ನೂತನ ಘಟಕದ ಉಪಾಧ್ಯಕ್ಷರಾಗಲಿದ್ದಾರೆ ಉದಯ ಶಂಕರ್‌. ಈ ವಿಲೀನವು ವಿವಿಧ ನಿಯಂತ್ರಕರಿಂದ ಅನುಮೋದನೆಯ ನಂತರ ಜಾರಿಗೆ ಬರಲಿದೆ.

  ಒಟಿಟಿ ಮೇಲೆ ಫೋಕಸ್​:

  ರಿಲಯನ್ಸ್ ತನ್ನ OTT ವ್ಯವಹಾರವನ್ನು ವಿಸ್ತರಿಸಲು ಜಂಟಿ ಉದ್ಯಮದಲ್ಲಿ ಸರಿಸುಮಾರು 11,500 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಕೊಂಡಿದೆ.
  ನಾವು ಭಾರತದಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಡಿಜಿಟಲ್ ರೂಪಾಂತರವನ್ನು ಮುನ್ನಡೆಸುತ್ತಿದ್ದೇವೆ. ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮತ್ತು ಹೆಚ್ಚಿನ ವಿಷಯವನ್ನು ಒದಗಿಸುತ್ತೇವೆ. ವಿಲೀನಗೊಂಡ ಘಟಕವು 30,000 ಕ್ಕೂ ಹೆಚ್ಚು ಡಿಸ್ನಿ ಕಂಟೆಂಟ್​ ಆಸ್ತಿಗಳ ಪರವಾನಗಿಯೊಂದಿಗೆ ಭಾರತದಲ್ಲಿ ಡಿಸ್ನಿ ಚಲನಚಿತ್ರಗಳ ವಿತರಣಾ ಹಕ್ಕುಗಳನ್ನು ಸಹ ಹೊಂದಿರುತ್ತದೆ ಎಂದು ರಿಲಯನ್ಸ್ ಹೇಳಿದೆ.

  ವಿಲೀನದ ಬಗ್ಗೆ ಮುಕೇಶ್ ಅಂಬಾನಿ ಹೇಳಿದ್ದೇನು?:

  ವಿಲೀನದ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು, ಇದು ಐತಿಹಾಸಿಕ ಒಪ್ಪಂದವಾಗಿದೆ. ಈ ಒಪ್ಪಂದವು ಭಾರತೀಯ ಮನರಂಜನಾ ಉದ್ಯಮದಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ನಾವು ಯಾವಾಗಲೂ ಡಿಸ್ನಿಯನ್ನು ಜಾಗತಿಕವಾಗಿ ಅತ್ಯುತ್ತಮ ಮಾಧ್ಯಮ ಗುಂಪು ಎಂದು ಗೌರವಿಸುತ್ತೇವೆ. ಈ ಜಂಟಿ ಉದ್ಯಮದ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ. ಈ ವಿಲೀನವು ದೇಶದಾದ್ಯಂತದ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೆಚ್ಚು ಬಹುಮುಖ ವಿಷಯವನ್ನು ಒದಗಿಸಲು ನಮಗೆ ಸಹಾಯ ಮಾಡುತ್ತದೆ. ರಿಲಯನ್ಸ್ ಗ್ರೂಪ್‌ನ ಪ್ರಮುಖ ಪಾಲುದಾರರಾಗಿ ನಾವು ಡಿಸ್ನಿಯನ್ನು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

  2.5% ಡಿವಿಡೆಂಡ್​; 1:1 ಬೋನಸ್ ಷೇರು ನೀಡಲಿರುವ ಕಂಪನಿಗಳ ಮೇಲೆ ಹೂಡಿಕೆದಾರರ ಕಣ್ಣು

  ಬೋನಸ್ ಷೇರು, ವಾರಂಟ್‌ ಹಂಚಿಕೆ ನಿರ್ಧಾರ: ವರ್ಷದಲ್ಲಿ 153% ಏರಿಕೆ ಕಂಡ ಐಟಿ ಸ್ಟಾಕ್ ಸತತ ಅಪ್ಪರ್​ ಸರ್ಕ್ಯೂಟ್​ ಹಿಟ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts