More

    ಷೇರು ಬೆಲೆ ಒಂದು ವಾರದಲ್ಲಿ 25%; ಒಂದೇ ದಿನದಲ್ಲಿ 10% ಏರಿಕೆ: ಮುಖೇಶ್​ ಅಂಬಾನಿಯಿಂದಲೂ ಈ ಕಂಪನಿಯಲ್ಲಿ ಬೆಟ್​

    ಮುಂಬೈ: ಸ್ಟರ್ಲಿಂಗ್ ಮತ್ತು ವಿಲ್ಸನ್ ರಿನ್ಯೂವಬಲ್ಸ್ ಲಿಮಿಟೆಡ್ (Sterling & Wilson Renewables Ltd) ಷೇರುಗಳ ಬೆಲೆ ಸೋಮವಾರ 10% ರಷ್ಟು ಏರಿತು. ಕಂಪನಿಯ ಷೇರುಗಳ ಬೆಲೆ 617.65 ರೂ. ಮುಟ್ಟಿತು. ಕಳೆದ ಒಂದು ವಾರದಲ್ಲಿ ಈ ಷೇರು ಬೆಲೆ 24.36% ಏರಿಕೆಯಾಗಿದೆ.

    ಕಂಪನಿಯ ಷೇರುಗಳ ಈ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ವಾಸ್ತವವಾಗಿ, ಕಂಪನಿಯು ತನ್ನ ತ್ರೈಮಾಸಿಕ ಫಲಿತಾಂಶಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನೈಜೀರಿಯಾದಿಂದ ಆರ್ಡರ್​ಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ.

    ಮಾರ್ಚ್ ತ್ರೈಮಾಸಿಕ ಗಳಿಕೆ ಪ್ರಕಟಣೆಯಲ್ಲಿ, ಕಂಪನಿಯ ಅಘೋಷಿತ ಆರ್ಡರ್​ಗಳ ಮೊತ್ತವು ಈಗ ರೂ. 8,000 ಕೋಟಿ ದಾಟಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಆದರೂ, ಆ ಅಂಕಿ ಅಂಶವು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನೈಜೀರಿಯಾದ ಆರ್ಡರ್​ಗಳನ್ನು ಒಳಗೊಂಡಿಲ್ಲ. ಜನವರಿ-ಮಾರ್ಚ್ ಮೂರು ತಿಂಗಳ ಅವಧಿಯಲ್ಲಿ ಸ್ಟರ್ಲಿಂಗ್ ಮತ್ತು ವಿಲ್ಸನ್ ಕಂಪನಿ ರೂ. 488 ಕೋಟಿ ಮೌಲ್ಯದ ಆರ್ಡರ್‌ಗಳನ್ನು ಸ್ವೀಕರಿಸಿದೆ.

    ಸ್ಟರ್ಲಿಂಗ್ ಮತ್ತು ವಿಲ್ಸನ್‌ನ ಮಾರ್ಚ್ ತ್ರೈಮಾಸಿಕ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡು ರೂ. 1,178 ಕೋಟಿಗೆ ಮುಟ್ಟಿದೆ.

    ಕಂಪನಿಯ ಷೇರುದಾರರ ಮಾದರಿಯ ಪ್ರಕಾರ, ಮಾರ್ಚ್ 31, 2024 ರವರೆಗೆ ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್ ಕಂಪನಿಯು ಸ್ಟರ್ಲಿಂಗ್ ಮತ್ತು ವಿಲ್ಸನ್‌ನಲ್ಲಿ 32.54% ಪಾಲನ್ನು ಹೊಂದಿದೆ.

    ಸೋಮವಾರದಂದು ಸ್ಟರ್ಲಿಂಗ್ ಮತ್ತು ವಿಲ್ಸನ್ ಷೇರುಗಳ ಬೆಲೆ 10% ಏರಿಕೆಯಾಗಿ 617.15 ರೂ. ತಲುಪಿತು. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ. 647 ಹಾಗೂ ಕನಿಷ್ಠ ಬೆಲೆ 253.45 ರೂ. ಇದೆ. ಕಳೆದ 12 ತಿಂಗಳಲ್ಲಿ ಈ ಸ್ಟಾಕ್ ಬೆಲೆ 92% ಹೆಚ್ಚಾಗಿದೆ. ಕಂಪನಿಯ ಷೇರುಗಳು ಸತತ ನಾಲ್ಕನೇ ದಿನವೂ ಈಗ ಏರಿಕೆ ಕಾಣುತ್ತಿವೆ. ನಾಲ್ಕು ದಿನಗಳಲ್ಲಿ ಈ ಸ್ಟಾಕ್ 23% ಹೆಚ್ಚಾಗಿದೆ.

    ಸ್ಟರ್ಲಿಂಗ್ ಮತ್ತು ವಿಲ್ಸನ್ ಭಾರತದ ಪ್ರಮುಖ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (EPC) ಕಂಪನಿಗಳಲ್ಲಿ ಒಂದಾಗಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts