More

    9 ಕೋಟಿ ರೈತರಿಗೆ ಸಿಹಿ ಸುದ್ದಿ: ಪಿಎಂ ಕಿಸಾನ್​ ಸಮ್ಮಾನ ನಿಧಿಯ 16ನೇ ಕಂತು ಬಿಡುಗಡೆ, ನಿಮ್ಮ ಹೆಸರು ಹೀಗೆ ಪರಿಶೀಲಿಸಿಕೊಳ್ಳಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ.

    ಬುಧವಾರ ಪ್ರಧಾನಿ ಮೋದಿ ಅವರು ಮಹಾರಾಷ್ಟ್ರದ ಯವತ್ಮಾಲ್‌ನಿಂದ ಅಂದಾಜು 9 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 21,000 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದರು. ಪಿಎಂ ಕಿಸಾನ್‌ ಸಮ್ಮಾನ್​ ನಿಧಿ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕವಾಗಿ 6,000 ರೂಪಾಯಿ ನಗದು ಹಣವನ್ನು ನೀಡಲಾಗುತ್ತದೆ. ಈ ಮೊತ್ತವನ್ನು ತಲಾ 2000 ರೂ.ಗಳ ಮೂರು ಸಮಾನ ಕಂತುಗಳಾಗಿ ವಿಂಗಡಿಸಿ ವರ್ಗಾವಣೆ ಮಾಡಲಾಗುತ್ತದೆ.

    ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಶ್ಲಾಘಿಸಿದರು. ಇದುವರೆಗೆ ಕೋಟ್ಯಂತರ ರೈತರು ಯೋಜನೆಯ ಲಾಭ ಪಡೆದಿದ್ದಾರೆ. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ರೈತರಿಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತವನ್ನು ನೀಡಲಾಗಿದೆ. ಡಿಬಿಟಿ ಮೂಲಕ ಪಾವತಿ ಮಾಡುವ ವಿಶ್ವದ ಅತಿದೊಡ್ಡ ಯೋಜನೆ ಇದಾಗಿದೆ. ಈ ಯೋಜನೆಯು ರೈತರ ಜೀವನವನ್ನು ಸುಲಭಗೊಳಿಸಲು ಮತ್ತು ಕೃಷಿಯನ್ನು ಉತ್ತೇಜಿಸುವಲ್ಲಿ ಐತಿಹಾಸಿಕವಾಗಿದೆ ಎಂದು ಶಾ ಹೇಳಿದರು.

    ಈ ಯೋಜನೆಯ 15 ನೇ ಕಂತಿನ ಹಣವನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು 15 ನವೆಂಬರ್ 2023 ರಂದು ಪಿಎಂ ಕಿಸಾನ್ ಯೋಜನೆಯ 15 ನೇ ಕಂತನ್ನು ಬಿಡುಗಡೆ ಮಾಡಿದ್ದರು. 8 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ 15ನೇ ಕಂತಾಗಿ 18,000 ಕೋಟಿ ರೂ.ಗಳನ್ನು ಆಗ ಬಿಡುಗಡೆ ಮಾಡಲಾಗಿತ್ತು.

    ಫಲಾನುಭವಿಗಳ ಪಟ್ಟಿ ಪರಿಶೀಲನೆ ಹೀಗಿ ಮಾಡಿ:

    1. ಪಿಎಂ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ pmkisan.gov.in
    2. ಮುಖಪುಟದಲ್ಲಿ ‘ಫಾರ್ಮರ್ಸ್ ಕಾರ್ನರ್’ ಆಯ್ಕೆ ಮಾಡಿ
    3. ಇದರ ನಂತರ ‘ಫಲಾನುಭವಿ ಸ್ಥಿತಿ’ ಮೇಲೆ ಕ್ಲಿಕ್ ಮಾಡಿ
    4. ಇದರ ನಂತರ ನೀವು ಡ್ರಾಪ್-ಡೌನ್ ಮೆನುವಿನಿಂದ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಅಥವಾ ಗ್ರಾಮವನ್ನು ಆಯ್ಕೆ ಮಾಡಬಹುದು.
    5. ಇದರ ನಂತರ ಸ್ಟೇಟಸ್ ತಿಳಿಯಲು ‘Get Report’ ಮೇಲೆ ಕ್ಲಿಕ್ ಮಾಡಿ.

    ರೈತರಿಗೆ ಸಹಾಯವಾಣಿ ಸಂಖ್ಯೆ:

    ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ನಂತರ ನೀವು ಇಮೇಲ್ ಐಡಿ [email protected] ನಲ್ಲಿ ಸಂಪರ್ಕಿಸಬಹುದು.

    ಇದಲ್ಲದೆ, ನೀವು ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ಸಂಖ್ಯೆ – 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಸಂಪರ್ಕಿಸಬಹುದು.

    ಚಾಟ್‌ಬಾಟ್‌ನಿಂದ ಸಹಾಯ ಲಭ್ಯ:

    ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪಿಎಂ-ಕಿಸಾನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಾಟ್‌ಬಾಟ್ (ಕಿಸಾನ್ ಇ-ಮಿತ್ರ) ಅನ್ನು ಸಹ ಪ್ರಾರಂಭಿಸಿದೆ, ಇದು ಪಿಎಂ-ಕಿಸಾನ್ ಮೂಲಕ ರೈತರಿಗೆ ಮಾಹಿತಿಯನ್ನು ಒದಗಿಸುತ್ತದೆ.

    ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದ ದೂರುಗಳಿಗೆ ಒಂದು-ನಿಲುಗಡೆ ಪರಿಹಾರವನ್ನು ಒದಗಿಸುತ್ತದೆ. ಇದು ಸ್ಥಳೀಯ ಭಾಷೆಗಳಾದ ಹಿಂದಿ, ತಮಿಳು, ಒಡಿಯಾ, ಬೆಂಗಾಲಿ ಮತ್ತು ಇಂಗ್ಲಿಷ್‌ನಲ್ಲಿ ಚಾಟ್‌ಬಾಟ್‌ನಲ್ಲಿ ಸಹಾಯವನ್ನು ಒದಗಿಸುತ್ತದೆ.

    ಬುಧವಾರದ ಷೇರು ಮಾರುಕಟ್ಟೆ ಕುಸಿತದಲ್ಲೂ 20% ಏರಿಕೆ ಕಂಡ ಸ್ಟಾಕ್​ಗಳು: ಗುರುವಾರವೂ ಮುಂದುವರಿಯಬಹುದು ಏರುಪ್ರವೃತ್ತಿ

    ಬುಧವಾರ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಹೂಡಿಕೆದಾರರಿಗೆ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂಪಾಯಿ ನಷ್ಟ

    2700 ರಿಂದ 11 ರೂಪಾಯಿಗೆ ಕುಸಿದಿದ್ದ ಅನಿಲ್​ ಅಂಬಾನಿ ಕಂಪನಿಯ ಷೇರು: ಈಗ ಡಿಲಿಸ್ಟ್​ ಆದ ಸ್ಟಾಕ್​ ಸಂಪೂರ್ಣ ದಿವಾಳಿಯಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts