More

    ಬುಧವಾರ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಹೂಡಿಕೆದಾರರಿಗೆ ಒಂದೇ ದಿನದಲ್ಲಿ 6 ಲಕ್ಷ ಕೋಟಿ ರೂಪಾಯಿ ನಷ್ಟ

    ಮುಂಬೈ: ಬುಧವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕರಡಿಯ ಕುಣಿತ ಜೋರಾಗಿತ್ತು. ಹೀಗಾಗಿ, ಒಂದೇ ದಿನದಲ್ಲಿ ಹೂಡಿಕೆದಾರರು ಅಂದಾಜು 6 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದರು.

    ಬುಧವಾರ ಬೆಂಚ್‌ಮಾರ್ಕ್ ಸೂಚ್ಯಂಕ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿರೆ, ನಿಫ್ಟಿ ಸೂಚ್ಯಂಕವು 22,000 ಮಟ್ಟಕ್ಕಿಂತ ಕೆಳಗಿಳಿಯಿತು. ದುರ್ಬಲ ಜಾಗತಿಕ ಮಾರುಕಟ್ಟೆಯ ಪ್ರವೃತ್ತಿಗಳ ನಡುವೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬ್ಯಾಂಕ್ ಷೇರುಗಳಲ್ಲಿ ಹೆಚ್ಚಿನ ಮಾರಾಟದಿಂದಾಗಿ ಸೂಚ್ಯಂಕ ಕುಸಿತ ಕಂಡಿತು.

    30-ಷೇರುಗಳ ಬಿಎಸ್‌ಇ ಸೂಚ್ಯಂಕ 790.34 ಅಂಕಗಳು ಅಥವಾ ಶೇಕಡಾ 1.08 ರಷ್ಟು ಕುಸಿದು 72,304.88 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ, ಇದು 872.93 ಅಂಗಳು ಅಥವಾ ಶೇಕಡಾ 1.19ರಷ್ಟು ಕಡಿಮೆಯಾಗಿ 72,222.29 ಕ್ಕೆ ಕುಸಿದಿತ್ತು. ನಿಫ್ಟಿ ಸೂಚ್ಯಂಕವು 247.20 ಅಂಕಗಳು ಅಥವಾ 1.11 ರಷ್ಟು ಕುಸಿದು 21,951.15 ಕ್ಕೆ ತಲುಪಿತು.

    ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ, ವಿಪ್ರೋ, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಏಷ್ಯನ್ ಪೇಂಟ್ಸ್, ಮಹೀಂದ್ರಾ ಮತ್ತು ಮಹೀಂದ್ರಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಮೊದಲಾದ ಷೇರುಗಳು ಕುಸಿತ ಕಂಡವು. ಇದೇ ವೇಳೆ, ಹಿಂದೂಸ್ತಾನ್ ಯೂನಿಲಿವರ್, ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಲಾಭ ಗಳಿಸಿದವು.

    ಏಷ್ಯದ ಮಾರುಕಟ್ಟೆಗಳ ಪೈಕಿ, ಸಿಯೋಲ್ ಲಾಭ ಕಂಡರೆ, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ದಾಖಲಿಸಿದವು. ಐರೋಪ್ಯ ಮಾರುಕಟ್ಟೆಗಳು ಬಹುತೇಕವಾಗಿ ಕಡಿಮೆ ವಹಿವಾಟು ನಡೆಸುತ್ತಿದವು. ಮಂಗಳವಾರದಂದು ಅಮೆರಿಕ ಮಾರುಕಟ್ಟೆಗಳು ಏರಿಕೆ ಕಂಡವು.

    ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ ಮಂಗಳವಾರ 305.09 ಅಂಕಗಳಷ್ಟು ಏರಿಕೆಯಾಗಿ 73,095.22 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 76.30 ಅಂಕಗಳಷ್ಟು ಏರಿಕೆಯಾಗಿ 22,198.35 ಕ್ಕೆ ತಲುಪಿತ್ತು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 1,509.16 ಕೋಟಿ ರೂಪಾಯಿ ಮೌಲ್ಯದ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಇತರೆ ಸೂಚ್ಯಂಕಗಳು

    ಬಿಎಸ್​ಇ ಮಿಡ್​ ಕ್ಯಾಪ್​ ಸೂಚ್ಯಂಕ: 39,019.19 (1.82% ಕುಸಿತ)
    ಬಿಎಸ್​ಇ ಸ್ಮಾಲ್​ ಕ್ಯಾಪ್​ ಸೂಚ್ಯಂಕ: 44,998.14 (1.94% ಕುಸಿತ)
    ನಿಫ್ಟಿ ಮಿಡ್​ಕ್ಯಾಪ್​ 100 ಸೂಚ್ಯಂಕ: 48,089.10 (1.94% ಕುಸಿತ)
    ನಿಫ್ಟಿ ಸ್ಮಾಲ್​​ಕ್ಯಾಪ್​ 100 ಸೂಚ್ಯಂಕ: 15,875.15 (1.87% ಕುಸಿತ)

    2700 ರಿಂದ 11 ರೂಪಾಯಿಗೆ ಕುಸಿದಿದ್ದ ಅನಿಲ್​ ಅಂಬಾನಿ ಕಂಪನಿಯ ಷೇರು: ಈಗ ಡಿಲಿಸ್ಟ್​ ಆದ ಸ್ಟಾಕ್​ ಸಂಪೂರ್ಣ ದಿವಾಳಿಯಾಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts