More

    ಓವೈಸ್ ಮೆಟಲ್ ಐಪಿಒ ಬೆಲೆ 83 ರೂ; ಗ್ರೇ ಮಾರ್ಕೆಟ್​ನಲ್ಲಿ 120 ರೂ. ಪ್ರೀಮಿಯಂ; ಷೇರು ಹಂಚಿಕೆಯಾದ ತಕ್ಷಣವೇ 137% ಲಾಭ!!

    ಮುಂಬೈ: ಓವೈಸ್ ಮೆಟಲ್ ಮತ್ತು ಮಿನರಲ್‌ನ ಐಪಿಒಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒವೈಸ್ ಮೆಟಲ್ ಐಪಿಒ ಕೇವಲ ಎರಡು ದಿನಗಳಲ್ಲಿ 47 ಪಟ್ಟು ಹೆಚ್ಚು ಚಂದಾದಾರಿಕೆಯಾಗಿದೆ. ಅಂದರೆ, ಐಪಿಒದಲ್ಲಿ ಷೇರುಗಳಿಗೆ 42 ಪಟ್ಟು ಬೇಡಿಕೆ ವ್ಯಕ್ತವಾಗಿದೆ.

    ಈ ಕಂಪನಿಯ ಐಪಿಒನಲ್ಲಿ ಬಾಜಿ ಕಟ್ಟಲು ಬುಧವಾರ 28 ಫೆಬ್ರವರಿ ಕೊನೆಯ ದಿನವಾಗಿದೆ. ಈ ಕಂಪನಿಯ ಸಾರ್ವಜನಿಕ ವಿತರಣೆಯ (ಐಪಿಒ) ಒಟ್ಟು ಗಾತ್ರ 42.69 ಕೋಟಿ ರೂ. ಇದೆ. ಕಂಪನಿಯ ಷೇರುಗಳನ್ನು ಮಾರ್ಚ್ 4, 2024 ರಂದು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುವುದು.

    ಈ ಐಪಿಒದಲ್ಲಿ ಷೇರುಗಳ ಬೆಲೆ 83 ರಿಂದ 87 ರೂ. ಇದೆ. ಆದರೆ, ಕಂಪನಿಯ ಷೇರುಗಳು ಈಗಾಗಲೇ ಗ್ರೇ ಮಾರ್ಕೆಟ್‌ನಲ್ಲಿ 120 ರೂ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಹೀಗಾಗಿ, ಐಪಿಒದಲ್ಲಿ 87 ರೂ. ಇರುವ ಈ ಷೇರುಗಳು ರೂ 207 ರ ಆಸುಪಾಸಿನ ಬೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಪಟ್ಟಿಮಾಡಬಹುದು. ಅಂದರೆ, ಐಪಿಒನಲ್ಲಿ ಕಂಪನಿಯ ಷೇರುಗಳು ಹಂಚಿಕೆಯಾದ ಹೂಡಿಕೆದಾರರು, ಪಟ್ಟಿ ಮಾಡುವ ದಿನದಂದು 137% ಕ್ಕಿಂತ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಕಂಪನಿಯ ಐಪಿಒನಲ್ಲಿನ ಷೇರುಗಳ ಹಂಚಿಕೆಯು ಗುರುವಾರ, ಫೆಬ್ರವರಿ 29, 2024 ರಂದು ನಡೆಯಲಿದೆ.

    ಓವೈಸ್ ಮೆಟಲ್ ಐಪಿಒ ಎರಡನೇ ದಿನದವರೆಗೆ ಒಟ್ಟು 47.99 ಬಾರಿ ಚಂದಾದಾರಿಕೆಯಾಗಿದೆ. ಚಿಲ್ಲರೆ ಹೂಡಿಕೆದಾರರ ಕೋಟಾದಲ್ಲಿ 79.55 ಪಟ್ಟು ಚಂದಾದಾರಿಕೆಯಾಗಿದೆ. ಇದೇ ಸಮಯದಲ್ಲಿ, ಸಾಂಸ್ಥಿಕವಲ್ಲದ ಹೂಡಿಕೆದಾರರ (NII) ಕೋಟಾವು 37.30 ಪಟ್ಟು ಚಂದಾದಾರಿಕೆಯಾಗಿದೆ. ಅರ್ಹ ಸಾಂಸ್ಥಿಕ ಖರೀದಿದಾರರು(QIB) ಕೋಟಾವನ್ನು 0.71 ಪಟ್ಟು ಸಬ್‌ಸ್ಕ್ರೈಬ್ ಮಾಡಲಾಗಿದೆ.

    ಕಂಪನಿಯ ಐಪಿಒನಲ್ಲಿ ಚಿಲ್ಲರೆ ಹೂಡಿಕೆದಾರರು ಕನಿಷ್ಠ 1 ಲಾಟ್‌ಗೆ ಬಿಡ್ ಮಾಡಬಹುದು. ಒಂದು ಲಾಟ್​ನಲ್ಲಿ 1600 ಷೇರುಗಳಿವೆ. ಅಂದರೆ, ಚಿಲ್ಲರೆ ಹೂಡಿಕೆದಾರರು ಕನಿಷ್ಠ 1,39,200 ರೂ. ಹೂಡಿಕೆ ಮಾಡಬೇಕಾಗುತ್ತದೆ. ಐಪಿಒ ಮೊದಲು, ಕಂಪನಿಯಲ್ಲಿ ಪ್ರವರ್ತಕರ ಪಾಲು ಶೇಕಡಾ 100 ರಷ್ಟಿತ್ತು, ಇದು ಐಪಿಒ ನಂತರ ಶೇಕಡಾ 73.01 ಕ್ಕೆ ಇಳಿಯುತ್ತದೆ.

    ರೂ 1.46 ರಿಂದ ರೂ 1469.30ಕ್ಕೆ ಏರಿಕೆ ಕಂಡಿರುವ ಷೇರು: ಮತ್ತೆ ಖರೀದಿ ರೇಟಿಂಗ್​ ನೀಡಿ ಟಾರ್ಗೆಟ್​ ಪ್ರೈಸ್​ ಹೆಚ್ಚಿಸಿರುವ ತಜ್ಞರು

    ಬೆಲೆ ಕುಸಿದಿರುವ ಅದಾನಿ ಗ್ರೂಪ್​ನ ಈ 3 ಷೇರು ಖರೀದಿಸಲು ಶಿಫಾರಸು

    ಮಂಗಳವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಷೇರುಗಳು: ಬುಧವಾರವೂ ಈ ಸ್ಟಾಕ್​ಗಳು ಲಾಭ ಕೊಡುವ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts