More

    ಲೂಟಿ ಹೊಡೆಯಲು ಮತ್ತೆ ಒಂದಾಗಿವೆ: ಡಿಎಂಕೆ, ಕಾಂಗ್ರೆಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಕನ್ಯಾಕುಮಾರಿ (ತಮಿಳುನಾಡು): ಜನರನ್ನು ಲೂಟಿ ಮಾಡುವ ಸಲುವಾಗಿ ಡಿಎಂಕೆ ಮತ್ತು ಕಾಂಗ್ರೆಸ್ ಒಂದಾಗಿವೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಎರಡೂ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.

    ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಬಿಜೆಪಿಯ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.

    ಇದನ್ನೂ ಓದಿ: ಜಲಂಧರ್‌ನಲ್ಲಿರುವ ಅನಿವಾಸಿ ಭಾರತೀಯನ ಮನೆ ಮೇಲೆ ಲಿಬರ್ಟಿ ಪ್ರತಿಮೆ..ಕಾರಣ ಹೀಗಿದೆ ನೋಡಿ

    2ಜಿ ಸ್ಪೆಕ್ಟ್ರಂ ಹಗರಣದ ‘ಅತಿದೊಡ್ಡ ಫಲಾನುಭವಿ ‘ಡಿಎಂಕೆ’ಯಾಗಿದೆ. ಬಿಜೆಪಿಯು ಜನರ ಸಂಕಷ್ಟಕ್ಕೆ ನೆರವಾಗುತ್ತ, ಅಭಿವೃದ್ಧಿಗೆ ಆದ್ಯತೆ ನೀಡಿದ್ದರೂ ವಿರೋಧ ಪಕ್ಷಗಳ ಮೈತ್ರಿಕೂಟವಾದ ‘INDIA’ ತನ್ನ ಹೆಸರಿನೊಂದಿಗೇ ‘ವಂಚನೆ’ಗಳನ್ನು ಮಾತ್ರ ಜೋಡಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು.

    ಈ ಹಿಂದೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳು ಅಧಿಕಾರದಲ್ಲಿದ್ದಾಗ ಮಾಡಿದ ಹಗರಣಗಳ ಪಟ್ಟಿ ದೊಡ್ಡದಿದೆ ಎಂದು ಹೇಳಿದರು.

    ಡಿಎಂಕೆ ದೇಶ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ದ್ವೇಷವನ್ನು ಹೊಂದಿದೆ. ಈ ಪಕ್ಷವು ತಮಿಳುನಾಡಿನ ಶತ್ರು, ಅದರ ನಡವಳಿಕೆಗೆ ಗೌರವವಿಲ್ಲ. ಜತೆಗೆ ಡಿಎಂಕೆ ಮತ್ತು ಕಾಂಗ್ರೆಸ್ ಮಹಿಳಾ ವಿರೋಧಿಗಳು ಮತ್ತು ಅವರು ಮಹಿಳೆಯರನ್ನು ಮೂರ್ಖರನ್ನಾಗಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

    ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಬಗ್ಗೆ ಮೃದು ಧೋರಣೆ ತೋರಿದ ಮೋದಿ, ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಡಿಎಂಕೆ ಹೇಗೆ ನಡೆಸಿಕೊಂಡಿದೆ ಎಂಬುದು ಜನರಿಗೆ ತಿಳಿದಿದೆ. ಅಂತಹ ಸಂಪ್ರದಾಯವನ್ನು ಪಕ್ಷವು ಇಂದಿಗೂ ಮುಂದುವರೆಸುತ್ತಿದೆ ಎಂದು ಹೇಳಿದರು.

    ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದ ರಾಮಮಂದಿರದ ಉದ್ಘಾಟನೆಯ ಪ್ರಸಾರವನ್ನು ರಾಜ್ಯವು ‘ನಿಷೇಧಿಸಿದೆ’ ಎಂದು ಅವರು ಗಮನಸೆಳೆದರು. ಕನ್ಯಾಕುಮಾರಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ ಎಂದು ಮೋದಿ ಹೇಳಿದರು.

    ಧರ್ಮದ ಸಲುವಾಗಿ ಸಾವಿರಾರು ಮುನಾವರ್‌ಗಳೊಂದಿಗಿನ ಸ್ನೇಹ ತ್ಯಾಗಕ್ಕೆ ಸಿದ್ಧ.. ಹೀಗಂದಿದ್ದೇಕೆ ಯೂಟ್ಯೂಬರ್​ ಎಲ್ವಿಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts