More

    ಜಲಂಧರ್‌ನಲ್ಲಿರುವ ಅನಿವಾಸಿ ಭಾರತೀಯನ ಮನೆ ಮೇಲೆ ಲಿಬರ್ಟಿ ಪ್ರತಿಮೆ..ಕಾರಣ ಹೀಗಿದೆ ನೋಡಿ

    ಜಲಂಧರ್ (ಪಂಜಾಬ್): ಪಂಜಾಬ್‌ನಲ್ಲಿ ಮನೆಗಳ ಮೇಲ್ಛಾವಣಿಯ ಮೇಲೆ ಫುಟ್‌ಬಾಲ್‌, ವಿಮಾನದ ಪ್ರತಿಕೃತಿಗಳೊಂದಿಗೆ ನೀರಿನ ಟ್ಯಾಂಕ್‌ಗಳು ಸಾಮಾನ್ಯವಾಗಿದ್ದವು, ಅವು ಮನೆಗಳಿಗೆ ವಿಶಿಷ್ಟವಾದ ಗುರುತನ್ನು ನೀಡುತ್ತಿವೆ. ಈಗ ಜನರು ತಮ್ಮ ಮನೆಗಳ ಮೇಲೆ ವಿವಿಧ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ತಮ್ಮ ಮನೆಗಳಿಗೆ ವಿಭಿನ್ನ ಗುರುತುಗಳನ್ನು ಸೃಷ್ಟಿಸುತ್ತಿದ್ದಾರೆ.

    ಇದನ್ನೂ ಓದಿ: ಧರ್ಮದ ಸಲುವಾಗಿ ಸಾವಿರಾರು ಮುನಾವರ್‌ಗಳೊಂದಿಗಿನ ಸ್ನೇಹ ತ್ಯಾಗಕ್ಕೆ ಸಿದ್ಧ.. ಹೀಗಂದಿದ್ದೇಕೆ ಯೂಟ್ಯೂಬರ್​ ಎಲ್ವಿಶ್

    ಅಮೇರಿಕಾದಲ್ಲಿ ವಾಸಿಸುತ್ತಿದ್ದ ದಲ್ಬೀರ್ ಸಿಂಗ್ ಈಗ ಕೆನಡಾದಲ್ಲಿದ್ದಾರೆ. ಆತನ ಮೂಲ ಗ್ರಾಮ ಜಲಂಧರ್‌ನ ನಕೋದರ್ ಪ್ರದೇಶದ ಬಜುಹಾನ್ ಖುರ್ದ್ ಎಂಬಲ್ಲಿ ಮನೆಯ ಮೇಲೆ ಲಿಬರ್ಟಿ ಪ್ರತಿಮೆಯ ಪ್ರತಿರೂಪ ನಿರ್ಮಿಸಿದ್ದಾರೆ. ಎನ್​ಆರ್​ಐನ ಈ ಕ್ರಮ ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದು, ಅಚ್ಚರಿ ಮತ್ತು ಚರ್ಚೆಗೆ ಗ್ರಾಸ ಒದಗಿಸಿದೆ.

    ದಲ್ಬೀರ್ ಸಿಂಗ್ ಅವರ ತಂದೆ ಸಂತೋಖ್ ಸಿಂಗ್ ಅವರು ತಮ್ಮ ಮಗ ವಿದೇಶದಲ್ಲಿ ವಾಸಿಸುತ್ತಿದ್ದಾನೆ. ಗ್ರಾಮದಲ್ಲಿರುವ ಮನೆಗೆ ಪ್ರತ್ಯೇಕವಾದ ಗುರುತನ್ನು ಹೊಂದಲು ಆತ ಉತ್ಸುಕನಾಗಿದ್ದ. ಹೀಗಾಗಿಯೇ ಎರಡು ಅಂತಸ್ತಿನ ನಮ್ಮ ಮನೆಯ ಮೇಲೆ ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯನ್ನು ನಿರ್ಮಿಸಲು ನಿರ್ಧರಿಸಿದೆವು. ಈ ರೀತಿಯ ಪ್ರತಿಕೃತಿಯನ್ನು ಪಂಜಾಬ್‌ನಲ್ಲಿ ಎಲ್ಲಿಯೂ ರಚಿಸಲಾಗಿಲ್ಲ. ಅದರ ಎತ್ತರ ಸುಮಾರು 20 ಅಡಿಯಿದೆ. ಇದರ ನಿರ್ಮಾಣಕ್ಕೆ ನಮಗೆ ಮೂರು ಲಕ್ಷ ರೂಪಾಯಿ ಖರ್ಚಾಯಿತು ಎಂದು ಸಂತೋಖ್ ಸಿಂಗ್ ಹೇಳಿದರು.

    ವಿದೇಶದಲ್ಲಿದ್ದರೂ ನನ್ನ ಮಗನ ಬಗ್ಗೆ ಹೆಮ್ಮೆಯಿದೆ ಎಂದು ಸಂತೋಖ್ ಸಿಂಗ್ ಹೇಳಿದ್ದಾರೆ.

    ಸ್ಟ್ಯಾಚ್ಯೂ ಆಫ್ ಲಿಬರ್ಟಿಯ ಪ್ರತಿಕೃತಿಯು ಗ್ರಾಮದ ಹೊರಗಿನಿಂದ ಗೋಚರಿಸುತ್ತದೆ. ಸಂತೋಖ್ ಅವರ ಒಬ್ಬ ಮಗ ಆಸ್ಟ್ರೇಲಿಯಾದಲ್ಲಿ ಮತ್ತು ಇನ್ನೊಬ್ಬ ಮಗ ಕೆನಡಾದಲ್ಲಿ ನೆಲೆಸಿದ್ದಾನೆ.

    ಈ ಪ್ರತಿಮೆಯನ್ನು ತಯಾರಿಸಿದ ಕುಶಲಕರ್ಮಿ ಬಲ್ವಿಂದರ್ ಕೌಲ್ ಅವರು 1998 ರಲ್ಲಿ ವಿವಿಧ ನೀರಿನ ಟ್ಯಾಂಕ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು ಮತ್ತು ಇಲ್ಲಿಯವರೆಗೆ ಜಲಂಧರ್ ಜಿಲ್ಲೆಯಲ್ಲಿ ಹಲವಾರು ಕಲಾತ್ಮಕ ನೀರಿನ ಟ್ಯಾಂಕ್‌ಗಳು ಮತ್ತು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ. ಸುಮಾರು ಮೂರು ತಿಂಗಳಲ್ಲಿ ಪ್ರತಿಮೆ ಸಿದ್ಧಪಡಿಸಿದ್ದಾನೆ.

    ‘400 ಸ್ಥಾನ ಗೆದ್ದು ಸಂವಿಧಾನ ಬದಲಿಸಲು ಹೊರಟಿದ್ದಾರೆ’..ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts