More

    ಮೋದಿ ವಿರುದ್ಧ ಅನಿವಾಸಿ ಭಾರತೀಯರ ಆರೋಪಪಟ್ಟಿ

    ಬೆಂಗಳೂರು: ಅನಿವಾಸಿ ಕನ್ನಡಿಗರಿಗೆ ವಿದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಾವು ಅಲ್ಲಿಯೂ ಮತದಾನ ಮಾಡಲು ಅವಕಾಶವಿಲ್ಲ. ಇಲ್ಲಿಗೆ ಬಂದು ಮತ ಹಾಕಲು ಖರ್ಚು ಹೆಚ್ಚಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಆನ್‌ಲೈನ್ ಮತ ಅಥವಾ ರಾಯಭಾರ ಕಚೇರಿಯಲ್ಲಿ ಮತ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದು ಎಐಸಿಸಿ ಕಾರ್ಯದರ್ಶಿ, ಸಾಗರೋತ್ತರ ಭಾರತೀಯ ಕಾಂಗ್ರೆಸ್ ವಿಭಾಗದ ಅಧ್ಯಕ್ಷರಾದ ಆರತಿ ಕೃಷ್ಣ ಹೇಳಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿವಾಸಿ ಕನ್ನಡಿಗರಿಗೆ ಪ್ರತ್ಯೇಕ ವಿಭಾಗ ಬೇಕು ಎಂದು ಮನವಿ ಮಾಡಿದ್ದೇವೆ. ಜತೆಗೆ ಸಚಿವಾಲಯ ಮತ್ತು ವಿದೇಶಗಳಿಂದ ಉದ್ಯೋಗ ಕಳೆದುಕೊಂಡು ಬರುವವರಿಗೆ ಇಲ್ಲಿ ಉದ್ಯೋಗ ನೀಡುವ ಯೋಜನೆ ನಮ್ಮ ಕಾಂಗ್ರೆಸ್ ಸರ್ಕಾರದ ಮುಂದೆ ಇದೆ ಎಂದರು.
    ಗಲ್ಫ್ ರಾಷ್ಟ್ರ ಸೇರಿದಂತೆ ಒಂದಷ್ಟು ದೇಶಗಳಲ್ಲಿ ಭಾರತೀಯರು ವಾಸ ಇದ್ದರೂ ಆಯಾ ದೇಶಗಳ ಪೌರತ್ವ ಪಡೆದುಕೊಳ್ಳಲು ಆಗುವುದಿಲ್ಲ. ಅವರ ಪರವಾಗಿ ನಾವು ದನಿ ಎತ್ತುತ್ತಿದ್ದೇವೆ ಎಂದು ಹೇಳಿದ ಅವರು ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಅನಿವಾಸಿ ಭಾರತೀಯರಿಗೆ ಎಂದೇ ಪ್ರತ್ಯೇಕ ಸಚಿವಾಲಯ ಕೆಲಸ ಮಾಡುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅದನ್ನು ವಿದೇಶಾಂಗ ಸಚಿವಾಲಯದ ಜತೆ ಸೇರಿಸಿದೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಸಚಿವಾಲಯ ನೀಡುತ್ತದೆ ಎಂದು ಭರವಸೆ ನೀದೆ. ಇದು ಇಂದಿನ ತುರ್ತು ಮತ್ತು ಅವಶ್ಯಕ ಎಂದು ಪ್ರತಿಪಾದಿಸಿದರು.
    ಕರ್ನಾಟಕ ಚಾಪ್ಟರ್ ಅಧ್ಯಕ್ಷ ರಾಜೀವ್ ಗೌಡ ಮಾತನಾಡಿ, ಗ್ಯಾರಂಟಿಗಳನ್ನು ಕೊಟ್ಟರೇ ಕರ್ನಾಟಕ ಹಾಳಾಗುತ್ತದೆ ಎಂದು ಮೋದಿ ಹೇಳಿದರು. ಈಗ ಕರ್ನಾಟಕ ಹಾಳಾಗಿದೆಯೇ? ಮೋದಿ ಹೇಳಿದ ಒಂದೇ ಒಂದು ಕೆಲಸ ಮಾಡಿಲ್ಲ. ಅದಕ್ಕೆ ನಾವು ವಿದೇಶಗಳಿಂದ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ದೇಶಕ್ಕೆ ಮರಳಿ ಬಂದಿದ್ದೇವೆ ಎಂದು ಹೇಳಿದರು.
    ಬದಲಾವಣೆ ಮಾಡಬೇಕು ಎಂದು ಮೋದಿ ಅವರು ಬಂದರು ಆದರೆ ಬದಲಾವಣೆ ಆಗಿದೆಯೇ? ಅದಕ್ಕೆ ಕಾಂಗ್ರೆಸ್‌ಗೆ ಬೆಂಬಲ ನೀಡಿ ಎಂದು ಮನವಿ ಮಾಡುತ್ತೇವೆ ಎಂದ ಅವರು ಭಾರತದ ಬಗ್ಗೆ ಹೊರ ದೇಶಗಳಲ್ಲಿ ಗೌರವ ಮರ್ಯಾದೆ ಇತ್ತು. ಆದರೆ ಇಂದು ಈ ಬಾರಿಯ ಭಾರತದ ಚುನಾವಣೆ ಪಾರದರ್ಶಕವಾಗಿ ನಡೆಯಲಿ ಎಂದು ಅಮೇರಿಕಾದ ಅಧ್ಯಕ್ಷರು ಹೇಳುವಂತಾಗಿದೆ ಎಂದರು.
    ಯುರೋಪ್ ಭಾಗದ ಕಾರ್ಯದರ್ಶಿ ವೀರೇಂದ್ರ ವಸಿಷ್ಟ, ಭಾರತೀಯ ಜನತಾ ಪಕ್ಷ ಸುಳ್ಳಿನ ಪಕ್ಷ. ಇದುವರೆಗೂ ಅವರು ಕೊಟ್ಟ ಒಂದೇ ಒಂದು ಮಾತುಗಳನ್ನು ಈಡೇರಿಸಿಲ್ಲ. ಈ ದೇಶವನ್ನು ನಾವು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲು ಪ್ರಬಲವಾಗಿ ಕಟ್ಟಬೇಕು. ನರೇಂದ್ರ ಮೋದಿ ಅವರ ಸರ್ಕಾರದ ಜುಮ್ಲಾಗಳಿಂದ ಭಾರತದ ಜನರಿಗೆ ಏನೂ ಸಿಗುವುದಿಲ್ಲ. ದೇಶದ ಸಮಸ್ಯೆಗಳಿಗೆ ಕಾಂಗ್ರೆಸ್ ಪರಿಹಾರ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts