More

    ಬೋನಸ್ ಷೇರು, ವಾರಂಟ್‌ ಹಂಚಿಕೆ ನಿರ್ಧಾರ: ವರ್ಷದಲ್ಲಿ 153% ಏರಿಕೆ ಕಂಡ ಐಟಿ ಸ್ಟಾಕ್ ಸತತ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಮುಂಬೈ: ಸ್ಮಾಲ್ ಕ್ಯಾಪ್, ಐಟಿ ಸಾಫ್ಟ್‌ವೇರ್ ವಲಯದ ಕಂಪನಿ ನ್ಯಾಪ್‌ಬುಕ್ಸ್ ಲಿಮಿಟೆಡ್ (Naapbooks Ltd) ಷೇರುಗಳು ಫೆಬ್ರವರಿ 27 ಮತ್ತು ಫೆಬ್ರುವರಿ 28 ರಂದು ಬ್ಯಾಕ್-ಟು-ಬ್ಯಾಕ್ ಅಪ್ಪರ್ ಸರ್ಕ್ಯೂಟ್‌ ಹಿಟ್ ಮಾಡಿದವು. ಅಲ್ಲದೆ, ಈ ಕಂಪನಿಯ ಷೇರುಗಳ ಬೆಲೆ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿತು.

    ಈ ಷೇರಿನ ಕೊನೆಯ ವಹಿವಾಟಿನ ಬೆಲೆ 4.99% ಇಂಟ್ರಾಡೇ ಲಾಭದೊಂದಿಗೆ ಪ್ರತಿ ರೂ 197.90 ಆಗಿದೆ. ಬೋನಸ್ ಷೇರುಗಳು ಮತ್ತು ಹಕ್ಕುಗಳ ವಿತರಣೆಯನ್ನು (ರೈಟ್ಸ್​ ಇಶ್ಯೂ) ಪರಿಗಣಿಸಲು ಕಂಪನಿಯು ತನ್ನ ಮುಂಬರುವ ನಿರ್ದೇಶಕರ ಮಂಡಳಿಯ ಸಭೆಯ ಕುರಿತು ಬುಧವಾರ ತಿಳಿಸಿದೆ. ಈ ಕಂಪನಿಯ ಷೇರುಗಳ ಬೆಲೆ ಈ ವರ್ಷದ ಹಣಕಾಸು ವರ್ಷದ ಆರಂಭದಿಂದ ಇಲ್ಲಿಯವರೆಗೆ 104% ಏರಿಕೆ ಕಂಡಿದೆ. ಅಲ್ಲದೆ, ಕಳೆದ 1 ವರ್ಷದಲ್ಲಿ 153% ಹೆಚ್ಚಳವಾಗಿದೆ.

    ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯು ಗುರುವಾರ, 07 ನೇ ಮಾರ್ಚ್, 2024 ರಂದು ನಡೆಯಲಿದೆ ಎಂದು ಫೆಬ್ರವರಿ 28, 2024 ರಂದು ಕಂಪನಿಯು ತಿಳಿಸಿದೆ.

    25 ಕೋಟಿ ರೂ.ಗಳ ಷೇರು ವಾರಂಟ್‌ಗಳ ವಿತರಣೆ; ಬೋನಸ್ ಷೇರುಗಳ ಹಂಚಿಕೆ ಪ್ರಸ್ತಾವನೆಯನ್ನು ಪರಿಗಣಿಸಿ, ಅಗತ್ಯ ಅನುಮೋದನೆ ಪಡೆಯಲು ಈ ಸಭೆ ನಡೆಸಲಾಗುತ್ತಿದೆ. ವ್ಯಾಪಾರವನ್ನು ಸ್ವಾಧೀನಪಡಿಸಿಕೊಳ್ಳುವ ಅಥವಾ ಐಟಿ ಕಂಪನಿಗಳೊಂದಿಗೆ ವಿಲೀನಗೊಳಿಸುವ ಅವಕಾಶಗಳನ್ನು ಕೂಡ ಸಭೆಯಲ್ಲಿ ಸಭೆಯಲ್ಲಿ ಪರಿಗಣಿಸಲಾಗುವುದು ಎಂದು ಕಂಪನಿ ತಿಳಿಸಿದೆ.

    ಈ ಷೇರುಗಳ 52-ವಾರದ ಗರಿಷ್ಠ ಬೆಲೆ ಪ್ರತಿ ರೂ. 197.90 ಮತ್ತು ಕನಿಷ್ಠ ಬೆಲೆ ಕ್ರಮವಾಗಿ ರೂ. 54 ಇದೆ. ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು ರೂ. 59.50 ಕೋಟಿ ಇದೆ. ಈ ಕಂಪನಿಯ ಷೇರುಗಳ ಬೆಲೆ ಕಳೆದ 2-ವಾರಗಳಲ್ಲಿ 27% ರಷ್ಟು ಹೆಚ್ಚಳ ಕಂಡಿದೆ. ಕಳೆದ 3 ತಿಂಗಳಲ್ಲಿ 82%, ಕಳೆದ 6-ತಿಂಗಳಲ್ಲಿ 141% ಹೆಚ್ಚಳವಾಗಿದೆ. ಕಳೆದ 2-ವರ್ಷಗಳಲ್ಲಿ 250% ಏರಿಕೆ ಕಂಡಿದೆ.

    ನಾಪ್​ಬುಕ್ಸ್​ ಒಂದು ಫಿನ್‌ಟೆಕ್ ಕಂಪನಿಯಾಗಿದ್ದು, ಐಟಿ ಉದ್ಯಮದಲ್ಲಿ ಏಳು ವರ್ಷಗಳ ಅನುಭವ ಹೊಂದಿಎ. ಇದು ಹಣಕಾಸು ಸಲಹೆ ಮತ್ತು ಸಾಫ್ಟ್‌ವೇರ್ ಬೆಂಬಲ ಸೇವೆಗಳನ್ನು ಒದಗಿಸುತ್ತದೆ.

    9 ಕೋಟಿ ರೈತರಿಗೆ ಸಿಹಿ ಸುದ್ದಿ: ಪಿಎಂ ಕಿಸಾನ್​ ಸಮ್ಮಾನ ನಿಧಿಯ 16ನೇ ಕಂತು ಬಿಡುಗಡೆ, ನಿಮ್ಮ ಹೆಸರು ಹೀಗೆ ಪರಿಶೀಲಿಸಿಕೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts