More

    ಗುರುವಾರ 20% ಏರಿಕೆ ಕಂಡ ಷೇರುಗಳು: ಶುಕ್ರವಾರ ಈ ಸ್ಟಾಕ್​ಗಳಲ್ಲಿ ದೊರೆಯಬಹುದು ಲಾಭ

    ಮುಂಬೈ: ಈ ಪೆನ್ನಿ ಸ್ಟಾಕ್‌ಗಳ ಟ್ರೇಡಿಂಗ್ ಸೆಟಪ್ ನೋಡಿದರೆ, ಶುಕ್ರವಾರ ಈ ಷೇರುಗಳಲ್ಲಿ ನೀವು ದೊಡ್ಡ ಲಾಭ ಬರುವ ನಿರೀಕ್ಷೆ ಇದೆ.

    ಈ ಷೇರುಗಳಲ್ಲಿ ಏರುಗತಿ ಚಲನೆ ಇದೆ. ಶುಕ್ರವಾರದ ಮಾರುಕಟ್ಟೆಯಲ್ಲಿ ಸಹ, ಈ ಷೇರುಗಳು ಗಣನೀಯವಾಗಿ ಗಳಿಸಬಹುದಾಗಿದೆ.

    ಷೇರುಪೇಟೆಯಲ್ಲಿ ಬುಧವಾರದ ದೊಡ್ಡ ಕುಸಿತದ ನಂತರ ಗುರುವಾರ ಉತ್ತಮ ಚೇತರಿಕೆ ಕಂಡುಬಂದಿದೆ. ನಿಫ್ಟಿ 21983 ರ ಮಟ್ಟದಲ್ಲಿ 22000 ಮಟ್ಟಕ್ಕಿಂತ ಕೆಳಗೆ ತಲುಪಿದರೂ, ಮಾಸಿಕ ಮುಕ್ತಾಯದಲ್ಲಿ ಮಾರುಕಟ್ಟೆ ಬೀಳದಿರುವುದು ಪ್ರಮುಖವೆಂದು ಪರಿಗಣಿಸಲಾಗಿದೆ.

    ಏತನ್ಮಧ್ಯೆ, ಷೇರು ಮಾರುಕಟ್ಟೆಯಲ್ಲಿ ಕೆಲವು ಷೇರುಗಳು ಮಾರುಕಟ್ಟೆಯ ಚಲನೆಯಿಂದ ಸ್ವತಂತ್ರವಾಗಿ ತಮ್ಮದೇ ಆದ ವೇಗದಲ್ಲಿ ಮುಂದುವರಿಯುತ್ತಿವೆ. ಈ ಷೇರುಗಳು ಅಪ್ಪರ್ ಸರ್ಕ್ಯೂಟ್ ಹಿಟ್​ ಅಗಿವೆ. ಉತ್ತಮ ಲಾಭ ಗಳಿಸಿವೆ. ಇಂತಹ ಷೇರುಗಳತ್ತ ಗಮನಹರಿಸೋಣ.

    ರಾಜಶ್ರೀ ಪಾಲಿಪ್ಯಾಕ್ (Rajshree Polypack):

    ಗುರುವಾರದ ಮಾರುಕಟ್ಟೆಯಲ್ಲಿ ಈ ಸ್ಟಾಕ್‌ನಲ್ಲಿ ಹೆಚ್ಚಿನ ಸಂಖ್ಯೆಯ ಖರೀದಿದಾರರು ಕಾಣಿಸಿಕೊಂಡರು. ಈ ಸ್ಟಾಕ್ 20 ಪ್ರತಿಶತದಷ್ಟು ಹೆಚ್ಚಿದ ನಂತರ ರೂ 111ಕ್ಕೆ ತಲುಪಿತು. ಈ ಸ್ಟಾಕ್ ನಿರಂತರವಾಗಿ ಅಪ್​ಟ್ರೆಂಡ್​ನಲ್ಲಿದ್ದು, ಶುಕ್ರವಾರದ ಮಾರುಕಟ್ಟೆಯಲ್ಲಿ ಸಹ ಏರಿಕೆ ಕಾಣಬಹುದು.

    ಪ್ರೀಮಿಯರ್ ಪಾಲಿಫಿಲ್ಮ್ ಲಿಮಿಟೆಡ್ (Premier Polyfilm Ltd):

    ಗುರುವಾರದ ಮಾರುಕಟ್ಟೆಯಲ್ಲಿ ಖರೀದಿದಾರರು ಈ ಸ್ಟಾಕ್‌ನಲ್ಲಿ ಉತ್ತಮ ಆಸಕ್ತಿ ತೋರಿದರು. ಈ ಷೇರು ಬೆಲೆ ಶೇಕಡಾ 20 ರಷ್ಟು ಹೆಚ್ಚಾಗಿ, ರೂ 218.10 ಮಟ್ಟ ತಲುಪಿದೆ. ಈ ಸ್ಟಾಕ್ ಖರೀದಿದಾರರನ್ನು ಮತ್ತಷ್ಟು ಆಕರ್ಷಿಸಬಹುದು ಮತ್ತು ಶುಕ್ರವಾರವೂ ಇದರಲ್ಲಿ ಬೆಳವಣಿಗೆಯನ್ನು ಕಾಣಬಹುದು.

    ಪೈಸಾಲೊ ಡಿಜಿಟಲ್ (Paisalo Digital):

    ಈ ಸ್ಟಾಕ್ ಗುರುವಾರ ಮಾರುಕಟ್ಟೆಯಲ್ಲಿ ಉತ್ತಮ ಏರಿಕೆ ಕಂಡಿತು ಮತ್ತು 20 ಪ್ರತಿಶತದಷ್ಟು ಹೆಚ್ಚಿದ ನಂತರ ಅದು ರೂ 184.95 ರ ಮಟ್ಟದಲ್ಲಿ ಕೊನೆಗೊಂಡಿತು. ಶುಕ್ರವಾರವೂ ಈ ಷೇರು ಏರಿಕೆ ಕಾಣಬಹುದಾಗಿದೆ.

    ಗೊರಾನಿ ಇಂಡ್​ (Gorani Ind):

    ಈ ಸ್ಟಾಕ್‌ನ ಏರಿಳಿತವು ಗುರುವಾರ ಮುಂದುವರಿದು, ಶೇಕಡಾ 20 ರಷ್ಟು ಏರಿಕೆ ಕಂಡಿತು. ಇದರ ಬೆಲೆ ರೂ 153.15 ರ ಮಟ್ಟದಲ್ಲಿ ಕೊನೆಗೊಂಡಿತು. ಈ ಸ್ಟಾಕ್‌ನ ಈ ಏರಿಳಿತವನ್ನು ಶುಕ್ರವಾರದ ಮಾರುಕಟ್ಟೆಯಲ್ಲೂ ಕಾಣಬಹುದು, ಇದು ಮತ್ತಷ್ಟು ಲಾಭಗಳನ್ನು ಸಹ ನೀಡಬಹುದು.

    ಲಾಯ್ಡ್ಸ್ ಇಂಜಿನಿಯರಿಂಗ್ ವರ್ಕ್ಸ್ (Lloyds Engineering Works):

    ಗುರುವಾರ ಈ ಸ್ಟಾಕ್‌ನಲ್ಲಿ ಬುಲ್ಲಿಶ್ ಭಾವನೆಗಳು ಕಂಡುಬಂದವು. ಈ ಸ್ಟಾಕ್ ಶೇಕಡಾ 20 ರಷ್ಟು ಏರಿಕೆ ಕಂಡು, ರೂ 58.59 ರ ಮಟ್ಟದಲ್ಲಿ ಕೊನೆಗೊಂಡಿತು. ಶುಕ್ರವಾರದ ಮಾರುಕಟ್ಟೆಯಲ್ಲಿ ಈ ಷೇರಿನಲ್ಲಿ ಬುಲ್ಲಿಶ್ ಭಾವನೆಗಳು ಮುಂದುವರಿಯದು, ಮತ್ತಷ್ಟು ಏರಿಕೆ ಕಾಣಬಹುದು.

    ಫಾರ್ಮಾ ಸ್ಟಾಕ್​ ನೀಡಲಿದೆ 3:1 ಬೋನಸ್ ಷೇರು: 30 ದಿನಗಳಲ್ಲಿ 119% ಲಾಭ, ಸತತ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಕೇವಲ 6 ತಿಂಗಳಲ್ಲಿ ಷೇರು ಬೆಲೆ 75 ರಿಂದ 915 ರೂಪಾಯಿಗೆ ಏರಿಕೆ: 1100% ಲಾಭ ನೀಡಿದ ಕಂಪನಿ ಸ್ಟಾಕ್​ಗೆ ಮತ್ತೆ ಬೇಡಿಕೆ ಏಕೆ?

    ಷೇರು ಮಾರುಕಟ್ಟೆ ಮೇಲೆ ಲೋಕಸಭೆ ಚುನಾವಣೆ ಪರಿಣಾಮವೇನು? ಯಾವ ಪಕ್ಷ ಗೆಲ್ಲುತ್ತದೆ? ದಲಾಲ್​ ಸ್ಟ್ರೀಟ್​ ​ ಲೆಕ್ಕಾಚಾರಗಳೇನು? ತಜ್ಞರು ಏನು ಹೇಳುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts