

ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಇನ್ನಷ್ಟು ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಸಂಕ್ರಾಂತಿ ಸಮಯದಲ್ಲಿ ಚಿತ್ರವನ್ನು ಜಗತ್ತಿನಾದ್ಯಂತ ಬಿಡುಗಡೆ ಮಾಡುವುದಕ್ಕೆ ರಾಜಮೌಳಿ ಯೋಚಿಸಿದ್ದರು. ಆದರೆ, ಅದೀಗ ಇನ್ನಷ್ಟು ಮುಂದೆ ಮುಂದೆ ಹೋಗುವ ಸಾಧ್ಯತೆ ಇದೆ. ಕಾರಣ ಸದ್ಯ ಶೂಟಿಂಗ್ನಲ್ಲಿ ಭಾಗವಹಿಸುವುದಕ್ಕೆ ರಾಮ್ಚರಣ್ ತೇಜ ಮತ್ತು ತಾರಕ್ (ಜ್ಯೂನಿಯರ್ ಎನ್.ಟಿ.ಆರ್) ಇಬ್ಬರೂ ನಿರಾಕರಿಸಿದ್ದಾರೆ.
ಇದನ್ನೂ ಓದಿ: ಕ್ವಾರಂಟೈನ್ನಲ್ಲಿ ರವಿಶಂಕರ್ ಕುಟುಂಬ
ಚಿತ್ರೀಕರಣ ಚಟುವಟಿಕೆಗಳನ್ನು ಪ್ರಾರಂಭಿಸುವುದಕ್ಕೆ ತಲಂಗಾಣ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ನ ರಾಮೋಜಿ ರಾವ್ ಸ್ಟುಡಿಯೋದಲ್ಲಿ ಮುಂದಿನ ವಾರದಿಂದ ಚಿತ್ರೀಕರಣ ಶುರು ಮಾಡುವುದಕ್ಕೆ ರಾಜಮೌಳಿ ತಯಾರಿ ನಡೆಸುತ್ತಿದ್ದರು. ಹೀಗಿರುವಾಗಲೇ, ಎಲ್ಲೆಲ್ಲೂ ಕರೊನಾ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ರಾಮ್ಚರಣ್ ತೇಜ ಸ್ವತಃ ಫೋನ್ ಮಾಡಿ, ಚಿತ್ರೀಕರಣ ಪೋಸ್ಟ್ಪೋನ್ ಮಾಡುವುದಕ್ಕೆ ಹೇಳಿದ್ದಾರಂತೆ.
ಈಗ ಚಿತ್ರೀಕರಣ ಮಾಡುವುದಕ್ಕೆ ಸಿಕ್ಕಾಪಟ್ಟೆ ರಿಸ್ಕಿಯಾಗಿರುವುದರಿಂದ, ಅಷ್ಟೊಂದು ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ಮಾಡುವ ಬದಲು, ಪೋಸ್ಟ್ಪೋನ್ ಮಾಡಿ ಎಂದು ಸಲಹೆ ನೀಡಿದರಂತೆ. ಜ್ಯೂನಿಯರ್ ಎನ್.ಟಿ.ಆರ್ ಸಹ ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ಬೇಡ, ಒಂದು ಪಕ್ಷ ಚಿತ್ರೀಕರಣ ಶುರುವಾದರೂ ತಾವು ಚಿತ್ರೀಕರಣದಲ್ಲಿ ಭಾಗವಹಿಸುವುದಿಲ್ಲ ಎಂದರಂತೆ.
ಇದನ್ನೂ ಓದಿ: ಚಿರು ಪಾತ್ರಕ್ಕೆ ಧ್ರುವ ಸರ್ಜಾ ಡಬ್…
ಚಿತ್ರದ ಇಬ್ಬರು ಪ್ರಮುಖ ನಟರೇ, ಇದೀಗ ಚಿತ್ರೀಕರಣವನ್ನು ಪೋಸ್ಟ್ಪೋನ್ ಮಾಡಿ ಎಂದು ಸಲಹೆ ನೀಡಿರುವುದರಿಂದ, ರಾಜಮೌಳಿ ಅವರಿಗೆ ಬೇರೆ ದಾರಿಯೇ ಇಲ್ಲದಂತಾಗಿದೆ. ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಅವರು ಸಹ ಚಿತ್ರೀಕರಣವನ್ನು ಮುಂದೂಡಿದ್ದು, ಕರೊನಾ ಕೇಸ್ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ ಚಿತ್ರೀಕರಣ ಪ್ರಾರಂಭಿಸುವ ಸಾಧ್ಯತೆ ಇದೆ.
ಆರ್ಆರ್ಆರ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ತಾರಕ್ ಮತ್ತು ರಾಮ್ಚರಣ್ ತೇಜ ಜತೆಯಾಗಿ ನಟಿಸುತ್ತಿದ್ದು, ಮಿಕ್ಕಂತೆ ಅಜಯ್ ದೇವಗನ್, ಶ್ರೇಯಾ ಶರಣ್, ಆಲಿಯಾ ಭಟ್ ಮುಂತಾದವರು ನಟಿಸುತ್ತಿದ್ದಾರೆ.