ರಾಜ್ಯದಲ್ಲಿ ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು ಸ್ಫೋಟ; ಟ್ಯಾಂಕರ್​​ನಿಂದ ಸೋರುತ್ತಿದೆ ಪೆಟ್ರೋಲ್​..

Tanker
ಟ್ಯಾಂಕರ್ ಚಕ್ರ ಸಿಲುಕಿ ವಾಲಿದ್ದ ಸ್ಥಳದಲ್ಲೇ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುತ್ತಿರುವ ಪೊಲೀಸ್
Published on

ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ವಾರದೊಳಗೆ ಮೂರು ಸ್ಫೋಟಗಳು ಸಂಭವಿಸಿದ್ದು, ಭಾರಿ ಅಗ್ನಿಅನಾಹುತ, ಸಾವು-ನೋವು ಸಂಭವಿಸಿವೆ. ಇದೀಗ ಅಂಥದ್ದೇ ಒಂದು ಸ್ಫೋಟ ಅಥವಾ ಅಗ್ನಿ ಅನಾಹುತ ಉಂಟಾಗುವುದು ಅದೃಷ್ಟವಶಾತ್ ಸ್ವಲ್ಪದರಲ್ಲೇ ತಪ್ಪಿಹೋಗಿದೆ.

ಘಾಟಿ ರಸ್ತೆಯಲ್ಲಿ ಪೆಟ್ರೋಲ್ ತುಂಬಿದ್ದ ಟ್ಯಾಂಕರ್​ ಅಪಘಾತಕ್ಕೀಡಾಗಿದ್ದು, ಒಮ್ಮೆಗೆ ಆತಂಕ ಸೃಷ್ಟಿಸಿದ ಸನ್ನಿವೇಶ ಉಂಟಾಗಿತ್ತು. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಮಲೆಮಾರುತ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

ಮಂಗಳೂರಿನಿಂದ ಮಾಗುಂಡಿಗೆ ತೆರಳುತ್ತಿದ್ದ ಪೆಟ್ರೋಲ್​ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಚಕ್ರ ಗುಂಡಿಯಲ್ಲಿ ಸಿಲುಕಿದೆ. ವಾಹನ ಇನ್ನೂ ವೇಗದಲ್ಲಿದ್ದಿದ್ದರೆ ಅಪಘಾತ ತೀವ್ರ ಪ್ರಮಾಣದಲ್ಲಿ ಆಗಿರುತ್ತಿದ್ದು, ಪೆಟ್ರೋಲ್​ ಇರುವ ಕಾರಣಕ್ಕೆ ದೊಡ್ಡ ಸ್ಫೋಟ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಅಂಥ ಅಪಾಯದಿಂದ ಚಾಲಕ ಪಾರಾಗಿದ್ದಾನೆ.

ಅದಾಗ್ಯೂ ಟ್ಯಾಂಕರ್​ನಿಂದ ಪೆಟ್ರೋಲ್​ ಸೋರಿಕೆ ಆಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net