More

    ಜಪಾನ್ ಬ್ರಾಂಡ್ ಶಿಸೈಡೋಗೆ ತಮನ್ನಾ ರಾಯಭಾರಿ

    ನವದೆಹಲಿ: ಮಿಲ್ಕಿಬ್ಯೂಟಿ ತಮನ್ನಾ ಭಾಟಿಯಾ ತನ್ನ ಗ್ಲಾಮರ್​ ಪಾತ್ರಗಳಿಂದ ಗಮನಸೆಳೆದವರು. ಇದೀಗ ಅವರ ಮುಡಿಗೆ ಮತ್ತೊಂದು ಗರಿ ಸೇರಿದೆ. ಜಪಾನ್​ನ ಸಂಧರ್ಯ ವರ್ಧಕಗಳ ದೈತ್ಯ ಸಂಸ್ಥೆ ಶಿಸೈಡೋ ಸ್ಕಿನ್‌ಕೇರ್ ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

    ಇದನ್ನೂ ಓದಿ: ಶ್ರೀಲೀಲಾ ಅವರ ಪಾತ್ರವನ್ನು ಎಲ್ಲರೂ ಮೆಚ್ಚುತ್ತಾರೆ: ನಿರ್ದೇಶಕ ಅನಿಲ್ ರವಿಪುಡಿ

    ತಮನ್ನಾ ಭಾಟಿಯಾ ತನ್ನ 18 ವರ್ಷಗಳ ವೃತ್ತಿಜೀವನದಲ್ಲಿ 75 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಹಜವಾದ ಫ್ಯಾಶನ್ ಸೆನ್ಸ್ ಮತ್ತು ನಟನೆ, ನೃತ್ಯದಲ್ಲೂ ಹೆಸರುವಾಸಿಯಾಗಿದ್ದಾರೆ. ಬಾಹುಬಲಿ ಬಳಿಕ ಇದೀಗ ತೆಲುಗಿನ ‘ಜೈಲರ್’ ಮತ್ತು ‘ಭೋಲಾ ಶಂಕರ್’ ಚಿತ್ರದಲ್ಲಿ ಚಿರಂಜೀವಿ ಎದುರು ಕಾಣಿಸಿಕೊಂಡಿದ್ದರು.

    ಇತ್ತೀಚಿನ ಇನ್‌ಸ್ಟಾಗ್ರಾಮ್ ಅನುಯಾಯಿಗಳಲ್ಲಿ ಅವರು ವಿವರಿಸಿದಂತೆ, ಅಭಿಮಾನಿಗಳು ಪ್ರೋತ್ಸಾಹ ನೀಡಿದ್ದರಿಂದಲೇ ಇಲ್ಲಿ ತನಕ ಬರುವಂತಾಯಿತು. ಅವರ ಶ್ರೀರಕ್ಷೆ ಮುಖ್ಯ ಎಂದಿದ್ದಾರೆ.

    ತಮನ್ನಾ ತೆರೆ ಮೇಲೆ ಮಿಂಚಿದರೆ ಶಿಸೈಡೋ ಸಂಧರ್ಯವರ್ಧಕಳ ತಯಾರಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಈಗ ತಮನ್ನಾ ಶಿಸೈಡೋ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆ ಯಾವರೀತಿ ಮಾರಾಟಕ್ಕೆ ನೆಲೆ ಒದಗಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.

    ಬಿಗ್ ಬಾಸ್ ನಿರೂಪಕ ಸಲ್ಮಾನ್ ವಾರದ ಸಂಭಾವನೆ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts