More

    ಬಿಗ್ ಬಾಸ್ ನಿರೂಪಕ ಸಲ್ಮಾನ್ ವಾರದ ಸಂಭಾವನೆ ಎಷ್ಟು?

    ನವದೆಹಲಿ: ಬಿಗ್ ಬಾಸ್ ಮತ್ತು ಸಲ್ಮಾನ್ ಖಾನ್ ಸಮಾನಾರ್ಥಕ ಪದಗಳು. ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಅನೇಕ ನಿರೂಪಕರನ್ನು ನೋಡಿರಬಹುದು, ಆದರೆ ಸಲ್ಲು ಭಾಯ್ ಶೋ ನಡೆಸಿಕೊಡುವ ರೀತಿ ಗಮನಸೆಳೆದಿದ್ದು, ಟಿಆರ್‌ಪಿ ರೇಟ್​ ಹೆಚ್ಚಾಗಿದ್ದನ್ನು ಜನ ಗಮನಿಸಿದ್ದಾರೆ.

    ಬಾಲಿವುಡ್ ಭಾಯಿಜಾನ್ ಬಿಗ್ ಬಾಸ್ ಸೀಸನ್ 4 ರಿಂದ ಕಾರ್ಯಕ್ರಮ ನಿರೂಪಣೆಗೆ ತೊಡಗಿಸಿಕೊಂಡರು. ಬಳಿಕ ಅವರು ಹಿಂತಿರುಗಿ ನೋಡಲಿಲ್ಲ. ವೀಕ್ಷಕರಿಗೆ ಏನು ಬೇಕು ಎಂದು ನಿಖರವಾಗಿ ತಿಳಿದಿರುವ ಈ ನಟ ಈಗ ಪರಿಪೂರ್ಣ ನಿರೂಪಕ.

    ಇದನ್ನೂ ಓದಿ: ʼಶುಗರ್ ಫ್ಯಾಕ್ಟರಿʼ ಸಿನಿಮಾದ ʼಜಹಾಪನಾʼ ಸಾಂಗ್‌ಗೆ ಭಾರೀ ಮೆಚ್ಚುಗೆ..!

    ಸ್ಪರ್ಧಿಗಳಿಗೆ ಸಲ್ಮಾನ್​ ದಯೆ ತೋರುತ್ತಾರೆ ಮತ್ತು ಅದೇ ಸಮಯದಲ್ಲಿ ಅವರು ಗೆರೆ ದಾಟಿದರೆ ಪಾಠವನ್ನೂ ಹೇಳುತ್ತಾರೆ. ಹಾಗಾಗಿ ಸಲ್ಮಾನ್ ಭಾರೀ ಜನಪ್ರಿಯತೆ ಹೊಂದಿದ್ದಾರೆ. ಭಾರತೀಯ ಕಿರುತೆರೆ ಸಾಮ್ರಾಟನಂತೆ ಮೆರೆಯುತ್ತಿದ್ದಾರೆ ಎಂದರೆ ಯಾವುದೇ ಸಂದೇಹವಿಲ್ಲ.

    ಇದು ಒಂದೆಡೆಯಾದರೆ ಸಲ್ಮಾನ್​ ಬಿಗ್​ಬಾಸ್ ನ 1 ಶೋನಿಂದ ಎಷ್ಟು ಗಳಿಸುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ಪ್ರಸ್ತುತ ಹಿಂದಿಯಲ್ಲಿ 15ನೇ ಬಿಗ್​ಬಾಸ್​, 17ನೇ ಸೀಜನ್​ ಪ್ರಾರಂಭವಾಗಬೇಕಿದ್ದು,

    ಅಲ್ಲದೆ, ಇತ್ತೀಚೆಗೆ ಅಂತರ್ಜಾಲದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಅದರಂತೆ ಸಲ್ಮಾನ್ ಬಿಗ್​ಬಾಸ್​ನ ಮೊದಲ ಎರಡು ಸೀಸನ್‌(4ಮತ್ತು5)ಗಳಿಗೆ ಪ್ರತಿ ಸಂಚಿಕೆಗೆ 2.5 ಕೋಟಿ ರೂ. ಪಡೆದುಕೊಂಡಿದ್ದರು. ಆದರೆ ಕಾರ್ಯಕ್ರಮದ ಭಾರೀ ಜನಪ್ರಿಯತೆಯ ನಂತರ, ತಮ್ಮ ಸಂಭಾವನೆಯನ್ನು ದ್ವಿಗುಣಗೊಳಿಸಿದ್ದಾರೆ ಎಂದು ಹೇಳಲಾಗುತ್ತದೆ. ಸಲ್ಮಾನ್ ಬಿಬಿ7 ರ ಪ್ರತಿ ಸಂಚಿಕೆಗೆ 5 ಕೋಟಿ ರೂ., 8ಕ್ಕೆ 5.5 ಕೋಟಿ ರೂ. ಸೀಸನ್ 9 ಗಾಗಿ 7 ರಿಂದ 8 ಕೋಟಿ ರೂ. ಬಿಬಿ 10 ಗಾಗಿ ಪ್ರತಿ ಸಂಚಿಕೆಗೆ 8 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ.

    ಸೀಸನ್ 11 ರಲ್ಲಿ ಪ್ರತಿ ಸಂಚಿಕೆಗೆ 11 ಕೋಟಿರೂ. ಈಗ 17ನೇ ಸೀಜನ್​ಗೆ ಪ್ರತಿವಾರಕ್ಕೆ 12ಕೋಟಿ ರೂ., ಅಂದರೆ ಈ ಸೀಸನ್​ನಲ್ಲಿ 150ಕೋಟಿ ರೂ. ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ. ವಾರಕ್ಕೆ 12ಕೋಟಿ ಗಳಿಸುತ್ತೀರಂತೆ ಎಂದು ಸುದ್ದಿಗಾರರು ಸಲ್ಮಾನ್ ಖಾನ್ ಅವರನ್ನು ಕೇಳಿದಾಗ, ಅವರು ಅದಕ್ಕೆ ನಕ್ಕು, ಶೋ ಮೇಕರ್‌ಗೆ ಅಷ್ಟು ಸಂಭಾವನೆ ನೀಡುವಂತೆ ಹೇಳಿ ಎಂದು ಮಾಧ್ಯಮಗಳನ್ನು ಒತ್ತಾಯಿಸಿದರು. ಆದರೆ, ಸಲ್ಮಾನ್ ಕಡಿಮೆ ಬೆಲೆಗೆ ಬರುವುದಿಲ್ಲ ಎಂಬ ಎಂಡೆಮೋಲ್ ಸಿಒಒ ನಾಯಕ್ ಹೇಳಿಕೆ ಎಲ್ಲರನ್ನೂ ಮತ್ತೊಮ್ಮೆ ಅಚ್ಚರಿಗೆ ದೂಡಿದೆ!

    ಸಲ್ಮಾನ್ ಖಾನ್ ಬಿಗ್ ಬಾಸ್ ಎರಡನೇ ಸೀಸನ್ ಅನ್ನು ಒಟಿಟಿ ರೂಪದಲ್ಲಿ ಆಯೋಜಿಸಲು ಸಜ್ಜಾಗಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts