ಶ್ರೀಲೀಲಾ ಅವರ ಪಾತ್ರವನ್ನು ಎಲ್ಲರೂ ಮೆಚ್ಚುತ್ತಾರೆ: ನಿರ್ದೇಶಕ ಅನಿಲ್ ರವಿಪುಡಿ

Untitled design - 2023-10-14T182323.602
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಎಂದೇ ಹೆಸರಾದ ಬಾಲಯ್ಯ ನಟನೆಯ ಬಹುನಿರೀಕ್ಷಿತ 'ಭಗವಂತ ಕೇಸರಿ' ಸಿನಿಮಾದ ಬಿಡುಗಡೆಗೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಕನ್ನಡದ ಬೆಡಗಿ ಶ್ರೀಲೀಲಾ ಬಗ್ಗೆ ನಿರ್ದೇಶಕರು ಮೆಚ್ಚಿ ಮಾತನಾಡಿದ್ದಾರೆ.

ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮೂಡಿಬಂದಿರುವ 'ಭಗವಂತ ಕೇಸರಿ' ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ನಟಿ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಬಾಲಯ್ಯ ಅವರೊಂದಿಗೆ ಕಾಣಿಸಿಕೊಳ್ಳುವ ಶ್ರೀಲೀಲಾ ಅವರ ಪಾತ್ರ ವಿಶೇಷವಾಗಿದೆ ಮತ್ತು ಹೆಚ್ಚು ಪ್ರಾಮುಖ್ಯತೆ ಇರುವ ರೋಲ್ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸಾಕಷ್ಟು ಸ್ಕೋಪ್ ಇರುವ ವಿಶೇಷ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇದಕ್ಕಾಗಿ ಅವರು ಹೆಚ್ಚು ಶ್ರಮ ವಹಿಸಿದ್ದಾರೆ. ಈ ಹಿಂದೆ ನಟಿಸಿದ್ದ ಸಿನಿಮಾಗಳ ಪಾತ್ರಗಳಿಗಿಂತ ಈ ಚಿತ್ರದಲ್ಲಿನ ಪಾತ್ರ ಅವರಿಗೆ ಹೊಸ ಲುಕ್​ ನೀಡಲಿದೆ. ಬಾಲಕೃಷ್ಣ ಅವರೊಂದಿಗಿನ ಭಾವನಾತ್ಮಕ ದೃಶ್ಯಗಳು ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ ಎಂದು ಅನಿಲ್ ಹೇಳಿದ್ದಾರೆ.

ಬಾಲಯ್ಯ ಮತ್ತು ನಟಿ ಕಾಜಲ್ ಅಗರ್​ವಾಲ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಶ್ರೀಲೀಲಾ, ಅರ್ಜುನ್ ರಾಂಪಾಲ್​, ಟಿ.ಎನ್​. ಬಾಲಕೃಷ್ಣ, ಆರ್. ಸರತ್​ ಕುಮಾರ್​ ಮುಂತಾದವರ ತಾರಾಗಣವಿದೆ. ಸಿನಿಮಾ ಇದೇ ಅಕ್ಟೋಬರ್ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧಗೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net