ಆ ಫಾಂಟ್ ಬಳಸಿ ಪಾಕ್ ಮಾಜಿ ಪ್ರಧಾನಿ ನವಾಜ್​ ಷರೀಫ್​ ಜೈಲು ಸೇರಬೇಕಾಯ್ತು!

nawaz
Published on

ನವದೆಹಲಿ: ಅದು ಜಲೈ 2018ರ ಜುಲೈ 13 ನೇ ತಾರೀಖು, ಪಾಕಿಸ್ತಾನದ ಪ್ರಬಲ ನಾಯಕ, ಆ ದೇಶವನ್ನು ಅತ್ಯಧಿಕ ಬಾರಿ ಪ್ರಧಾನಿಯಾಗಿ ಆಳಿದ ನವಾಜ್​ ಷರೀಫ್​(72), ಅವರ ಪುತ್ರಿ ಮರಿಯಾಂರನ್ನು ತೀವ್ರ ಉದ್ವಿಗ್ನತೆ ನಡುವೆ ಅಧಿಕಾರಿಗಳು ಅರೆಸ್ಟ್​ ಮಾಡಿದ್ದರು. ಪನಾಮ ಪೇಪರ್ಸ್ ಸ್ಕ್ಯಾಂನಲ್ಲಿ ಸುಪ್ರೀಂಕೋರ್ಟ್​ ಇವರಿಬ್ಬರನ್ನು ಅಪರಾಧಿಗಳೆಂದು ಘೋಷಿಸಿದ್ದೇ ಇದಕ್ಕೆ ಕಾರಣವಾಗಿತ್ತು.

ಆದರೆ ನವಾಜ್​ ಷರೀಫ್​, ಅವರ ಪುತ್ರಿ ಮರಿಯಂ ಕೇವಲ ಮೈಕ್ರೋಸಾಫ್ಟ್​ ಫಾಂಟ್​ ನಿಂದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು ಎಂಬ ಅಂಶ ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ. ಈ ಬಗ್ಗೆ ಮಾಹಿತಿ ಇಲ್ಲಿದೆ...

ನವಾಜ್​ ಷರೀಫ್​ ತನ್ನ ಕುಂಟುಂಬಕ್ಕಾಗಿ ಸರ್ಕಾದ ನಿಧಿಗಳನ್ನು ಗುಳುಂ ಮಾಡಿದ್ದಾರೆ, 2016 ಏಪ್ರಿಲ್​ 3ರಂದು 11.5ಮಿಲಿಯನ್ ರಹಸ್ಯ ಪತ್ರಗಳು ಸೋರಿಕೆಯಾಗಿವೆ ಎಂದು ಜರ್ಮನ್​ ಪತ್ರಿಕೆಯೊಂದು ವರದಿ ಮಾಡಿತ್ತು. ಪನಾಮಾ ಪತ್ರಗಳು ಪತ್ರಗಳನ್ನು ಬಳಸಿ ಗ್ರಾಹಕರು ಆಯಾ ಸರ್ಕಾರಗಳಿಗೆ ಶುಲ್ಕ ಪಾವತಿಸದೆ ಬಿಲಿಯನ್ ಡಾಲರ್​ ಹಣ ಹೇಗೆ ಲಪಟಾಯಿಸುತ್ತಾರೆಂದು ಆ ಪತ್ರಿಕೆಯಲ್ಲಿ ವರದಿಯಾಗಿದ್ದು, ಇದರಲ್ಲಿ ನವಾಜ್​ ಷರೀಫ್​ ಬಳಿ ಇರುವ ಆಸ್ತಿಗಿಂತ ಹೆಚ್ಚಿನ ಆಸ್ತಿ ಇದೆ. ಅವರ ಪುತ್ರಿ ಹೆಸರಲ್ಲಿ ಲಂಡನ್​ನಲ್ಲಿ ಬೃಹತ್​ ಅಪಾರ್ಟ್​ಮೆಂಟ್​ ಇದೆ ಎಂದು ಬೆಳಕಿಗೆ ತರಲಾಗಿತ್ತು.

ಈ ಎಲ್ಲ ಆಸ್ತಿಗಳು ಹೇಗೆ ಸಂಪಾದಿಸಿದಿರಿ ಎಂದು 2017ರಲ್ಲಿ ಸುಪ್ರೀಂಕೋರ್ಟ್ ಪ್ರಶ್ನಿಸಿದ್ದು, ನವಾಜ್​ ಪುತ್ರ ಮರಿಯಂ ಕೆಲವು ದಾಖಲೆಗಳನ್ನು ಹಾಜರುಪಡಿಸಿದರು. ಈ ದಾಖಲೆಗಳಲ್ಲಿ 2006ರ ವರ್ಷ ನಮೂದಾಗಿತ್ತು. ಅದರಲ್ಲಿ ಬಳಸಿದ್ದ ಫಾಂಟ್​ ಮೈಕ್ರೋಸಾಫ್ಟ್​ ಕಾಲಿಬ್ರಿ. ಆದರೆ ಈ ಫಾಂಟ್​ ಎಲ್ಲೆಡೆ ಪರಿಚಯವಾಗಿದ್ದೇ 2007ರಲ್ಲಿ. ಇದು ಕೋರ್ಟ್​ನಲ್ಲಿ ರುಜುವಾತಾಗುತ್ತಿದ್ದಂತೆ ಷರೀಫ್​, ಮರಿಯಂ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆಂದು ರುಜುವಾತಾಯಿತು. ಫೋರಾನಿಕ್ಸ್​ ಹ್ಯಾಂಡ್​ ರೈಟಿಂಗ್​ ಕಂಪೆನಿಯೊಂದು ತಪ್ಪು ಒಪ್ಪಿಕೊಂಡಿತು. ನವಾಜ್​ ಅವರಿಗೆ ವಿರುದ್ಧವಾದ ಬಲವಾದ ಸಾಕ್ಷಿ ಸಿಕ್ಕಿದ್ದರಿಂದ 2018ರಲ್ಲಿ ಶಿಕ್ಷೆ ವಿಧಿಸಲಾಯಿತು. ಲಂಡನ್​ನಲ್ಲಿ ಅಕ್ರಮ ಆಸ್ತಿ ಸಂಪಾದನೆ ಕೇಸಲ್ಲಿ 10ವರ್ಷ, ಸೌದಿ ಅರೆಬಿಯಾದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆ ಪ್ರಕರಣದಲ್ಲಿ 5 ವರ್ಷ ಶಿಕ್ಷೆಗೆ ಗುರಿಯಾದರು. ಆದರೆ 2019ರ ನವೆಂಬರ್​ ನಲ್ಲಿ ನವಾಜ್​ ಲಂಡನ್​ಗೆ ಕುಟುಂಬ ಸಮೇತ ಹೋದವರು ಮತ್ತೆ ಪಾಕ್​ನತ್ತ ತಲೆ ಹಾಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net