More

  ಓಟಿಟಿಯತ್ತ ತಮನ್ನಾ ಚಿತ್ತ; ಮೊದಲ ವೆಬ್‌ಸರಣಿಯಲ್ಲಿ ‘ಕೆಜಿಎಫ್’ ಬಳ್ಳಿಯ ಮಿಂಚು

  ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟ ವಿಜಯ್ ವರ್ಮಾ ಜತೆಗಿನ ಓಡಾಟದಿಂದಲೇ ಬಹುಭಾಷಾ ನಟಿ ತಮನ್ನಾ ಭಾಟಿಯಾ ಹೆಚ್ಚು ಸುದ್ದಿಯಲ್ಲಿದ್ದರು. ಇದೀಗ ಅವರು ಮತ್ತೆ ತಮ್ಮ ನಟನೆಯಿಂದ ಸದ್ದು ಮಾಡುತ್ತಿದ್ದಾರೆ. ತಮನ್ನಾ 18 ವರ್ಷಗಳ ಸಿನಿಮಾ ಕರಿಯರ್‌ನಲ್ಲಿ 75ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ‘ಜಾಗ್ವಾರ್’ ಹಾಗೂ ‘ಕೆಜಿಎಫ್ ಚಾಪ್ಟರ್ 1’ ಚಿತ್ರಗಳಲ್ಲಿ ಸ್ಪೆಷಲ್ ಹಾಡುಗಳಲ್ಲಿ ಮಿಂಚಿದ್ದಾರೆ.

  ಇಂತಹ ತಮನ್ನಾ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಜತೆಗೆ ಓಟಿಟಿಯತ್ತಲೂ ಗಮನ ಹರಿಸಿದ್ದಾರೆ. 2021ರಲ್ಲಿ ತೆಲುಗಿನ ‘ಇಲೆವೆಂತ್ ಅವರ್’ ಹಾಗೂ ತಮಿಳಿನ ‘ನವೆಂಬರ್ ಸ್ಟೋರಿ’ ವೆಬ್‌ಸಿರೀಸ್‌ಗಳಲ್ಲಿ ನಟಿಸಿದ್ದ ಅವರು, ಇದೀಗ ಹಿಂದಿ ವೆಬ್‌ಸರಣಿಯಲ್ಲೂ ಅಭಿನಯಿಸಿದ್ದಾರೆ. ಹೆಸರು ‘ಜೀ ಕರ್ದಾ’. ಇದೊಂದು ರೊಮ್ಯಾಂಟಿಕ್ ಡ್ರಾಮಾ ಸರಣಿಯಾಗಿದ್ದು, ಮೊದಲ ಸೀಸನ್‌ನ ಎಂಟು ಸಂಚಿಕೆಗಳು ಇದೇ ತಿಂಗಳ 15ರಂದು ಬಿಡುಗಡೆಯಾಗಲಿವೆ.

  ಅರುಣಿಮಾ ಶರ್ಮಾ ನಿರ್ದೇಶನದ ಈ ವೆಬ್‌ಸರಣಿಯಲ್ಲಿ ತಮನ್ನಾ ಜತೆ ಸುಹೈಲ್ ನಾಯರ್, ಆಶಿಮ್ ಗುಲಾಟಿ, ಆನ್ಯಾ ಸಿಂಗ್, ಮಲ್ಹಾರ್ ಠಕ್ಕರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದಲ್ಲದೇ ಮತ್ತೊಂದು ಹಿಂದಿ ವೆಬ್‌ಸರಣಿಯಲ್ಲೂ ತಮನ್ನಾ ನಟಿಸುತ್ತಿದ್ದಾರೆ. ಜತೆಗೆ ‘ಲಸ್ಟ್ ಸ್ಟೋರೀಸ್ 2’, ಚಿರಂಜೀವಿ ಜತೆ ‘ಭೋಲಾ ಶಂಕರ್’, ರಜಿನಿಕಾಂತ್‌ಗೆ ನಾಯಕಿಯಾಗಿ ‘ಜೈಲರ್’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲೂ ಅವರು ಬಿಜಿಯಿದ್ದಾರೆ. (ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts