

Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸದ್ಯಕ್ಕೆ ಯಾವುದೇ ಬಿಗ್ ಬಜೆಟ್ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಈ ವರ್ಷ, ಒಡೆಲಾ -2 ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ ತಮನ್ನಾ, ಪ್ರಸ್ತುತ ಬಾಲಿವುಡ್‌ಗೆ ಮಾತ್ರ ಸೀಮಿತರಾಗಿದ್ದಾರೆ.
ಸದ್ಯಕ್ಕೆ ತಮನ್ನಾ ಅವರ ಕೈಯಲ್ಲಿ ಕೆಲವೇ ಸಿನಿಮಾಗಳಿವೆ. ಅದರ ನಡುವೆ ಐಟಂ ಹಾಡುಗಳ ಮೂಲಕವೂ ಮನರಂಜನೆ ನೀಡುತ್ತಿದ್ದಾರೆ. ಟಾಲಿವುಡ್‌ನಲ್ಲೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ತಮನ್ನಾ, ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಆವಂತಿಕಾ ಪಾತ್ರದಲ್ಲಿನ ಅವರ ನಟನೆ ಸಿನಿ ರಸಿಕರನ್ನು ಸೆಳೆಯಿತು.
ಇತ್ತೀಚೆಗೆ ಲಾಲಂಟಪ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಾಹುಬಲಿ ಚಿತ್ರದ ಒಂದು ದೃಶ್ಯದ ಬಗ್ಗೆ ತಮನ್ನಾ ಪ್ರತಿಕ್ರಿಯೆ ನೀಡಿದರು. ಪ್ರಭಾಸ್ ಮತ್ತು ತಮನ್ನಾ ನಡುವಿನ ರೊಮ್ಯಾಂಟಿಕ್ ಹೋರಾಟದ ದೃಶ್ಯದ ಬಗ್ಗೆ ಆ ಕಾಲದಲ್ಲಿ ಎದ್ದಿದ್ದ ಆಕ್ಷೇಪಣೆಗಳನ್ನು ಸ್ಪಷ್ಟಪಡಿಸಿದರು.
ಮಿಲ್ಕಿ ಬ್ಯೂಟಿ 'ದಿ ರೇಪ್ ಆಫ್ ಅವಂತಿಕಾ' ಶೀರ್ಷಿಕೆಯಡಿಯಲ್ಲಿ ಸುದ್ದಿ ಮಾಧ್ಯಮದಲ್ಲಿ ಲೇಖನ ಪ್ರಕಟವಾಗಿತ್ತು. ಅನೇಕ ಮಂದಿ ಪ್ರಣಯ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಭಾರಿ ಚರ್ಚೆಯಾಗಿತ್ತು. ಕೊನೆಗೂ ಈ ಬಗ್ಗೆ ಮಾತನಾಡಿರುವ ತಮನ್ನಾ, ಅದು ಆವಂತಿಕಾ ಮೇಲಿನ ಅತ್ಯಾಚಾರವಲ್ಲ. ಒಂದು ಹೆಣ್ಣು ತನ್ನ ಹೆಣ್ತನವನ್ನು ಕಂಡುಕೊಂಡ ದೃಶ್ಯವಾಗಿತ್ತು. ಆದರೆ, ಕೆಲವು ಜನರಿಗೆ ಇದು ಅರ್ಥವಾಗುವುದಿಲ್ಲ ಎಂದು ಹೇಳಿದರು.
ಆ ದೃಶ್ಯ ಕೆಟ್ಟದಾಗಿದೆ ಎಂದು ಭಾವಿಸುವ ಯಾರಾದರೂ ನನ್ನ ದೇಹವನ್ನು ಅದೇ ಬೆಳಕಿನಲ್ಲಿ ನೋಡುತ್ತಾರೆ. ಏಕೆಂದರೆ, ಅದು ಅವರ ದೃಷ್ಟಿಕೋನ. ಒಬ್ಬ ಚಲನಚಿತ್ರ ನಿರ್ಮಾಪಕ ನಿಮ್ಮನ್ನು ತುಂಬಾ ಸುಂದರ ವ್ಯಕ್ತಿ ಎಂದು ತೋರಿಸಲು ಬಯಸುತ್ತಾರೆ. ಆದರೆ, ನೀವು ಅದರಲ್ಲಿ ಇನ್ನೊಂದು ಅರ್ಥವನ್ನು ಕಂಡುಕೊಳ್ಳುತ್ತೀರಿ. ಅದು ಅವರ ಆಲೋಚನೆ. ಅಂತಹ ವಿಷಯಗಳ ಬಗ್ಗೆ ನನಗೆ ಕಾಳಜಿ ಇಲ್ಲ. ಏಕೆಂದರೆ ಒಬ್ಬ ಸೃಜನಶೀಲ ವ್ಯಕ್ತಿಯಾಗಿ, ಆ ದೃಶ್ಯವು ಅವಂತಿಕಾಳ ಮೇಲಿನ ಅತ್ಯಾಚಾರ ಎಂದು ನಾನು ಭಾವಿಸುವುದಿಲ್ಲ, ಅದು ಪುರುಷನೊಬ್ಬ ಅವಂತಿಕಾಳಲ್ಲಿ ಕಂಡುಕೊಳ್ಳುವ ಸೌಂದರ್ಯ ಎಂದು ಭಾವಿಸುತ್ತೇನೆ. ಇದರಲ್ಲಿ, ಒಬ್ಬ ಯುವಕ ಅವಳು ಎಷ್ಟು ಸುಂದರವಾಗಿದ್ದಾಳೆಂದು ತೋರಿಸಲು ಪ್ರಯತ್ನಿಸುತ್ತಾನೆ ಎಂದು ತಮನ್ನಾ ಹೇಳಿದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ತಮನ್ನಾ ಪ್ರಸ್ತುತ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿರುವ ವ್ವಾನ್: ಫೋರ್ಸ್ ಆಫ್ ದಿ ಫಾರೆಸ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ರೇಡ್ 2 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಸೊಂಟ ಬಳಕಿಸಲಿದ್ದಾರೆ. (ಏಜೆನ್ಸೀಸ್)