

ಟಾಲಿವುಡ್ನ ಜನಪ್ರಿಯ ಹೀರೋಗಳ ಜತೆಯಲ್ಲಾ ನಟಿಸಿರುವ ತಮನ್ನಾ ಭಾಟಿಯಾ, ಇದೀಗ ಸತ್ಯದೇವ್ ಎಂಬ ಅಷ್ಟೇನೂ ದೊಡ್ಡ ಹೀರೋ ಜತೆಯಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಚಿತ್ರ ಕರೊನಾ ಹಾವಳಿ ಕೊಂಚ ಕಡಿಮೆಯಾದ ನಂತರ ಪ್ರಾರಂಭವಾಗಲಿದೆ.
ಒಂದು ಕಾಲದಲ್ಲಿ ದೊಡ್ಡ ಸ್ಟಾರ್ಗಳ ಜತೆಗೆ ನಟಿಸುತ್ತಿದ್ದ ತಮನ್ನಾ, ಈಗ ಈ ತರಹ ಅಷ್ಟೇನೂ ಜನಪ್ರಿಯರಲ್ಲದ ಹೀರೋ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಕಾರಣವೇನು? ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿವೆಯಾ ಅಥವಾ ಹೊಸಬರ ಚಿತ್ರದಲ್ಲಿ ಸಂಭಾವನೆ ಜಾಸ್ತಿ ಸಿಗುತ್ತದಾ ಎಂಬಂತಹ ಪ್ರಶ್ನೆಗಳು ಬರಬಹುದು.
ಹಾಗೇನಿಲ್ಲ, ತಮನ್ನಾ ಇದೀಗ ಕಾಜಲ್ ಅಗರವಾಲ್ ದಾರಿಯಲ್ಲಿ ನಡೆಯುವುದಕ್ಕೆ ತೀರ್ಮಾನಿಸಿದ್ದಾರಂತೆ. ಹಾಗಾಗಿಯೇ ಅವರು ಸತ್ಯದೇವ್ ಎನ್ನುವ ನಾನ್ ಕಮರ್ಷಿಯಲ್ ಹೀರೋ ಜತೆಗೆ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಕಾಜಲ್ ನಡೆದ ದಾರಿ ಏನು ಎಂಬ ಪ್ರಶ್ನೆ ಬರುವುದು ಸಹಜ.
ಕಾಜಲ್, ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಈ 15 ವರ್ಷಗಳಲ್ಲಿ ಅವರು ಹಿರಿ-ಕಿರಿಯರು, ಹಳಬರು-ಹೊಸಬರು ಎನ್ನದೆ ಎಲ್ಲರ ಜತೆಗೂ ನಟನೆ ಮಾಡಿದ್ದಾರೆ. ಆ ಕಡೆ ಚಿರಂಜೀವಿ ಜತೆಗೂ ಚಿತ್ರ ಮಾಡುತ್ತಾರೆ. ಈ ಕಡೆ ಅವರ ಮಗ ರಾಮ್ಚರಣ್ ತೇಜ ಜತೆಗೂ ಚಿತ್ರ ಮಾಡುತ್ತಾರೆ. ಅಲ್ಲು ಅರ್ಜುನ್, ಜ್ಯೂನಿಯರ್ ಎನ್.ಟಿ.ಆರ್, ಅಜಯ್ ದೇವಗನ್, ವಿಜಯ್ರಂತ ಸ್ಟಾರ್ಗಳ ಜತೆಗೆ ಬೆಲ್ಲಮಕೊಂಡ ಶ್ರೀನಿವಾಸ್, ಮಂಚು ವಿಷ್ಣುರಂತಹ ಅಷ್ಟೇನೂ ದೊಡ್ಡ ಸ್ಟಾರ್ಗಳ ಜತೆಗೂ ಅಭಿನಯಿಸಿದ್ದಾರೆ.
ಹೀಗೆ ಎಲ್ಲರ ಜತೆಗೆ ಅಭಿನಯಿಸುತ್ತಿರುವುದರಿಂದಲೇ, ಅವರ ಬೇಡಿಕೆ ಹೆಚ್ಚುತ್ತಿದೆ ಮತ್ತು 35 ವರ್ಷಗಳಾದರೂ, ಅವರು ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾರೆ ಎಂಬ ನಂಬಿಕೆ ಟಾಲಿವುಡ್ನಲ್ಲಿ ಎಲ್ಲರಲ್ಲೂ ಇದೆ.
ಇದನ್ನೂ ಓದಿ: ಜೂನಿಯರ್ ರಣಬೀರ್ ಕಪೂರ್ ಸಾವು; ಕಾರಣ ಏನಿರಬಹುದು?
ಈಗ ತಮನ್ನಾಗೆ 30 ವರ್ಷ. ಈಗಾಗಲೇ ಅವರು ತೆಲುಗು ಚಿತ್ರರಂಗದಲ್ಲಿ ಎಲ್ಲಾ ದೊಡ್ಡ ನಟರೊಂದಿಗೂ ನಟಿಸುತ್ತಿದ್ದು, ಅವಕಾಶಗಳು ಕಡಿಮೆಯಾಗುತ್ತಿವೆ. ಇನ್ನೂ ದೊಡ್ಡ ಹೀರೋಗಳು ಅಂತ ನಂಬಿಕೊಂಡು ಕುಳಿತರೆ, ಕೆರಿಯರ್ ಮುಗಿದು ಹೋಗುತ್ತದೆ ಎಂಬ ಭಯ ತಮನ್ನಾ ಅವರದ್ದು. ಅದೇ ಕಾರಣಕ್ಕೆ, ಹಿರಿ-ಕಿರಯ, ಹಳಬರು-ಹೊಸಬರು ಎನ್ನದೆ ಇನ್ನು ಮುಂದೆ ಎಲ್ಲರ ಜತೆಗೂ ನಟಿಸುವುದಕ್ಕೆ ತಮನ್ನಾ ಯೋಚಿಸಿದ್ದಾರಂತೆ. ಇದಕ್ಕೆ ಮುನ್ನುಡಿಯಾಗಿ ಅವರು ಸತ್ಯದೇವ್ ಜತೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.