

ಸುಳ್ಯ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಪಪೂ ವಿಭಾಗ, ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಸುಳ್ಯ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾಟ ನಡೆಯಿತು.
ಪಂದ್ಯಾಟವನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಹರ್ಷವರ್ಧನ್ ಕುತ್ತಮೊಟ್ಟೆ ಉದ್ಘಾಟಿಸಿದರು. ಸಂಚಾಲಕ ಕೆ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಸ್ವಾಗತಿಸಿದರು. ಮುಖ್ಯಶಿಕ್ಷಕ ಸೀತಾರಾಮ ಎಂ.ಕೆ., ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ್, ಕಾಲೇಜು ಕ್ರೀಡಾ ಮಂತ್ರಿ ಕೀರ್ತನ್ ಕುಮಾರ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶಾಂತಿ ಎ.ಕೆ. ವಂದಿಸಿದರು. ಉಪನ್ಯಾಸಕ ಮೋಹನ್ ಚಂದ್ರ ನಿರೂಪಿಸಿದರು. ಉಪನ್ಯಾಸಕ ಲಿಂಗಪ್ಪ, ಪದ್ಮಕುಮಾರ್, ಚಂದ್ರಶೇಖರ್, ಧನ್ಯರಾಜ್, ಚಿದಾನಂದ ಸಹಕರಿಸಿದರು. ತಾಲೂಕಿನ ಬಾಲಕರ, ಬಾಲಕಿಯರ 14 ತಂಡಗಳು ಭಾಗವಹಿಸಿದ್ದವು.