ಕೊಂಡೆವೂರು ಚಾತುರ್ಮಾಸ್ಯ ಮಂಗಲೋತ್ಸವ

Ksd_Kondevooru
Published on

ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ 21ನೇ ಚಾತುರ್ಮಾಸ್ಯ ಸೆ.18ರಂದು ಬುಧವಾರ ಸಂಪನ್ನಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸೆ.15ರಂದು ಸೂರ್ಯಾಸ್ತದಿಂದ 17ರ ಸೂರ್ಯಾಸ್ತದವರೆಗೆ ಅಖಂಡ ಭಜನೋತ್ಸವ ನಡೆಯಲಿದೆ.

17ರಂದು ಸಂಜೆ 6.30ರಿಂದ ಶ್ರೀಗಳ ಉಪಸ್ಥಿತಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ.

ಬಡಾಜೆ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ, ಉದ್ಯಮಿ ಬಲರಾಮ್ ಭಟ್ ಕಾಕುಂಜೆ, ಭದ್ರಾವತಿಯ ಬನಶಂಕರಿ ದೇವಸ್ಥಾನದ ಅಧ್ಯಕ್ಷ ಎಂ.ಪ್ರಭಾಕರ, ಭದ್ರಾವತಿ ಸಿದ್ಧಾರೂಢ ಆಶ್ರಮದ ಕಾರ್ಯದರ್ಶಿ ಡಿ.ರಾಮಮೂರ್ತಿ, ಮುಳಿಂಜ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ, ಉದ್ಯಮಿ ಬಾಲಕೃಷ್ಣ, ಮೋಹನ್ ಶೆಟ್ಟಿ ತೂಮಿನಾಡು ಉಪಸ್ಥಿತರಿರುವರು.

18ರಂದು ಚಾತುರ್ಮಾಸ್ಯ ಮಂಗಲೋತ್ಸವದ ಸಂದರ್ಭ ಬೆಳಗ್ಗೆ 5.30ರಿಂದ ಪಟ್ಟದ ದೇವರ ಪೂಜೆ ನಂತರ ಮೃತ್ತಿಕಾ ವಿಸರ್ಜನೆ ನಡೆಯಲಿದೆ. ಬಳಿಕ 7.30ಕ್ಕೆ ಮಹಾಪೂಜೆ, ಗೋಪೂಜೆ ನಡೆದ ನಂತರ ಮಂಗಲ ಮಂತ್ರಾಕ್ಷತೆ ವಿತರಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net