

ಬದಿಯಡ್ಕ: ಹೊನ್ನಾವರದಿಂದ ಬಂದು ಕಾಸರಗೋಡಿನಲ್ಲಿ ನೆಲೆಸಿದ ಎಸ್.ವಿ.ಭಟ್ಟರು ಕಾಸರಗೋಡು ಜಿಲ್ಲೆಯಲ್ಲಿ ನಡೆಸಿದ ಕನ್ನಡ ಸೇವೆ ಅನುಪಮ ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢಶಾಲೆಯಲ್ಲಿ, ಘಟಕದ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ಭಟ್ ಸಂಸ್ಮರಣೆಯಲ್ಲಿ ಮಾತನಾಡಿದರು.
ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಮಿತಿ ಅಧ್ಯಕ್ಷ ವಕೀಲ ಮುರಳೀಧರ ಬಳ್ಳಕ್ಕುರಾಯ, ನೀರ್ಚಾಲು ಶಾಲಾ ಪ್ರಬಂಧಕ ಜಯದೇವ, ಕೇರಳ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾಧ್ಯಕ್ಷ ಡಾ.ಶ್ರೀಶ ಕುಮಾರ, ನಿವೃತ್ತ ಮುಖ್ಯ ಶಿಕ್ಷಕ ಶಿವಕುಮಾರ ಕೆ, ನೀರ್ಚಾಲು ಪ್ರೌಢಶಾಲಾ ಮುಖ್ಯಶಿಕ್ಷಕ ಶಿವಪ್ರಕಾಶ್ ಎಂ.ಕೆ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತಡ್ಕ, ಸಾಹಿತಿ ಡಾ.ಪ್ರಮೀಳಾ ಮಾಧವ, ವಿ.ಬಿ.ಕುಳಮರ್ವ, ಜಯ ನಾರಾಯಣ ತಾಯನ್ನೂರು ಮೊದಲಾದವರಿದ್ದರು.
ಎಸ್.ವಿ.ಭಟ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ಪ್ರಮುಖರಾದ ರಾಮಚಂದ್ರ ಭಟ್, ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ಕೆ.ಕಮಲಾಕ್ಷ, ಡಾ.ಮಹೇಶ್ವರಿ ಯು, ಡಾ.ರತ್ನಾಕರ ಮಲ್ಲಮೂಲೆ, ಸಾಹಿತಿ ವೈ.ಸತ್ಯನಾರಾಯಣ, ಬಿ.ರಾಮಮೂರ್ತಿ, ಬಾಲ ಮಧುರಕಾನನ, ಶಿವರಾಮ ಪಿ.ವಿ, ಶ್ಯಾಮಪ್ರಸಾದ್ ಕುಳಮರ್ವ, ಸುಕುಮಾರ ಆಲಂಪಾಡಿ, ಶಶಿಕಲಾ ಕಾಞಂಗಾಡು, ವಕೀಲ ಥೋಮಸ್ ಡಿಸೋಜ, ಮೊಹಮ್ಮದಾಲಿ, ಸುಬ್ರಹ್ಮಣ್ಯ ಭಟ್, ಉದನೇಶವೀರ, ಸುಂದರ ಬಾರಡ್ಕ ಮೊದಲಾದವರು ಪಾಲ್ಗೊಂಡರು.
ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ವಾಣಿ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.