'ತಾಜ್​ ಮಹಲ್​​'ನ್ನು ಮೊದಲು ಟ್ರೇಲರ್​ನಲ್ಲಿ ನೋಡಿ ...

Taj Mahal 2 - Final
Published on

ಬೆಂಗಳೂರು: ಈ ಹಿಂದೆ 'ಡೇಂಜರ್ ಜೋನ್', 'ನಿಶ್ಯಬ್ದ ೨' ಹಾಗೂ 'ಅನುಷ್ಕಾ' ಚಿತ್ರಗಳನ್ನು ನಿರ್ದೇಶಿಸಿದ್ದ ದೇವರಾಜ್​ ಕುಮಾರ್​, ಇನ್ನೊಂದು ಚಿತ್ರ ಮಾಡಿ ಮುಗಿಸಿದ್ದಾರೆ. ಅದೇ 'ತಾಜ್​ ಮಹಲ್​ 2'. ಈ ಬಾರಿ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿ, ಅದರಲ್ಲಿ ಹೀರೋ ಆಗಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಇದೀಗ ಮುಗಿದಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ.

'ತಾಜ್​ ಮಹಲ್​ 2' ಎಂಬ ಹೆಸರು ಕೇಳಿದರೆ, ಇದು ಮರ್ಡರ್​ ಮಿಸ್ಟರಿ ಇರಲಾರದು, ಬಹುಶಃ ಲವ್​ಸ್ಟೋರಿಯೇ ಇರಬೇಕು ಎಂದು ನಿಮಗನಿಸಿದ್ದಲ್ಲಿ, ನೀವು ಸೆಂಟ್​ ಪರ್ಸೆಂಟ್​ ನಿಜ. ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆ ಇರುವ ಚಿತ್ರ. ಆದರೆ, ಆರ್​. ಚಂದ್ರ ನಿರ್ದೇಶನದ 'ತಾಜ್​ ಮಹಲ್​'ಗೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ, ಇದು ಅದರ ಮುಂದುವರೆದ ಭಾಗವೂ ಅಲ್ಲ.

ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಈ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ, ಗಗನಚುಕ್ಕಿ, ಬರಚುಕ್ಕಿ ಮುಂತಾದ ಕಡೆ 65 ದಿನಗಳ ಚಿತ್ರೀಕರಣ ನಡೆದಿದೆ. ದೇವರಾಜ್ ಕುಮಾರ್ ಅವರಿಗೆ ನಾಯಕಿಯಾಗಿ ಸಮೃದ್ಧಿ ಶುಕ್ಲ ಅಭಿನಯಿಸಿದ್ದಾರೆ.

'ತಾಜ್​ ಮಹಲ್​ 2' ಚಿತ್ರಕ್ಕೆ ಮನವರ್ಷಿ ನವಲಗುಂದ ಹಾಡುಗಳನ್ನು ಬರೆದಿದ್ದು, ವಿಕ್ರಂ ಸೆಲ್ವ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ವೀನಸ್ ಮೂರ್ತಿ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net