VIDEO| 5 ಭಾಷೆಗಳಲ್ಲಿ 777 ಚಾರ್ಲಿಯ 'ಟಾರ್ಚರ್ ಸಾಂಗ್' ರಿಲೀಸ್! ಚಿತ್ರದ ಬಿಡುಗಡೆಗೂ ದಿನಾಂಕ ನಿಗದಿ

charlie
Published on

ಬೆಂಗಳೂರು: ಗೌರಿ ಗಣೇಶ ಹಬ್ಬದ ಪ್ರಯುಕ್ತ, ಬಹುಭಾಷೆಗಳಲ್ಲಿ ತಯಾರಾಗುತ್ತಿರುವ ರಕ್ಷಿತ್​ ಶೆಟ್ಟಿಯವರ '777 ಚಾರ್ಲಿ' ಚಿತ್ರದ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಲಾಗಿದೆ. ಯೂಟ್ಯೂಬ್​ನಲ್ಲಿ ರಿಲೀಸ್ ಆಗಿರುವ ಈ 'ಟಾರ್ಚರ್ ಸಾಂಗ್' ಎಂಬ ಹೆಸರಿನ ಹಾಡು ಐದು ಭಾಷೆಗಳಲ್ಲಿ ಮೂಡಿಬಂದಿದೆ.

ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸಾಗಿರುವ 'ಟಾರ್ಚರ್​ ಸಾಂಗ್'​ನ ಕನ್ನಡ ಆವೃತ್ತಿಯನ್ನು ಗಾಯಕ ವಿಜಯ್​ ಪ್ರಕಾಶ್​ ಹಾಡಿದ್ದಾರೆ. ಈ ಗೀತೆಗೆ ನಾಗಾರ್ಜುನ ಶರ್ಮ ಸಾಹಿತ್ಯ ಒದಗಿಸಿದ್ದರೆ, ನೊಬಿನ್ ಪೌಲ್ ಸಂಗೀತ ನೀಡಿದ್ದಾರೆ. ಹಿಂದಿ ಆವೃತ್ತಿಗೆ ಶೈನಿ ದಾಸ್​ ಸಾಹಿತ್ಯ ಬರೆದಿದ್ದರೆ, ಸ್ವರೂಪ್​ ಖಾನ್​ ಹಾಡಿದ್ದಾರೆ. ಚಿತ್ರದ ವಿವಿಧ ಭಾಷಾ ಆವೃತ್ತಿಗಳ ವಿವರಗಳನ್ನು ಹೊಂದಿದ ಲಿಂಕ್​ಅನ್ನು ನಟ ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ.

ಪ್ಯಾನ್​ ಇಂಡಿಯ ಚಿತ್ರವಾಗಿರುವ 777 ಚಾರ್ಲಿ ಚಿತ್ರವನ್ನು ಬರುವ ಡಿಸೆಂಬರ್ 31 ಕ್ಕೆ ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ. ರಕ್ಷಿತ್ ಶೆಟ್ಟಿ, ಸಂಗೀತ ಶೃಂಗೇರಿ, ರಾಜ್ ಬಿ.ಶೆಟ್ಟಿ, ಡ್ಯಾನಿಶ್ ಸೇತ್ ಮತ್ತು ಬಾಬಿ ಸಿಂಹ​ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವನ್ನು ಕಿರಣ್​ರಾಜ್ ಕೆ. ನಿರ್ದೇಶಿಸಿದ್ದಾರೆ. ನಾಯಿಯೊಂದರ ಸುತ್ತ ಹೆಣೆದಿರುವ ಈ ಚಿತ್ರವನ್ನು ಜಿ.ಎಸ್​.ಗುಪ್ತ ಮತ್ತು ರಕ್ಷಿತ್​ ಶೆಟ್ಟಿ ನಿರ್ಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net