ತೈವಾನ್‌ನಲ್ಲಿ ಪ್ರಬಲ ಭೂಕಂಪನ; 9 ಜನರು ದುರ್ಮರಣ, 50 ಮಂದಿ ನಾಪತ್ತೆ! ಇಬ್ಬರು ಭಾರತೀಯರು ಕಾಣೆ

WhatsApp-Image-2024-04-04-at-7.15.07-AM
Published on

ಹುವಾಲಿಯನ್, ತೈವಾನ್: ಕಳೆದ 25 ವರ್ಷಗಳಲ್ಲಿ ತೈವಾನ್‌ನಲ್ಲಿ ಸಂಭವಿಸಿದ ಅತಿದೊಡ್ಡ ಭೂಕಂಪನಕ್ಕೆ ಇಲ್ಲಿಯವರೆಗೆ 9 ಜನರು ಸಾವನ್ನಪ್ಪಿದ್ದು, 941ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ 50 ಮಂದಿ ಕಾಣೆಯಾಗಿದ್ದಾರೆ ಎಂದು ಇತ್ತೀಚಿನ ವರದಿ ಉಲ್ಲೇಖಿಸಿದೆ. ನಾಪತ್ತೆಯಾದ 50 ಜನರ ಪೈಕಿ ಇಬ್ಬರು ಭಾರತೀಯರು ಇದ್ದಾರೆ ಎಂದು ಹೇಳಲಾಗಿದೆ.

ಸದ್ಯ ಪ್ರಬಲ ಭೂಕಂಪಕ್ಕೆ ತೈವಾನ್ ದೇಶ ತತ್ತರಿಸಿ ಹೋಗಿದ್ದು, ನಾಪತ್ತೆಯಾದ ಇಬ್ಬರು ಭಾರತೀಯರಲ್ಲಿ ಒಬ್ಬರು ಪುರುಷ ಮತ್ತು ಮೊತ್ತೊಬ್ಬರು ಮಹಿಳೆ ಎಂಬುದು ವರದಿಯಿಂದ ತಿಳಿದುಬಂದಿದೆ. ಕಾಣೆಯಾದವರ ಪತ್ತೆಗಾಗಿ ಶೋಧ ಕಾರ್ಯ ಆರಂಭಗೊಂಡಿದೆ ಎಂದು ತೈವಾನ್ ಸರ್ಕಾರ ಮಾಹಿತಿ ಹಂಚಿಕೊಂಡಿದೆ.

ಭೂಕಂಪದ ಕೇಂದ್ರಬಿಂದುವಾದ ಹುವಾಲಿಯನ್ ಕೌಂಟಿಯ ಕರಾವಳಿಯಲ್ಲಿದೆ. ತೀವ್ರ ಭೂಕಂಪನದಿಂದ ಬೃಹತ್​ ಕಟ್ಟಡಗಳು ವಾಲಿದ್ದು, ನೆಲಮಹಡಿಗಳು ಪುಡಿ ಪುಡಿಯಾಗಿವೆ. 7.4 ತೀವ್ರತೆಯ ಭೂಕಂಪನ ಸಂಭವಿಸುತ್ತಿದ್ದಂತೆ ಹಲವೆಡೆ ಕಂಪನದ ಅನುಭವ ಉಂಟಾಗಿದೆ. ಭೂಕಂಪವು ಹುವಾಲಿಯನ್ ಕೌಂಟಿಯಿಂದ ಸುಮಾರು 15 ಮೈಲುಗಳಷ್ಟು ದಕ್ಷಿಣಕ್ಕೆ 8 ಗಂಟೆಗೆ ಕೆಲವೇ ನಿಮಿಷಗಳ ಸಮೀಪದಲ್ಲಿ ಸಂಭವಿಸಿದೆ (ಸ್ಥಳೀಯ ಸಮಯಕ್ಕೆ ಅನುಗುಣವಾಗಿ). ಸೆಂಟ್ರಲ್ ವೆದರ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಐದು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 76 ಗಂಭೀರ ಘಟನೆಗಳನ್ನು ತೈವಾನ್ ದಾಖಲಿಸಿದೆ ಎಂದು ತಿಳಿಸಿದೆ.

ತೈವಾನ್‌ನ ಪ್ರಬಲ ಭೂಕಂಪನ ಸಂಭವಿಸಿದ ವೇಳೆ ಗುಯಿಶನ್ ದ್ವೀಪದ ಬಂಡಗೆಳು ಸಮುದ್ರಕ್ಕೆ ಉರುಳಿ ಬಿದ್ದಿದ್ದು, ಪ್ರತ್ಯಕ್ಷದರ್ಶಿಯೊಬ್ಬರು ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net