

ಬಾಲಿವುಡ್ನ ಸೆಲೆಬ್ರಿಟಿ ಮಕ್ಕಳ ಪೈಕಿ ಅತ್ಯಂತ ಜನಪ್ರಿಯ ಎಂದರೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಮಗ ತೈಮುರ್. ಪ್ರತಿ ದಿನ ತೈಮುರ್ನ ಒಂದಲ್ಲಾ ಒಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ ಮತ್ತು ತೈಮುರ್ ಬಹಳ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ ಎಂದರೆ ತಪ್ಪಿಲ್ಲ.
ತೈಮುರ್ನಂತೆಯೇ, ಅವನನ್ನು ನೋಡಿಕೊಳ್ಳುವ ಆಯಾ ಕೂಡಾ, ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ? ಆಕೆಯ ಸಂಬಳ. ಮೂಲಗಳ ಪ್ರಕಾರ, ಸಾಫ್ಟ್ವೇರ್ ಇಂಜಿನಿಯರ್ಗಳು ಮತ್ತು ದೊಡ್ಡದೊಡ್ಡ ಅಧಿಕಾರಿಗಳು ಸಹ ತೈಮುರ್ ಆಯಾ ಪಡೆಯುವ ಸಂಬಳವನ್ನು ಪಡೆಯುವುದಿಲ್ಲವಂತೆ.
ಇದನ್ನೂ ಓದಿ: ಗುರುಪೌರ್ಣಮಿಯಂದು ದಿಗ್ಗಜರಿಗೆ ನಮನ ಸಲ್ಲಿಸಿದ ತಮನ್
ಹಾಗಾದರೆ, ತೈಮುರ್ ಆಯಾ ಸಾವಿತಿ ಅವರ ಸಂಬಳವೆಷ್ಟು ಎಂಬ ಪ್ರಶ್ನೆ ಬರಬಹುದು. ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿತು. ಅದು ಬೇಸಿಕ್ ಸಂಬಳವಂತೆ. ಒಮ್ಮೊಮ್ಮೆ ಓವರ್ಟೈಮ್ ಆದರೆ, ಅದು ಎರಡು ಲಕ್ಷದವರೆಗೂ ಮುಟ್ಟುವ ಸಾಧ್ಯತೆ ಇದೆ. ದಿನದ ಬಹುಪಾಲು ಸಮಯವನ್ನು ಸಾವಿತಿ ಅವರು ತೈಮುರ್ನ ನೋಡಿಕೊಳ್ಳುವುದರಲ್ಲೇ ಕಳೆಯುತ್ತಾರೆ. ಹೆಚ್ಚು ಸಮಯ ಕಳೆಯುತ್ತಿದ್ದಂತೆ, ಆಕೆಯ ಸಂಬಳ ಕೂಡಾ ಹೆಚ್ಚಾಗುತ್ತದೆ ಎನ್ನುವುದು ವಿಶೇಷ.
ಅದಕ್ಕೆ ಸರಿಯಾಗಿ, ಬಾಂದ್ರಾ ಪ್ರದೇಶದಲ್ಲಿ ಸಾವಿತಿ ಅನೇಕ ಬಾರಿ ತೈಮುರ್ ಜತೆಗೆ ಓಡಾಡುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಬರೀ ಮನೆಯಲ್ಲಿದ್ದಾಗಲಷ್ಟೇ ಅಲ್ಲ, ಕೆಲವೊಮ್ಮೆ ಸೈಫ್ ಮತ್ತು ಕರೀನಾ ವಿದೇಶ ಪ್ರವಾಸಕ್ಕೆ ಹೋದಾಗಲೂ, ತೈಮುರ್ನನ್ನು ನೋಡಿಕೊಳ್ಳುವುದಕ್ಕೆ ಸಾವಿತಿ ಅವರನ್ನು ಕರೆದುಕೊಂಡು ಹೋಗುತ್ತಾರಂತೆ.
ಇದನ್ನೂ ಓದಿ: PHOTO: ಅಬುದಾಬಿಯಲ್ಲಿ ಕೆಜಿಎಫ್ ಬೆಡಗಿ ಮೌನಿ ರಾಯ್ ಹಾಟ್ ಅವತಾರ ಹೇಗಿದೆ ನೋಡಿ…
ಈ ಬಗ್ಗೆ ಕರೀನಾ ಸಾಕಷ್ಟು ಬಾರಿ ಟ್ರೋಲ್ ಆಗಿದ್ದಾರೆ. ಮಗನನ್ನು ಬೇರೆಯವರೊಂದಿಗೆ ಬಿಟ್ಟು, ಬಿಂದಾಸ್ ಆಗಿ ಓಡಾಡಿಕೊಂಡಿರುವುದಕ್ಕೆ ಸಾಕಷ್ಟು ಬಾರಿ ನೆಟ್ಟಿಗರಿಂದ ಕೆಟ್ಟ ಮಾತುಗಳನ್ನು ಕೇಳಿದ್ದಾರೆ. ಆದರೆ, ಕರೀನಾ ಈ ಬಗ್ಗೆ ಯಾವತ್ತೂ ಬೇಸರಿಸಿಕೊಂಡಿಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಾವಿತಿ ಅವರಿಗೆ ಕೊಡುವ ಸಂಬಳದ ಬಗ್ಗೆ ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ.
ಇತ್ತೀಚೆಗೆ ಅರ್ಬಾಜ್ ಖಾನ್ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ, ಕರೀನಾಗೆ ಸಾವಿತಿ ಅವರ ಸಂಬಳದ ಬಗ್ಗೆ ಕೇಳಲಾಯಿತು. ಈ ಬಗ್ಗೆ ಮಾತನಾಡಿದ ಅವರು, 'ಮಗು ಸುರಕ್ಷಿತವಾಗಿದ್ದರೆ ಅಷ್ಟೇ ಸಾಕು. ಅಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ' ಎಂದು ಎಲ್ಲರ ಬಾಯಿ ಮುಚ್ಚಿಸಿದ್ದರು.