ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಜಗಳ: 32 ವರ್ಷದ ವ್ಯಕ್ತಿ ಬಂಧನ Property Dispute

Upp_Fight
Published on

Property Dispute : ಆಸ್ತಿ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಕಲಹ ಉಂಟಾಗಿ, ಕಿರಿಯ ಸಹೋದರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಮುಂಬೈನ ಚೆಂಬೂರಿನಲ್ಲಿ ನಡೆದಿದೆ.

ಗಾಯಾಳು ಸೂರಜ್ ಮುಹಮ್ಮದ್ ರಾಮಕಿಶೋರ್ ಠಾಕೂರ್ (26) ಅವರನ್ನು ಸಿಯಾನ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಕೊಲೆ ಆರೋಪದ ಮೇರೆಗೆ ಅಣ್ಣನಾದ ಚಂದ್ರಮೋಹನ್​ ರಾಮಕಿಶೋರ್ ಠಾಕೂರ್​ನನ್ನು ಆರ್​ಸಿಎಫ್​ ಪೊಲೀಸರು ಬಂಧಿಸಿದ್ದಾರೆ.

ಪೋಲಿಸರ ಮಾಹಿತಿ ಪ್ರಕಾರ, ವಾಶಿನಕ ಮಾಧ (MADHA) ಕಾಲೋನಿಯಲ್ಲಿ ದೂರುದಾರರಾದ ಲಗೀನ ರಾಮಕಿಶೋರ್​ ಠಾಕೂರ್​ ದಂಪತಿ, ಕಿರಿಯ ಮಗ ಸೂರಜ್​ನೊಂದಿಗೆ ವಾಸಿಸುತ್ತಿದ್ದರು. ಹಿರಿಯ ಮಗ ಅವನ ಕುಟುಂಬದೊಂದಿಗೆ ಬೇರೆ ಮನೆಯಲ್ಲಿ ವಾಸಿಸುತ್ತಿದ್ದ. ಲಗೀನ ಹಾಗೂ ಆಕೆಯ ಪತಿ ಮುಂಬೈಯಿಂದ ತಮ್ಮ ಊರಿಗೆ ವಾಪಾಸ್ಸಾಗುವಾಗ ಮಗನಾದನ ಚಂದ್ರಮೋಹನ್​ ಅವರ ಮೊಬೈಲ್​ ಕದ್ದು, ಬ್ಯಾಂಕ್ ಖಾತೆಗಳನ್ನು ವಿಚಾರಣೆ ನಡೆಸಿದ್ದರಿಂದ ಅವರ ಖಾತೆಗಳನ್ನು ಬ್ಲಾಕ್​ ಮಾಡಿಸಿದರು ಎಂದು ತಿಳಿಸಿದ್ದಾರೆ.

ಮಾತಿನ ಚಕಮಕಿಯಲ್ಲಿ ದಾಳಿ

ಸೂರಜ್​ ಹಾಗೂ ಚಂದ್ರಮೋಹನ್​ ನಡುವೆ ಆಸ್ತಿಯ ವಿಚಾರವಾಗಿ ಅನೇಕ ಬಾರಿ ಗಲಭೆಗಳು ನಡೆಯುತ್ತಿದ್ದವು. ಹಾಗೆ ಚಂದ್ರಮೋಹನ್​ ಉದ್ದೇಶಪೂರ್ವಕವಾಗಿ ಆಸ್ತಿಯನ್ನು ವಶಪಡಿಸಿಕೊಳ್ಳಲು ಪಯತ್ನಿಸುತ್ತಿದ್ದಾನೆ ಎಂದು ಇವರು ನಂಬಿದ್ದರು. ಶುಕ್ರವಾರ (ಜುಲೈ 25) ರಂದು ಸಂಜೆ 6:15 ಕ್ಕೆ ಚಂದ್ರಮೋಹನ್​ ಚಾಕುವಿನಿಂದ ತರಕಾರಿ ಕತ್ತರಿಸುತ್ತಿರುವಾಗ, ಸೂರಜ್​ ಆತನಿಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಈ ವೇಳೆ ಕೋಪಗೊಂಡ ಚಂದ್ರಮೋಹನ್​ ನಿನಗೆ ಎಷ್ಟು ಆಸ್ತಿ ಬೇಕು? ಎಂದು ಪ್ರಶ್ನಿಸಿ, ತಾನು ಹಿಡಿದಿದ್ದ ಚಾಕುವಿನಿಂದ ಸೂರಜ್​ನ ಹೊಟ್ಟೆಗೆ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಇನ್ನು ಸೂರಜ್​ ಗಂಭೀರ ಗಾಯಗೊಂಡು ಅಲ್ಲಿಯೇ ಬಿದ್ದಿದ್ದಾನೆ.

ನಂತರ ಸೂರಜ್​ನನ್ನು ಕುಟುಂಬಸ್ಥರು ಸಿಯಾನ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ತನಿಖೆಗೆ ಸಂಬಂಧಪಟ್ಟಂತೆ ಆರ್‌ಸಿಎಫ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (BNS) ಕಾಯ್ದೆ ಅಡಿ ಸೆಕ್ಷನ್ 109 ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net