More

    ಮೃಗೀಯ ವರ್ತನೆ: 13 ವರ್ಷದ ಬಾಲಕನ ಮೇಲೆ ಅತ್ಯಾಚಾರವೆಸಗಿದ ಕಾಮಾಂಧರು

    ಗಾಜಿಯಾಬಾದ್: ಇತ್ತೀಚಿಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, 13 ವರ್ಷದ ಬಾಲಕನ ಮೇಲೆ ಕೆಲಸಗಾರರಿಬ್ಬರು ಅತ್ಯಾಚಾರವೆಸಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​​ನಲ್ಲಿ ನಡೆದಿದೆ.

    ಇದನ್ನೂ ಓದಿ: 33 ವರ್ಷದ ಗೆಳತಿಯೊಂದಿಗೆ ಪ್ರೀತಿ ಪ್ರೇಮ ಪ್ರಣಯ: 900 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಪ್ರೇಯಸಿಗೆ ನೀಡಿದ ಮಾಜಿ ಪ್ರಧಾನಿ


    ಚುನೂ ಮತ್ತು ಮುನೂ ಎಂಬ ಆರೋಪಿಗಳೇ ಈ ಕೃತ್ಯವನ್ನು ಎಸಗಿದ್ದು, ಗೋವಿಂದಪುರಂ ಪ್ರದೇಶದಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಎಲ್ಲಾ ಕೆಲಸಗಾರರು ಅಂಗಡಿಯಲ್ಲಿದ್ದ ವೇಳೆ ಹುಡುಗ ಮತ್ತು ಇಬ್ಬರು ಕೆಲಸಗಾರರೊಂದಿಗೆ ಛಾವಣಿಯ ಮೇಲಿದ್ದ ಕೋಣೆಯಲ್ಲಿದ್ದನು.
    ಈ ವೇಳೆ ಆರೋಪಿಗಳು ಬಾಲಕನ ಮೇಲೆ ಅತ್ಯಾಚಾರಗೈದಿದ್ದಾರೆ. ಸ್ಥಳೀಯ ಮಾಧ್ಯಮಗಳಲ್ಲಿ ಘಟನೆ ವರದಿಯಾದ ನಂತರ ವಿಷಯ ಬೆಳಕಿಗೆ ಬಂದಿದ್ದು, ಕೂಡಲೇ ಎಚ್ಚೆತ್ತ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟವನ್ನು ನಡೆಸಿದ್ದರು.

    ಇದನ್ನೂ ಓದಿ: VIDEO | ಸುಮ್ಮನೆ ಹೊರಟಿದ್ದ ವ್ಯಕ್ತಿಯ ಮೇಲೆ ಎರಡೆರಡು ಬಾರಿ ಹರಿದ ಆಂಬುಲೆನ್ಸ್​​​

    ಇನ್ನು, ಈ ಪ್ರಕರಣ ಕುರಿತು ಮಾತನಾಡಿದ ಸಿಪಿ ಮೋದಿನಗರದ ಸಹಾಯಕ ಪೊಲೀಸ್ ಆಯುಕ್ತ ರಿತೇಶ್ ತ್ರಿಪಾಠಿ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಚುನೂನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಮುನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts