More

    ಪಾನಿ ಪುರಿ ವ್ಯಾಪಾರಿಗೆ ಹಿಗ್ಗಾಮುಗ್ಗಾ ಥಳಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲು!

    ಥಾಣೆ: ಸಾಲ ಮರುಪಾವತಿಸಲಿಲ್ಲ ಎಂದು ಪಾನಿ ಪುರಿ ವ್ಯಾಪಾರಿಯನ್ನು ಅಪಹರಿಸಿ ನಂತರದಲ್ಲಿ ಹಿಗ್ಗಾಮುಗ್ಗಾ ಥಳಿಸಿದ ನಾಲ್ವರ ವಿರುದ್ಧ ಥಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಭರತನಾಟ್ಯ ಪಾರಂಪರಿಕ ನೃತ್ಯಕಲೆ: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿಕೆ

    ಘಟನೆಯ ವಿವರ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ 33 ವರ್ಷದ ಪಾನಿಪುರಿ ವ್ಯಾಪಾರಿಯು ಸಾಲ ಮರುಪಾವತಿ ಮಾಡಲು ವಿಫಲಗೊಂಡ ಎಂದು ಆಕ್ರೋಶ ವ್ಯಕ್ತಪಡಿಸಿದ ಕಿಡಿಗೇಡಿಗಳು, ಆತನನ್ನು ತನ್ನ ಮೂವರು ಸ್ನೇಹಿತರೊಂದಿಗೆ ಅಪಹರಿಸಿ, ಮನೆಯೊಂದರಲ್ಲಿ ಕೂಡಿ ಹಾಕಿ ಥಳಿಸಿದ್ದಾನೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಪೊಲೀಸರು, “ಕಲ್ಯಾಣ್ ಪಟ್ಟಣದ ಸ್ಟಾಲ್‌ನಲ್ಲಿ ಪಾನಿ ಪುರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯು ಒಂದೂವರೆ ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ ಶೇ.5% ಬಡ್ಡಿಗೆ 1 ಲಕ್ಷ ರೂ. ತೆಗೆದುಕೊಂಡಿದ್ದನ್ನು” ಎಂದು ಕಲ್ಯಾಣ್‌ನ ಮಹಾತ್ಮ ಫುಲೆ ಚೌಕ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಸಾಲದ ಹಣದಲ್ಲಿ 20,000 ರೂ.ಗಳನ್ನು ಮುಂಚಿತವಾಗಿ ಪಾವತಿಸಿದ್ದರು ಕೂಡ ಉಳಿದ ಮೊತ್ತವನ್ನು ಕೊಡಲು ವ್ಯಾಪಾರಿಗೆ ಸಾಧ್ಯವಾಗಿಲ್ಲ. ಬಾಕಿ ಮೊತ್ತವನ್ನು ಕೂಡಲೇ ಕೊಡಬೇಕು ಎಂದು ಆತನ ಅಂಗಡಿ ಮುಂದೆ ಬಂದ ವ್ಯಕ್ತಿ, ತನ್ನ ಮೋಟಾರ್​​ ಬೈಕಿನಲ್ಲಿ ಪಾನಿಪುರಿ ವ್ಯಾಪಾರಿಯನ್ನು ಅಪಹರಿಸಿ ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾನೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜಿ20 ಶೃಂಗಸಭೆ; ಲಂಬಾಣಿ ಕುಸುರಿ ಕಸೂತಿ ಪ್ರದರ್ಶನದ ಅತಿದೊಡ್ಡ ಗುರಿ

    “ಹಲ್ಲೆಗೊಳಗಾದ ವ್ಯಕ್ತಿ ನಮ್ಮ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ನಾಲ್ವರು ಆರೋಪಿಗಳ ವಿರುದ್ಧ 364 (ಎ) (ಅಪಹರಣ), 341 (ತಪ್ಪು ಸಂಯಮ), 323, 324 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 506 (ಅಪರಾಧ ಬೆದರಿಕೆ), ಮತ್ತು ನಿಬಂಧನೆಗಳು ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಭಾನುವಾರ ಪ್ರಕರಣ ದಾಖಲಿಸಲಾಗಿದೆ” ಎಂದು ಹಿರಿಯ ಪೊಲೀಸ್​ ಅಧಿಕಾರಿ ಹೇಳಿದ್ದಾರೆ,(ಏಜೆನ್ಸೀಸ್).

    ಮಾನಸಿಕ ಖಿನ್ನತೆ; ನದಿಗೆ ಹಾರಿ ಸ್ವಾಮೀಜಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts