More

    ಭರತನಾಟ್ಯ ಪಾರಂಪರಿಕ ನೃತ್ಯಕಲೆ: ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿಕೆ

    ಮಂಡ್ಯ: ಭರತನಾಟ್ಯ ದಕ್ಷಿಣ ಭಾರತದ ಪಾರಂಪರಿಕ ನೃತ್ಯಕಲೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.
    ನಗರದ ಪಿಇಎಸ್ ರಂಗಮಂದಿರದಲ್ಲಿ ಚಿದಂಬರ ನಟೇಶ ನಾಟ್ಯಶಾಲೆ ಟ್ರಸ್ಟ್‌ನಿಂದ ಭಾನುವಾರ ಸಂಜೆ ಆಯೋಜಿಸಿದ್ದ ಚಿದಂಬರ ನೃತ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭರತಮನಿಯಿಂದ ರಚಿತಗೊಂಡ ಭರತನಾಟ್ಯ ಕಲೆಗಳು ವಿಶ್ವವಿಖ್ಯಾತಗೊಂಡಿವೆ. ಭರತನಾಟ್ಯ ಪದವು ಭರತ ಎಂಬ ಪದದಿಂದ ಕೂಡಿದೆ. ಭ ಎಂದರೆ ಭಾವ, ರ ಎಂದರೆ ರಾಗ, ತ ಎಂದರೆ ತಾಳ ಎಂದು ಅರ್ಥಸೂಚಿಸುತ್ತವೆ. ಭಾವ, ರಾಗ ಮತ್ತು ತಾಳಯುತವಾದ ನೃತ್ಯಕ್ಕೆ ಭರತನಾಟ್ಯವೆಂದು ಕರೆಯುವುದು ರೂಢಿಯಾಗಿದೆ ಎಂದು ನುಡಿದರು.
    ನಾಟ್ಯಕಲೆ ಮನರಂಜನೆಗಲ್ಲ. ಬದಲಿಗೆ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಪ್ರತಿಬಿಂಬಿಸುತ್ತವೆ. ಪಾಲಕರು ತಮ್ಮ ಮಕ್ಕಳಿಗೆ ಭರತನಾಟ್ಯ ಕಲಿಸುವ ಮೂಲಕ ಭಾರತೀಯ ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಪ್ರೇರಣೆಯಾಗಿದ್ದೀರಿ. ಮಕ್ಕಳ ಮಾತ್ರ ಭರತನಾಟ್ಯ ಮಾಡುತ್ತಿಲ್ಲ. ಸಭಾಂಗಣದಲ್ಲಿ ತುಂಬಿರುವ ಜನತೆ ಮತ್ತು ಪಾಲಕರು ಕೂಡ ಮಕ್ಕಳ ಹಾವಾ ಭಾವಗಳಿಗೆ ತಲೆದೂಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
    ಗ್ರಾಮೀಣ ಭಾಗದಲ್ಲಿ ಪಾಲಕರು ಮಕ್ಕಳಿಗೆ ಭರತನಾಟ್ಯ, ಸೃಜನಾತ್ಮಕ ಕಲೆಗಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವುದು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದ್ದು, ಉತ್ತಮ ಬೆಳೆವಣಿಗೆಗೆ ನೆರವಾಗಲಿದೆ. ನೃತ್ಯಕಲೆಯ ತರಬೇತಿ ಪಡೆದ ನೃತ್ಯಪಟುಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲೆಗೆ, ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರಲಿ. ನಿತ್ಯ ನಿರಂತರ ಅಭ್ಯಾಸ ಮಾಡಿದರೆ ಸಾಧನೆ ಮಾಡುವುದು ಸುಲಭವಾಗುತ್ತದೆ ಎಂದು ಕಿವಿಮಾತೇಳಿದರು.
    ಮೈಸೂರು ರಾಸವೃಂದ ನೃತ್ಯಶಾಲೆ ನಿರ್ದೇಶಕ ಡಾ.ರೋಹಿತಾ ಈಶ್ವರ್ ಮಾತನಾಡಿ, ನೃತಕಲೆ ಮನರಂಜನೆಯಲ್ಲ. ಕಲಾತಪಸ್ವಿಗಳ ಕಲಾ ಆರಾಧನೆಯಾಗಿದೆ. ಇಲ್ಲಿನ ನೃತ್ಯ ವಿದ್ಯಾರ್ಥಿಗಳು ಕಲಾತಪಸ್ವಿಗಳು, ಕಲಾಸೇವೆಯ ಪ್ರದರ್ಶನವಾಗಿದೆ. ಈ ಗಂಧರ್ವವೇಧ ಶಾಸ್ತ್ರವು ದೇವತಾ ಆರಾಧನೆಯಾಗಿದೆ. ನಟರಾಜನ ಆಹ್ವಾನೆಯಾಗಿದೆ. ನೃತ್ಯ ಕಲಿಯುವ ಪ್ರತಿ ಮಗುವು ಹೂವಿನಂತೆ. ಕಲಾ ಭಗವಂತನಿಗೆ ಅರ್ಪಣೆಗೊಳ್ಳುವ ಅರ್ಹತೆ ಪಡೆದುಕೊಳ್ಳುತ್ತಾರೆ. ತಮ್ಮನ್ನು ತಾವು ಸಮರ್ಪಿಸಿಕೊಳ್ಳುತ್ತಿತ್ತಾರೆ ಎಂದು ಆಶಿಸಿದರು.
    ಮನೋವೈದ್ಯ ಡಾ.ಸತ್ಯನಾರಾಯಣರಾವ್, ಟ್ರಸ್ಟ್‌ನ ನಿರ್ದೇಶಕಿ ಸುನೀತಾ ನಂದಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಸ್.ನಂದಕುಮಾರ್, ಮೃದಂಗವಾದಕ ಎಸ್.ಸುದರ್ಶನ್, ರೋಟರಿ ಜಿಲ್ಲಾ ಸಹಪಾಲಕ ಪ್ರಶಾಂತ್, ನಗರಸಭಾ ಸದಸ್ಯೆ ಆರ್.ಸೌಭಾಗ್ಯ, ಇಲವಾಲ ಗ್ರಾಪಂ ಸದಸ್ಯ ಕರೀಗೌಡ, ಕಲಾತಪಸ್ವಿ ಟ್ರಸ್ಟ್ ಕಾರ್ಯದರ್ಶಿ ಅನಿಲ್‌ಕುಮಾರ್ ಇತರರಿದ್ದರು. ಇದೇ ಸಂಧರ್ಭದಲ್ಲಿ ವಿದ್ಯಾರ್ಥಿಗಳು ನೃತ್ಯರೂಪಕಗಳ ಪ್ರದರ್ಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts