More

    ಸಾಮಾಜಿಕ ಜವಾಬ್ದಾರಿ ಕಲಿಸುವುದೇ ಶಿಕ್ಷಣ

    ಮೈಸೂರು: ಸಾಮಾಜಿಕ ಜವಾಬ್ದಾರಿಯನ್ನು ಕಲಿಸದ, ಸಮಾಜ ಮತ್ತು ಜನರ ಬಗ್ಗೆ ಕಾಳಜಿ ವಹಿಸದ, ನನ್ನವರೆನ್ನುವುದನ್ನು ಕಲಿಸದ ಶಿಕ್ಷಣ ಶಿಕ್ಷಣವೇ ಅಲ್ಲ ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಎಚ್.ವಿದ್ಯಾ ಹೇಳಿದರು.


    ರಮ್ಮನಹಳ್ಳಿಯ ಸಂತ ಜೋಸೆಫರ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆೆ ಆಯೋಜಿಸಿದ್ದ ಪದವೀಧರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ವ್ಯಕ್ತಿತ್ವವನ್ನು ಇನ್ನಷ್ಟು ಮತ್ತಷ್ಟು ರೂಪುಗೊಳಿಸಿಕೊಳ್ಳುವುದೇ ನಿಜವಾದ ಶಿಕ್ಷಣ.

    ಪದವಿ ಪಡೆದ ಯುವಜನರ ಜವಾಬ್ದಾರಿ ಹೆಚ್ಚಿದೆ. ಈ ಯಶಸ್ಸು ಬರೀ ನಿಮ್ಮ ಯಶಸ್ಸಷ್ಟೇ ಅಲ್ಲ. ನಿಮ್ಮ ತಂದೆ-ತಾಯಿ ಅವರ ಕನಸು, ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರ ಕರ್ತವ್ಯ. ಅದೆಲ್ಲವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿ, ನಿಮ್ಮ ಸಿರಿಮುಡಿಗೆ ಸ್ನಾತಕ ಪದವಿಯ ಕಿರೀಟ ತಂದು ಕೊಟ್ಟಿದ್ದಾರೆ ಎಂದರು.


    ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ಷಣ ಹೊತ್ತು ಮೈಮರೆತರೂ ಸ್ಪರ್ಧೆಯಿಂದಲೇ ಹೊರಗುಳಿಯಬೇಕಾಗುತ್ತದೆ. ನಿಮ್ಮ ಕಲಿಕೆಯಷ್ಟೇ ನೀವು ಮುಂದಿಡುವ ಒಂದೊಂದು ಹಂತದ ಜವಾಬ್ದಾರಿಯೂ ಮುಖ್ಯ. ಜೋಪಾನವಾಗಿ ಎಲ್ಲವನ್ನು ಖುಷಿಯಿಂದ ನಿರ್ವಹಿಸಿಕೊಂಡು ಮುಂದೆ ಸಾಗಿ, ಗೆಲುವು ಖಂಡಿತ ನಿಮ್ಮದಾಗುತ್ತದೆ ಎಂದರು.


    ಸಮಾಜಕ್ಕೆ ಉತ್ತಮ ಪ್ರಜೆಯಾಗಿ, ತಂದೆ-ತಾಯಿಗೆ ಒಳ್ಳೆಯ ಮಕ್ಕಳಾಗಿ, ನಿಮ್ಮ ಮುಂದಿನ ಕರ್ತವ್ಯ ನಿರ್ವಹಿಸಿಕೊಂಡು ಹೋಗಬೇಕಿದೆ. ಈ ಎಲ್ಲ ಹೊಣೆಗಾರಿಕೆಯನ್ನು ಹೊತ್ತು ನಿಮ್ಮಲ್ಲಿರುವ ಅಡೆತಡೆಗಳನ್ನು ತೊಡೆದು ಹಾಕುತ್ತಾ ಮುಂದೆ ಸಾಗಬೇಕಿದೆ. ನಿಮ್ಮೆಲ್ಲರ ಕನಸುಗಳು ಕೈಗೂಡಲಿ ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.


    ಎಂಡಿಇಎಸ್ ಕಾರ್ಯದರ್ಶಿ ರೆ.ಫಾ.ವಿಜಯ್‌ಕುಮಾರ್, ಆಡಳಿತಾಧಿಕಾರಿ ರೆ.ಫಾ. ಅವಿನಾಶ್, ಖಜಾಂಚಿ ರೆ.ಫಾ.ಮದಲೈ ಮುತ್ತು, ಸಿಇಒ ಸೆಬಿ ಮಾವೇಲಿ, ಪ್ರಾಂಶುಪಾಲ ಡಾ.ಪೃಥ್ವಿ ಎಸ್.ಶಿರಹಟ್ಟಿ, ಸಂತ ಜೋಸೆಫರ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕ್ರಿಸ್ಟಿಯಾನ ಫೆರೇರಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts