More

    ದೋರನಹಳ್ಳಿಯಲ್ಲಿ ಗುಡುಗಿನೊಂದಿಗೆ ಸುರಿದ ಮಳೆ ವೇಳೆ ಅವಘಡ ಸಿಡಿಲಿನಿಂದ ಒಡೆದ ದೇವಸ್ಥಾನದ ಶಿಖರ


    ದೋರನಹಳ್ಳಿ(ಯಾದಗಿರಿ): ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಗುಡುಗಿನೊಂದಿಗೆ ಸುರಿದ ಮಳೆ ವೇಳೆ ೮೦೦ ವರ್ಷದ ಐತಿಹಾಸಿಕ ಶ್ರೀ ಪರಮಾನಂದೇಶ್ವರ ದೇವಸ್ಥಾನದ ಶಿಖರಕ್ಕೆ ಸಿಡಿಲು ಬಡಿದಿದ್ದು, ಮೇಲ್ಭಾಗದಿಂದ ಕೆಳಭಾಗದವರೆಗೆ ಒಡೆದಿದೆ. ದೇವಸ್ಥಾನ ಒಳಾಂಗಣದಲ್ಲಿ ಹೊರಸಿನಲ್ಲಿ ಮಲಗಿದ್ದ ಅರ್ಚಕ ಪರಮಾನಂದ ಹೂಗಾರ ಅವರ ವೃದ್ಧ ತಾಯಿ ಚಂದಮ್ಮ ಅದೃಷ್ಟವಶಾತ್ ಬಚಾವ್ ಆಗಿದ್ದು, ಸಿಡಿಲು ಶಿಖರ ಮತ್ತು ದೇಗುಲ ಎಡಭಾಗದ ಸಿಂಹದ ಶಿಲಾಮೂರ್ತಿಗೆ ತಾಗಿದ್ದರಿಂದ ಚೂರು ಚೂರಾಗಿದೆ. ಸಿಡಿಲು ಬಿz್ದÁಗ ಪ್ರಖರವಾದ ಬೆಂಕಿ ಕಂಡು P್ಷÀಣದಲ್ಲೇ ಮಾಯವಾಗಿ ಕೆಲಕಾಲ ಹೊಗೆ ಆವರಿಸಿತು. ಆದರೆ ಯಾವುದೇ ಜೀವಹಾನಿ ಆಗಿಲ್ಲ ಎಂದು ಅರ್ಚಕ ಪರಮಾನಂದ ತಿಳಿಸಿದ್ದಾರೆ. ವಿಷಯ ತಿಳಿಯುತ್ತಲೇ ಗ್ರಾಮದ ಭಕ್ತರು ದೇವಸ್ಥಾನದ ಕಡೆ ಧಾವಿಸಿ ಸಿಡಿಲಿನಿಂದ ಒಡೆದ ಶಿಖರ ಮತ್ತು ಸಿಂಹದ ಮೂರ್ತಿ ವೀಕ್ಷಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts