

ಬೆಂಗಳೂರು: ನಟ ರಾಜ್.ಬಿ. ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವು ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ನವೆಂಬರ್ 24ರಂದು ಬಿಡುಗಡೆಯಾಗಿದ್ದ ಈ ಚಿತ್ರವು ವಿಮರ್ಶಕರಿಂದ ಮೆಚ್ಚುಗೆ ಗಳಿಸಿತ್ತು.
ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ನಿರ್ಮಾಣದ ಚೊಚ್ಚಲ ಚಿತ್ರ ಸ್ವಾತಿ ಮುತ್ತಿನ ಮಳೆ ಹನಿ ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದ್ದು, ಚಿತ್ರ ಡಿಸೆಂಬರ್ 29ರಂದು ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗಲಿದೆ.
ರಾಜ್ ಬಿ ಶೆಟ್ಟಿ ಅಭಿನಯದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ರಿಲೀಸ್ ಆಗಿ ಒಂದು ತಿಂಗಳು ಕಳೆದು ಹೋಗಿದೆ. ಕಳೆದ ತಿಂಗಳು ನವೆಂಬರ್-24 ರಂದು ಚಿತ್ರ ಹಲವಡೆ ರಿಲೀಸ್ ಆಗಿತ್ತು. ಒಳ್ಳೆ ವಿಷಯವನ್ನ ಇಟ್ಟುಕೊಂಡು ಬಂದಿದ್ದ ಈ ಚಿತ್ರ ಕಮರ್ಷಿಯಲ್ ಸಿನಿಮಾ ಏನೂ ಆಗಿರಲಿಲ್ಲ. ಆದರೆ ಇದು ಕಂಟೆಂಟ್ ಬೇಸ್ ಚಿತ್ರವೇ ಆಗಿತ್ತು.
ಸ್ವಾತಿ ಮುತ್ತಿನ ಮಳೆ ಹನಿಯೇ ಶೀಘ್ರದಲ್ಲಿಯೇ ಸ್ಟ್ರೀಮಿಂಗ್ ಆಗುತ್ತಿದೆ. ಇದಕ್ಕಾಗಿಯೇ ಡಿಸೆಂಬರ್-29 ಡೇಟ್ ಫಿಕ್ಸ್ ಆಗಿದೆ. ಈ ಮೂಲಕ ಸಿನಿಮಾ ಓಟಿಟಿ ಪ್ರಿಯರಿಗೆ ಒಂದು ಹೊಸ ಅನುಭವ ಕೂಡ ನೀಡಲಿದೆ.