ಅಡುಗೆ ಮನೆಯಲ್ಲಿ ಶೂ ಧರಿಸಿ ಆಹಾರ ಸೇವಿಸಿದ ರಾಹುಲ್; ಇದು ಜಾಟ್​ ಸಮುದಾಯಕ್ಕೆ ಆದ ಅವಮಾನ ಎಂದ ನೆಟ್ಟಿಗರು

Rahul Gandhi
Published on

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು (ಡಿಸೆಂಬರ್ 27) ಹರಿಯಾಣ ಜಜ್ಜರ್​ನಲ್ಲಿರುವ ವೀರೇಂದ್ರ ಆರ್ಯ ಅಖಾಡದಲ್ಲಿ ಖ್ಯಾತ ಕುಸ್ತಿಪಟುಗಳಾದ ಬಜರಂಜ್​ ಪೂನಿಯಾ ಸೇರಿದಂತೆ ಹಲವರನ್ನು ಭೇಟಿಯಾಗಿ ಸಂವಾದ ನಡೆಸಿದ್ದಾರೆ.

ಭಾರತದ ಕುಸ್ತಿ ಫೆಡರೇಶನ್ (WFI)ನ ವಿವಾದದ ನಡುವೆಯೇ ರಾಹುಲ್​​​​​​​ ಕುಸ್ತಿಪಟುಗಳೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ರಾಹುಲ್ ಬಜರಂಗ್ ಪೂನಿಯಾ ಜೊತೆ ಅಖಾಡದಲ್ಲಿ ಸೆಣಸಾಡುತ್ತಿದ್ದ ದೃಶ್ಯ ಕಂಡುಬಂತು. ಆದರೆ, ಈ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ರಾಹುಲ್​ ಗಾಂಧಿ ಕ್ಷಮೆಯಾಚಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

ವೀರೇಂದ್ರ ಆರ್ಯ ಆಖಾಡದಲ್ಲಿ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದ ಬಳಿಕ ಅಲ್ಲಿನ ಅಡುಗೆ ಮನೆಗೆ ಭೇಟಿ ನೀಡಿದ ರಾಹುಲ್​ ಅಲ್ಲಿನ ವಿಶೇಷ ಆಹಾರವನ್ನು ಸೇವಿಸಿ ಆನಂದಿಸಿದ್ದಾರೆ. ಆದರೆ, ಅಡುಗೆ ಮನೆಗೆ ಶೂ ಹಾಕಿ ಪ್ರವೇಶಿಸಿರುವ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ರಾಹುಲ್​ ಗಾಂಧಿ ಶೂ ಧರಿಸಿ ಅಡುಗೆ ಮನೆ ಪ್ರವೇಶಿಸುವ ಮೂಲಕ ಜಾಟ್ ಸಮುದಾಯವನ್ನು ಅವಮಾನಿಸಿದ್ದಾರೆ. ಮೊದಲಿಗೆ ಜಾಟ್​ ಸಮುದಾಯಕ್ಕೆ ಸೇರಿದ ಉಪರಾಷ್ಟ್ರಪತಿ ಧನಕರ್​ ಅವರನ್ನು ಅವಮಾನಿಸಿದ ಇವರು ಶೂ ಧರಿಸಿ ಅಡುಗೆ ಮನೆ ಪ್ರವೇಶಿಸುವ ಮೂಲಕ ಮತ್ತೊಮ್ಮೆ ಅಗೌರವ ತೋರಿದ್ದಾರೆ. ಯಾವ ಹಿಂದೂ ಅಡುಗೆ ಮನೆಯಲ್ಲಿ ಶೂ ಧರಿಸಿ ಊಟ ಮಾಡುತ್ತಾರೆ. ಇದು ದೇವಿ ಅನ್ನಪೂರ್ಣೇಶ್ವರಿಗೆ ಮಾಡಿದ ಅಪಮಾನವಲ್ಲವೇ. ಭಾರತ್​ ತೋಡೋಒ ಯಾತ್ರೆಯಲ್ಲಿ ವಿವಾದಿತ ಪಾದ್ರಿ ಜಾರ್ಜ್ ಪೊನ್ನಯ್ಯನ ಮಾತನ್ನು ಕೇಳಿ ಈ ರೀತಿ ಮಾಡಿದ್ದಾರಾ ಎಂದು ಹಲವರು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net