ಬೆಂಗಳೂರು: ಸ್ವರಶ್ರೀ ಸಂಗೀತ ಶಾಲೆಯು ಗುರುವಾರ (ಮೇ 1) ಸ್ವರಶ್ರೀ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿದ್ದು ಸಂಗೀತ ಕ್ಷೇತ್ರದ ವಿವಿಧ ಸಾಧಕರಿಗೆ ಸ್ವರಶ್ರೀ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿದೆ.

ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಮಧ್ಯಾಹ್ನ 3ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ನಂತರ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಚಿಂತಕರಾದ ಶ್ರೀದೀನೇಶ ಗುರೂಜಿ ಸಾನ್ನಿಧ್ಯ ವಹಿಸಲಿದ್ದು, ವಿದುಷಿ ಡಾ.ಲಕ್ಷ್ಮಿ ಬಿ.ರಾವ್, ಗಾಯಕಿ ಲೀಲಾವತಿ ಕುಲಕರ್ಣಿ, ಕವಿ ಮುಕುಂದ ಗಂಗೂರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಹಿಂದುಸ್ಥಾನಿ ಗಾಯಕಿ ಸ್ರೋತಸ್ವಿನಿಗೆ ಸ್ವರಶ್ರೀ ನಾದ ಸರೋಜ, ಮೇಧಾ ದತ್ತಾತ್ರೇಯಗೆ ಸ್ವರಶ್ರೀ ನಾದ ಪದ್ಮ, ಅರವಿಂದ ದೇಶಪಾಂಡೆಗೆ ಸ್ವರಶ್ರೀ ವೇದ, ಸಂಹಿತ್ ರಾಜ್, ಹರೀಶ್ ಕರಣಮ್‌ಗೆ ಸ್ವರಶ್ರೀ ಮೋದ, ವೈಭವಿ ವೆಂಕಟೇಶ್‌ಗೆ ಸ್ವರಶ್ರೀ ವಿಶೇಷ ಹಾಗೂ ಅಖಿಲ ಕುರಂದವಾಡಗೆ ಸ್ವರಶ್ರೀ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಬಾಳು ಬಂಗಾರವಾಗಿಸುವ ತದಿಗೆ ಗೌರಿ ವ್ರತ: ಹಿಂದು ಶಾಸ್ತ್ರದಲ್ಲಿ ಅಕ್ಷಯ ತೃತೀಯ ಮಹತ್ವ